ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಜತೆ ಜತೆಯಾಗಿ ಅಖಾಡಕ್ಕೆ ಇಳಿಯುವುದಾಗಿ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಘೋಷಣೆ ಮಾಡಿದ ಬೆನ್ನಲ್ಲೇ, ಮಾಜಿ ಸಿಎಂ ಕುಮಾರಸ್ವಾಮಿ ಯುವ ನಾಯಕರಿಗೆ ರಾಜಕೀಯದ ಪಾಠ ಹೇಳಿದ್ದಾರೆ.
ನಮ್ಮ ಕುಟುಂಬದ ವಿರುದ್ಧ ಕೌಟುಂಬಿಕ ರಾಜಕಾರಣ ಎಂದು ಟೀಕೆಗಳು ಬರುತ್ತಲೇ ಇವೆ. ಆದರೆ, ಕೌಟುಂಬಿಕ ರಾಜಕಾರಣದಿಂದ ಯಾರೂ ಕೂಡ ಹೊರತಾಗಿಲ್ಲ. ಹೀಗಾಗಿ ಟೀಕೆಗಳಿಗೆ ಕಿವಿಗೊಡಬೇಡಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್, ಹಾಸನ ಸಂಸದ ಪ್ರಜ್ವಲ್‍ಗೆ ಹೆಚ್‍ಡಿಕೆ ಕಿವಿಮಾತು ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ವರ್ಗಾವಣೆ ಹೆಸರಲ್ಲಿ ಹಣ ಲೂಟಿ ಹೊಡೆದಿದ್ದಾನಾ? ಆದರೆ ಇವತ್ತು ರಾಜ್ಯದಲ್ಲಿ ಏನು ನಡೆಯುತ್ತಿದೆ? ಸಿಎಂ ಬಿಎಸ್‍ವೈ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಗಾಗಿ ಪಕ್ಷ ಬಲವರ್ಧನೆ ಹಿನ್ನೆಲೆಯಲ್ಲಿ ನಡೆದ ತಾಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಹೆಚ್‍ಡಿಕೆ, ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಟೀಕೆ ಮಾಡುತ್ತಾರೆ. ಆದರೆ, ಕೌಟುಂಬಿಕ ರಾಜಕಾರಣದಿಂದ ಯಾರೂ ಹೊರತಾಗಿಲ್ಲ. ಈ ರೀತಿಯ ಟೀಕೆಗಳಿಗೆ ಕಿವಿಗೊಡದಂತೆ ನಿಖಿಲ್ ಮತ್ತು ಪ್ರಜ್ವಲ್? ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ಯುವಕರಿಗೆ ಶಕ್ತಿ ನೀಡಲು ಸಿದ್ಧವಿದೆ. ಎಲ್ಲ ಜಿಲ್ಲೆಗಳ ಯುವ ಜೆಡಿಎಸ್ ಅಧ್ಯಕ್ಷರ ಸಭೆ ಕರೆಯಿರಿ. ನಂತರ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ. ಯುವ ಅಧ್ಯಕ್ಷರು ಕೆಲಸ ಮಾಡಲು ಟಾರ್ಗೆಟ್ ನೀಡಿ. ಪಕ್ಷದ ಹೊಸ ಕಾರ್ಯದ ರೂಪುರೇಷೆ ಮಾಡಿ ಎಂದು ಯುವ ನಾಯಕರಿಗೆ ರಾಜಕಾರಣದ ಟಿಪ್ಸ್ ನೀಡಿದ್ದಾರೆ.
ಬೈ ಎಲೆಕ್ಷನ್‍ಗಳಲ್ಲಿ ಜೆಡಿಎಸ್ ಸೋತಿರಬಹುದು. ಸೋತ ನಂತರ ಸಿದ್ದರಾಮಯ್ಯ ಹೇಳಿದ್ದು ಗಮನಿಸಿದ್ದೇನೆ. ನಾವು ಸೋಲಲು ಜೆಡಿಎಸ್ ಕಾರಣ ಎಂದಿದ್ದಾರೆ. ಅಂದರೆ ಯಾವುದೇ ಪಕ್ಷವನ್ನು ಸೋಲಿಸುವ ಶಕ್ತಿ ನಮಗೆ ಇದೆ ಅಂತಾ ಇದರ ಅರ್ಥ. ಹೀಗಾಗಿ ಕಾರ್ಯಕರ್ತರು ಮುಂದಿನ ಚುನಾವಣೆಗಳಲ್ಲಿ ನಾವು ನಮ್ಮ ಶಕ್ತಿ ತೋರಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








