ಇಮ್ರಾನ್‌ಗೆ ಪತ್ರ ಬರೆದು 26/11 ದಾಳಿಯ ದುಷ್ಕರ್ಮಿಗಳ ವಿರುದ್ಧ ಪಾಕಿಸ್ತಾನ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಯುರೋಪ್ ಸಂಸದರು EU Parliamentarians Imran
ಬೆಲ್ಜಿಯಂ, ನವೆಂಬರ್29: 26/11 2008 ರ ಮುಂಬೈ ಭಯೋತ್ಪಾದಕ ದಾಳಿಯನ್ನು ಆಯೋಜಿಸಿದವರಿಗೆ ಶಿಕ್ಷೆ ವಿಧಿಸದಿದ್ದಕ್ಕಾಗಿ ಯುರೋಪಿಯನ್ ಪಾರ್ಲಿಮೆಂಟ್ (ಎಂಇಪಿ) ಯ ಇಬ್ಬರು ಸದಸ್ಯರು ಪಾಕಿಸ್ತಾನವನ್ನು ಟೀಕಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ. EU Parliamentarians Imran

ನವೆಂಬರ್ 24 ರಂದು ಖಾನ್ ಅವರಿಗೆ ಬರೆದ ಪತ್ರದಲ್ಲಿ, ಪೋಲಿಷ್ ಎಂಇಪಿ ರಿಸ್ಜಾರ್ಡ್ ಜಾರ್ನೆಕಿ ಮತ್ತು ಇಟಾಲಿಯನ್ ಎಂಇಪಿ ಫುಲ್ವಿಯೊ ಮಾರ್ಟುಸಿಯೆಲ್ಲೊ ಅವರು, 2008 ರಲ್ಲಿ ಮುಂಬೈನಲ್ಲಿ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ ವಿರುದ್ಧ ಪಾಕಿಸ್ತಾನ ಯಾವ ಕ್ರಮ ಕೈಗೊಂಡಿದೆ ಎಂದು ತಿಳಿಯಲು ಬಯಸಿದ್ದಾರೆ.
ದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಏನು ಕ್ರಮ ಕೈಗೊಂಡಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ನವೆಂಬರ್ 26, 2008 ರಂದು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಹತ್ತು ಭಯೋತ್ಪಾದಕರು ಮುಂಬೈನಾದ್ಯಂತ ನಾಲ್ಕು ದಿನಗಳ ಕಾಲ ಶೂಟಿಂಗ್ ಮತ್ತು ಬಾಂಬ್ ದಾಳಿಗಳನ್ನು ನಡೆಸಿದ್ದವು.
ಪಾಕ್ ಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿಂದ 300 ಮಿಲಿಯನ್ ಯುಎಸ್ಡಿ ಸಾಲ
ಈ ದಾಳಿಯಲ್ಲಿ ವಿದೇಶಿಯರು ಸೇರಿದಂತೆ ಕನಿಷ್ಠ 166 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಭೀಕರ ದಾಳಿಯಲ್ಲಿ, ಒಂಬತ್ತು ಭಯೋತ್ಪಾದಕರು ಸಾವನ್ನಪ್ಪಿದು ಬದುಕುಳಿದ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು 2012 ರಲ್ಲಿ ಸೆರೆಹಿಡಿದು ಪುಣೆಯ ಯೆರ್ವಾಡಾ ಕೇಂದ್ರ ಕಾರಾಗೃಹದಲ್ಲಿ ಮರಣದಂಡನೆ ವಿಧಿಸಲಾಯಿತು. ನವೆಂಬರ್ 11, 2012 ರಂದು ಪುಣೆಯ ಯೆರಾವಾಡಾ ಜೈಲಿನಲ್ಲಿ ಕಸಬ್ ನನ್ನು ಗಲ್ಲಿಗೇರಿಸಲಾಯಿತು.
ಪಾಕಿಸ್ತಾನದ ಅಧಿಕಾರಿಗಳು ಆರೋಪಗಳನ್ನು ನಿರಾಕರಿಸುತ್ತಲೇ ಇದ್ದಾರೆ ಮತ್ತು ಭಾರತ ಹಂಚಿಕೊಂಡಿರುವ ಅನೇಕ ದಸ್ತಾವೇಜುಗಳ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಈ ವರ್ಷದ ಮೇ ತಿಂಗಳಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಹುತಾತ್ಮ ಎಂದು ಶ್ಲಾಘಿಸಿದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರಿಗೆ ಇಬ್ಬರು ಎಂಇಪಿಗಳು ಭಯೋತ್ಪಾದನೆ ಎಂದರೆ ರಾಜಕೀಯ ಅಥವಾ ಸೈದ್ಧಾಂತಿಕ ಉದ್ದೇಶಗಳಿಗೆ ನಾಗರಿಕರ ವಿರುದ್ಧ ಹಿಂಸಾಚಾರ ಮತ್ತು ಬೆದರಿಕೆಗಳನ್ನು ಕಾನೂನುಬಾಹಿರವಾಗಿ ಬಳಸುವುದು ಎಂದು ಹೇಳಿದ್ದಾರೆ.

ಯುರೋಪಿಯನ್ ರಾಜಕಾರಣಿಗಳಾಗಿ, ನಾವು ಭಯೋತ್ಪಾದನೆ ಮತ್ತು ಉಗ್ರಗಾಮಿ ಹಿಂಸಾಚಾರದ ವಿರುದ್ಧ ಹೋರಾಡಲು ಬದ್ಧರಾಗಿದ್ದೇವೆ. ಭಯೋತ್ಪಾದನೆಯನ್ನು ಖಂಡಿಸುವ ಮತ್ತು ಅಂತಹ ಕ್ರಮಗಳನ್ನು ಮಾಡುವವರನ್ನು ಸರಿ ದಾರಿಗೆ ತರುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ.
ಈ ಹಿಂಸಾತ್ಮಕ ಕೃತ್ಯಗಳನ್ನು ಖಂಡಿಸುವುದು ಮುಖ್ಯ ಎಂದು
ಜಾರ್ನೆಕಿ ಮತ್ತು ಮಾರ್ಟುಸ್ಸಿಲ್ಲೊ ಅವರು ಖಾನ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶೀತದ ಪರಿಣಾಮವನ್ನು ಕಡಿಮೆ ಮಾಡುವ ಅಶ್ವಗಂಧ ಚಹಾ ಸೇವಿಸುವ ಮೊದಲು ತಿಳಿದಿರಬೇಕಾದ ವಿಷಯಗಳು https://t.co/9fbsO5S2ww
— Saaksha TV (@SaakshaTv) November 28, 2020
ಆಯುಷ್ಮಾನ್ ಭವ – ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರಿಂದ ಸಾಕ್ಷಾಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯೋಗಾಸನದ ಬಗ್ಗೆ ಮಾಹಿತಿ #yoga#Kannada#yogateacherhttps://t.co/pRB58lu6J7
— Saaksha TV (@SaakshaTv) November 25, 2020








