ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ ವ್ಯಕ್ತಿ ಶವಗಾರದಲ್ಲಿ ಎಚ್ಚರಗೊಂಡು ಕಿರುಚಿದಾಗ ! woke up morgue
ಕೀನ್ಯಾ, ನವೆಂಬರ್30: ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಪ್ರಕರಣವೊಂದರಲ್ಲಿ, ವೈದ್ಯರು ಮೃತಪಟ್ಟಿದ್ದಾನೆ ಎಂದು ಘೋಷಿಸಲ್ಪಟ್ಟ ಕೀನ್ಯಾದ ವ್ಯಕ್ತಿಯೊಬ್ಬ ಶವಗಾರದಲ್ಲಿ ಎದ್ದು ಕೂತ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿಗಳು ಅವನ ದೇಹವನ್ನು ಎಂಬಾಮಿಂಗ್ ಪ್ರಕ್ರಿಯೆ ನಡೆಸಲು ಮತ್ತು ರಕ್ತವನ್ನು ಹೊರಹಾಕಲು ತಯಾರಿ ನಡೆಸುತ್ತಿದ್ದಾಗ ಆತನಿಗೆ ಎಚ್ಚರವಾಗಿದೆ. woke up morgue

32 ವರ್ಷದ ಪೀಟರ್ ಕಿಗೆನ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿಗೆ ಪ್ರಜ್ಞೆ ಮರಳಿ ಬಂದಿದ್ದು, ಶವಗಾರದ ಒಳಗೆ ಆತ ಕಾಲು ನೋವು ಎಂದು ಕಿರುಚಲು ಪ್ರಾರಂಭಿಸಿದ್ದಾನೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಮೃತದೇಹ ಕೊಳೆಯದಂತೆ ಸುರಕ್ಷಿತವಾಗಿಡಲು ಆತನ ಬಲ ಕಾಲನ್ನು ಸೀಳಿ ಫಾರ್ಮಾಲಿನ್ ತುಂಬಿದ್ದರು.
ವರದಿಗಳ ಪ್ರಕಾರ, ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿದ್ದ ಕಿಗೆನ್ ನನ್ನು ಅತನ ಕುಟುಂಬವು ಕೆರಿಚೊದ ಕಪ್ಲಾಟೆಟ್ ಆಸ್ಪತ್ರೆಗೆ ಕರೆದೊಯ್ಯಿತು. ಆದರೆ, ಕಿಗೆನ್ ಸಹೋದರನಿಗೆ ಮತ್ತು ಕುಟುಂಬಕ್ಕೆ ಆತ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ನನ್ನ ಸಹೋದರನ ದೇಹವನ್ನು ಶವಗಾರಕ್ಕೆ ಸ್ಥಳಾಂತರಿಸುವ ಮೊದಲು ನರ್ಸ್ ಮೋರ್ಚರಿ ಅಟೆಂಡೆಂಟ್ ಗೆ ಕರೆದೊಯ್ಯಲು ಒಂದು ದಾಖಲೆಯನ್ನು ನನಗೆ ಹಸ್ತಾಂತರಿಸಿದರು ಎಂದು ಕಿಗೆನ್ ಸಹೋದರ ಸ್ಥಳೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕಿಗೆನ್ ಮೃತಪಟ್ಟಿರುವುದಾಗಿ ಘೋಷಿಸಿದ ನಂತರ, ಅವನ ದೇಹವನ್ನು ತಕ್ಷಣ ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಯಿತು. ಕೀನ್ಯಾದ ಆಸ್ಪತ್ರೆಯ ನಿಯಮಗಳ ಪ್ರಕಾರ, ಮೃತದೇಹವನ್ನು ಕೂಡಲೇ ನೀಡುವುದಿಲ್ಲ. ಶವಗಾರದಲ್ಲಿ ಮೃತದೇಹವನ್ನು ಇಟ್ಟು ಕೆಲವೊಂದು ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.
ಅದರಂತೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿಗಳು ಎಂಬಾಮಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದರು.
ಎಂಬಾಮಿಂಗ್ ಮಾಡುವ ಪ್ರಕ್ರಿಯೆಗೆ ಮುಂಚಿತವಾಗಿ ಸಿಬ್ಬಂದಿ ಅವನ ದೇಹದಿಂದ ರಕ್ತವನ್ನು ಹೊರಹಾಕಲು ತಯಾರಿ ನಡೆಸುತ್ತಿದ್ದಾಗ, ಆತ ಜೀವಂತವಾಗಿರುವುದು ತಿಳಿದು ಬಂದಿದೆ.
ಕಿಗೆನ್ ಗೆ ಪ್ರಜ್ಞೆ ಮರಳಿ ನೋವಿನಿಂದ ಆತ ಅಳಲು ಪ್ರಾರಂಭಿಸುತ್ತಿದ್ದಂತೆ, ಸತ್ತ ವ್ಯಕ್ತಿಗೆ ಮತ್ತೆ ಜೀವ ಬಂದಿದೆ ಎಂದು ಭಾವಿಸಿ ಆಸ್ಪತ್ರೆ ಸಿಬ್ಬಂದಿಗಳು ಕಿರುಚುತ್ತಾ ಓಡಿಹೋದರು.
ಆಘಾತಕಾರಿ ಘಟನೆಯ ನಂತರ, ಕಿಗೆನ್ ನನ್ನು ಮತ್ತೆ ಆಸ್ಪತ್ರೆಯ ಅಪಘಾತ ವಿಭಾಗಕ್ಕೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.
ಮೋರ್ಟಿಷಿಯನ್ ನನ್ನನ್ನು ಶವಗಾರಕ್ಕೆ ಕರೆದನು. ಕಿಗೆನ್ ಚಲನೆ ಮಾಡುತ್ತಿರುವುದನ್ನು ನಾವು ನೋಡಿದೆವು. ನಮಗೆ ಆಘಾತವಾಯಿತು. ಇನ್ನೂ ಜೀವಂತವಾಗಿರುವ ವ್ಯಕ್ತಿಯನ್ನು ಅವರು ಶವಾಗಾರಕ್ಕೆ ಹೇಗೆ ಸೇರಿಸಿದರು ಎಂದು ನಮಗೆ ಅರ್ಥವಾಗಲಿಲ್ಲ ಎಂದು ಕಿಗೆನ್ ಸಹೋದರ ಹೇಳಿದರು.

ಕಿಗೆನ್ ತಾನು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿರುವುದು ನಂಬಲು ಸಾಧ್ಯವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದಾನೆ.
ಈಗ ಏನಾಯಿತು ಎಂದು ನನಗೆ ನಂಬಲು ಸಾಧ್ಯವಿಲ್ಲ. ನಾನು ಮೃತಪಟ್ಟಿರುವುದಾಗಿ ಅವರು ಹೇಗೆ ನಂಬಿದರು? ನಾನು ಪ್ರಜ್ಞೆಯನ್ನು ಮರಳಿ ಪಡೆದಾಗ ಎಲ್ಲಿದ್ದೇನೆಂದು ನನಗೆ ತಿಳಿದಿರಲಿಲ್ಲ. ಆದರೆ ನನ್ನ ಜೀವವನ್ನು ಉಳಿಸಿಕೊಂಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಜೀವನದುದ್ದಕ್ಕೂ ನಾನು ದೇವರಿಗೆ ಸೇವೆ ಸಲ್ಲಿಸುತ್ತೇನೆ ಎಂದು ಕಿಗೆನ್ ಹೇಳಿದ್ದಾನೆ.
ವರದಿಗಳ ಪ್ರಕಾರ, ಅವರ ಕುಟುಂಬವು ಈಗ ಆಸ್ಪತ್ರೆಯ ನಿರ್ಲಕ್ಷ್ಯದ ಆರೋಪ ಮಾಡುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1333092477604040705?s=19
https://twitter.com/SaakshaTv/status/1331431538525831168?s=19








