ಲಾಕ್ ಡೌನ್ ಬಳಿಕ ಚೇತರಿಕೆ ಕಾಣುತ್ತಿದೆ ಕನ್ನಡ ಸಿನಿಮಾ ರಂಗ : ಈ ವಾರ ಮತ್ತೊಂದು ಸಿನಿಮಾ ರಿಲೀಸ್..!
ಲಾಕ್ ಡೌನ್ ಬಳಿಕ ಕ್ರಮೇಣ ಎಲ್ಲಾ ಉದ್ಯಮಗಳು ಚೇತರಿಸಿಕೊಳ್ತಿದೆ. ಅದರಂತೆ ಥಿಯೇಟರ್ ಗಳು ಮತ್ತೆ ಪುನರಾರಂಭವಾಗಿದ್ದು, ಚಿತ್ರೋದ್ಯಮವು ಸುಧಾರಣೆ ಕಾಣ್ತಿದೆ. ಒಂದೊಂದೇ ಹೊಸ ಸಿನಿಮಾಗಳು ಮತ್ತೆ ಥಿಯೇಟರ್ ಗಳತ್ತ ಮುಖ ಮಾಡ್ತಿವೆ. ಎಲ್ಲಾ ಚಿತ್ರರಂಗದಂತೆಯೇ ಕನ್ನಡ ಸಿನಿಮಾ ಇಂಡಸ್ಟ್ರಿ ಸಹ ಮತ್ತೆ ಚೇತರಿಸಿಕೊಳ್ಳುತ್ತಿದೆ. ಇನ್ನೂ ಈ ವಾರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಸಾಧನೆ ಶಿಖರ’ ಸಿನಿಮಾ ಇದೇ ವಾರ ತೆರೆಗಪ್ಪಳಿಸಲಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಅಭಿಮಾನಿಗಳಿಗೆ ನಿರಾಸೆ: ‘ಪೊಗರು’ ರಿಲೀಸ್ ಅಪಡೇಟ್..!
ಅಂದ್ಹಾಗೆ ‘ಸಾಧನೆ ಶಿಖರ’ ಸಿನಿಮಾ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಡಲಿದೆ. ಬಾಲಕಾರ್ಮಿಕ ಪದ್ದತಿ, ಜೀತದಾಳು ಪದ್ದತಿ ಹಾಗೂ ಮಹಿಳಾ ಶಿಕ್ಷಣದ ಕುರಿತು ಮಹತ್ವದ ಸಂದೇಶ ಸಾರುವ ಕಥೆ ಹೊಂದಿರುವ ಸಿನಿಮಾ ಇದಾಗಿದೆ. ಸಿನಿಮಾಗೆ ಎನ್ ಈರಣ್ಣ ಮಧುಗಿರಿ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಚಿತ್ರದಲ್ಲಿ ಶಂಕನಾದ ಆಂಜಿ, ಬಿರಾದರ್, ಅಪೂರ್ವ , ಸೇರಿದಂತೆ ಹಲವರ ತಾರಾಬಳವಿದೆ.
ಇದೇ ವಾರ ಸಿಲ್ವರ್ ಸ್ಕ್ರೀನ್ ಗೆ ಕನ್ನಡದ ಮತ್ತೊಂದು ಹೊಸ ಸಿನಿಮಾ ಎಂಟ್ರಿ : ಯಾವುದು..!
ಇತ್ತೀಚೆಗಷ್ಟೇ ಯಜ್ಞಾಶೆಟ್ಟಿ ಅಭಿನಯದ ಆಕ್ಟ್ 1978 ಸಿನಿಮಾ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ಹೊಸ ಹೊಸ ಸಿನಿಮಾಗಳು ರಿಲೀಸ್ ಗೆ ಸಜ್ಜಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








