ಮಡಿಕೇರಿ: ಕಟ್ಟಡದ ಸೆಂಟ್ರಿಂಗ್ ಕೆಲಸಕ್ಕೆ ಬಳಸುವ ಕಬ್ಬಿಣದ ಹಲಗೆ ಕಳವು ಪ್ರಕರಣಕ್ಕೆ ಸಂಬಂಧ ದಕ್ಷಿಣ ಕನ್ನಡದ ಪುತ್ತೂರಿನ ಇಬ್ಬರನ್ನು ವಿರಾಜಪೇಟೆ ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ.
ಪುತ್ತೂರಿನ ಆಲಂಗಾರ್ ಗ್ರಾಮದ ನಿವಾಸಿ ಉಮೇಶ್ ಪೂಜಾರಿ ಮತ್ತು ರಾಮಪುಂಜ ಗ್ರಾಮದ ರವಿ ಪೂಜಾರಿ ಬಂದಿತ ಆರೋಪಿಗಳು. ಕಟ್ಟಡ ಗುತ್ತಿಗೆ ಪಡೆದು ಅಮ್ಮತ್ತಿ ಕಾವಾಡಿ ಗ್ರಾಮದಲ್ಲಿ ಸೆಂಟ್ರಿಂಗ್ ಹಾಕಲು ಕಬ್ಬಿಣದ ಹಲಗೆಗಳನ್ನು ತಂದಿರಿಸಲಾಗಿತ್ತು. 2019ರ ನವೆಂಬರ್ ನಲ್ಲಿ 100 ಹಲಗೆಗಳು ಕಳವು ಆಗಿದ್ದವು. ಅದೇ ಗ್ರಾಮದಲ್ಲಿ ಜನವರಿಯಂದು 60 ಹಲಗೆ ನಾಪತ್ತೆಯಾಗಿದವು. ಬಳಿಕ ಕಳೆದ ಅಕ್ಟೋಬರ್ ನಲ್ಲಿ ಮರದ ಹಲಗೆ, 85 ಸಾವಿರದ ಮೌಲ್ಯದ ಜನರೇಟರ್ ಕಳವು ಬಗ್ಗೆ ದೂರು ದಾಖಲಾಗಿತ್ತು. ಕಳವು ಪ್ರಕರಣದ ತನಿಖೆ ಕೈಗೊಂಡ ವಿರಾಜಪೇಟೆ ಪೋಲಿಸರು ಒಂದು ಪಿಕಪ್ ವಾಹನ, ಕೆಲವು ಪರಿಕರ ಸಮೇತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








