ಮೈಸೂರು: ಮೈಸೂರಿನಿಂದ ಮಂಗಳೂರಿಗೆ ಇಂದಿನಿಂದ ವಿಮಾನ ಹಾರಾಟ ಆರಂಭವಾಗಿದ್ದು, ಮೈಸೂರು-ಮಂಗಳೂರಿಗೆ ಒಂದೇ ಗಂಟೆಯಲ್ಲಿ ತಲುಪಬಹುದು. ಏರ್ ಅಲಯನ್ಸ್ ಸಂಸ್ಥೆಯ ವಿಮಾನಗಳು ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೈಸೂರಿನಿಂದ ಮಂಗಳೂರು ನಡುವೆ ಹಾರಾಟ ನಡೆಸಲಿವೆ.

ಬೆಳಗ್ಗೆ 11.20ಕ್ಕೆ ಹೊರಟ ವಿಮಾನವು ಮಧ್ಯಾಹ್ನ 12.30ಕ್ಕೆ ಮಂಗಳೂರು ತಲುಪಲಿದೆ. ಹಾಗೆಯೇ ಮಧ್ಯಾಹ್ನ 12.55ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನವು 1.55ಕ್ಕೆ ಮೈಸೂರು ತಲುಪಲಿದೆ. ರಸ್ತೆ ಮಾರ್ಗದಲ್ಲಿ ತೆರಳುವುದಾದರೆ 255 ಕಿಲೋಮೀಟರ್ ಪ್ರಯಾಣವಿದ್ದು 6-7 ಗಂಟೆವರೆಗೆ ಕಾಲವಕಾಶ ತೆಗೆದುಕೊಳ್ಳುತ್ತದೆ. ರಸ್ತೆ ಮಾರ್ಗವಾಗಿ ಮಡಿಕೇರಿ ಮೂಲಕ ಸಾಗುವುದಾದರೆ ಕಷ್ಟವಾಗುತ್ತದೆ. ಇಲ್ಲವೇ ಹಾಸನ ಮೂಲಕ ತೆರಳ ಬೇಕಾದರೂ ಕಡಿದಾದ ದಾರಿ ಇರುವುದರಿಂದ ಸಮಯ ಉಳಿಸುವ ನಿಟ್ಟಿನಲ್ಲಿ ಇದು ಉಪಯೋಗವಾಗಲಿದೆ.

ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಈ ನೂತನ ವಿಮಾನ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್, ಹಲವು ತಿಂಗಳ ಹಿಂದೆಯೇ ಈ ಸೇವೆ ಆರಂಭಿಸಲು ಸಿದ್ದತೆ ನಡೆದಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಸೇವೆ ಆರಂಭವಾಗಿರಲಿಲ್ಲ. ಈಗ ಸೋಂಕು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಆರಂಭವಾಗಿದೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








