ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ
ಬೆಂಗಳೂರು : ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಒತ್ತಾಯಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಅವರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ. ಒಂದು ನಿಗಮಕ್ಕೆ ಮಾಡಿದ್ರೆ ಬೇರೆ ನಿಗಮಗಳ ಬೇಡಿಕೆ ಇಡ್ತಾರೆ. ಹೀಗಾಗಿ ಆ ಬೇಡಿಕೆ ಈಡೇರಿಕೆ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ಸಾರಿಗೆ ನೌಕರರ ಉಳಿದ ಎಲ್ಲ ಬೇಡಿಕೆಗಳನ್ನು ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ. ಇಂದಿನ ಸಭೆ ಯಶಸ್ವಿಯಾಗುತ್ತೆ ಅನ್ನೋ ವಿಶ್ವಾಸ ಇದೆ. ಸರ್ಕಾರಕ್ಕೆ ಬರುವ ಆದಾಯವನ್ನು ನೌಕರಸ್ತರಿಗೆ ಕೊಡಬೇಕಾಗುತ್ತದೆ.
ಸರ್ಕಾರಿ ನೌಕರನ್ನಾಗಿ ಮಾಡುವುದು ಕಷ್ಟವಾಗಿದೆ. ಸರ್ಕಾರ ಕೂಡ ಯಾವುದೇ ರೀತಿಯ ಒಪ್ಪಿಗೆ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.
ಕೊರೊನಾ ಸಮಯದಲ್ಲಿ ಸಾಕಷ್ಟು ಹೊಡೆತಾ ಬಿದ್ದಿದೆ. ಕೆಲವೊಂದು ಕಷ್ಟ ಅಸಾಧ್ಯವಾಗಿರುವಂತದ್ದಾಗಿದೆ. ಹಣಕಾಸಿನ ಇತಿ ಮಿತಿಗಳ ಒಳಗೆ ನಾವು ಮಾಡಬೇಕಿದೆ.
ನಾವು ನ್ಯಾಯ ಸಮ್ಮತವಾಗಿ ಅವರಿಗೆ ಏನೆಲ್ಲಾ ಕೊಡಲು ಸಾಧ್ಯ ಇದೆಯೋ ಅದೆಲ್ಲವನ್ನು ನಾವು ಕೊಡುತ್ತೇವೆ. ಅವರು ಶ್ರಮಿಕರು ಅವರ ಬೇಡಿಕೆಗಳಿಗೆ ನಾವು ಸ್ಪಂದನೆ ಮಾಡುತ್ತೇವೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು.
ಸಾರಿಗೆ ಸಿಬ್ಬಂದಿ ನಮ್ಮ ಕುಟುಂಬದವರು ಇದ್ದ ಹಾಗೆ. ಅವರ ಮೇಲೆ ಎಸ್ಮಾ ಬ್ರಹ್ಮಾಸ್ತ್ರ ಉಪಯೋಗಿಸುವುದು ನಮ್ಮ ಸರ್ಕಾರಕ್ಕೆ ಇಷ್ಟವಿಲ್ಲ ಎಂದು ಎಸ್ಮಾ ಜಾರಿ ಬಗ್ಗೆ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









