ಇದೆಲ್ಲ ಸರಿಯಲ್ಲ : ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಾಮ್ರಾಟ್ ವಾಗ್ದಾಳಿ
ಬೆಂಗಳೂರು : ಕೋಡಿಹಳ್ಳಿ ಚಂದ್ರಶೇಖರ್ ಇಲ್ಲೊಂದು-ಅಲ್ಲೊಂದು ಮಾತಾಡೋದು ಸರಿಯಲ್ಲ.
ಇಲಾಖೆಗೆ ಸಂಬಂಧಿಸದ ವ್ಯಕ್ತಿಯ ಸ್ವ-ಪ್ರತಿಷ್ಠೆ, ಇಂದು ಜನರಿಗೆ ಸಮಸ್ಯೆಯಾಗಿದೆ ಎಂದು ಆರ್. ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಸಾರಿಗೆ ಮುಷ್ಕರ ಮುಕ್ತಾಯವಾಗದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಹಿರಿಯ ಸಚಿವರ ಸಭೆ ನಡೆಯಿತು.
ಎಸ್ಮಾ ಎಂದರೇನು..? ಜಾರಿಯಾದ್ರೆ ಏನಾಗುತ್ತೆ..?
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಇಲಾಖೆಗೆ ಸಂಬಂಧಿಸದ ವ್ಯಕ್ತಿಯ ಸ್ವ-ಪ್ರತಿಷ್ಠೆ, ಇಂದು ಜನರಿಗೆ ಸಮಸ್ಯೆಯಾಗಿದೆ.
ಸಾರಿಗೆ ನೌಕರರ ಮಾನ್ಯತೆಯುಳ್ಳ ಯೂನಿಯನ್ ಗಳ ಹೇಳಿಕೆಯನ್ನು ಕೋಡಿಹಳ್ಳಿ ಚಂದ್ರಶೇಖರ್ ಧಿಕ್ಕರಿಸಿದ್ದಾರೆ.
ಯೂನಿಯನ್ ಗಳು, ಎಸ್ ಸಿ-ಎಸ್ ಟಿ ನೌಕರರ ಸಂಘ ಮುಷ್ಕರಕ್ಕೆ ಬೆಂಬಲಿಸಿಲ್ಲ. ಚಂದ್ರಶೇಖರ್ ಇಲ್ಲೊಂದು-ಅಲ್ಲೊಂದು ಮಾತಾಡೋದು ಸರಿಯಲ್ಲ ಎಂದು ಕಿಡಿಕಾರಿದರು.
ನಾವು ನೌಕರರಿಗೆ ಕೊಟ್ಟ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಈ ಬಗ್ಗೆ ಮೂವರು ಸಚಿವರು ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ಅದ್ಯಾವುದು ಕೂಡ ಸುಳ್ಳು ಆಗಲ್ಲ. ನಿನ್ನೆ ನಮ್ಮ ಮನೆಗೆ ಬಂದು ಪ್ರತಿಭಟನೆಗೆ ವಾಪಸ್ ಪಡೆಯುತ್ತೇವೆ ಎಂದು ಹೇಳಿದವರು, ಯಾರದೋ ಸ್ವ-ಪ್ರತಿಷ್ಠೆಗೆ ಒಳಗಾಗಿ ಬಂದ್ ಮುಂದುವರಿಸ್ತೇವೆ ಎಂದು ಹೇಳಿರುವುದು ಸರಿಯಲ್ಲ ಎಂದು ಟೀಕಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









