ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸೇವಿಸಬೇಕಾದ ಭಾರತೀಯ ಆಹಾರಗಳು
ಮಂಗಳೂರು, ಡಿಸೆಂಬರ್15: ಆರೋಗ್ಯಕರ ಜೀವನವನ್ನು ನಡೆಸಲು ಹೆಚ್ಚಿನ ಶಕ್ತಿಯನ್ನು ಹೊಂದಿರುವ ಆಹಾರಗಳು ಸಾಮಾನ್ಯವಾಗಿ ಒಳ್ಳೆಯದು. ಪ್ರತಿದಿನ ಸೇವಿಸಬೇಕಾದ ಅತ್ಯಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅನೇಕ ಭಾರತೀಯ ಸೂಪರ್‌ಫುಡ್‌ಗಳಿವೆ. ಇಲ್ಲಿ ನಾವು ಕೆಲವು ಸಾಂಪ್ರದಾಯಿಕ ಆಹಾರಗಳನ್ನು ಹೆಸರಿಸಿದ್ದೇವೆ. ಈ ಆಹಾರಗಳನ್ನು ಚಯಾಪಚಯ ಕಾರ್ಯವನ್ನು ಹೆಚ್ಚಿಸಲು ನಮ್ಮ ನಿಯಮಿತ ಅಡುಗೆಯಲ್ಲಿ ಬಳಸುವ ಅಭ್ಯಾಸ ಒಳ್ಳೆಯದು. ನಿಮ್ಮ ದೈನಂದಿನ ಜೀವನದಲ್ಲಿ ಇರಬೇಕಾದ ಇಂತಹ ಆಹಾರಗಳ ಬಗ್ಗೆ ತಿಳಿಯೋಣ :
ನೆಲ್ಲಿಕಾಯಿ – ನೆಲ್ಲಿಕಾಯಿಯನ್ನು ಸೂಪರ್ಫುಡ್ ಗಳಲ್ಲಿ ಒಂದು ಎಂದು ಹೇಳಲಾಗಿದೆ .ಇದರಲ್ಲಿನ ಉತ್ಕರ್ಷಣ ನಿರೋಧಕ ಗುಣವು ಬೆರ್ರಿ ಅಥವಾ ದಾಳಿಂಬೆಗಿಂತ ಹೆಚ್ಚಾಗಿದೆ ಎಂದು ನಂಬಲಾಗಿದೆ. ಅಲ್ಲದೆ, ಇದು ಕಿತ್ತಳೆಗಿಂತ ಎಂಟು ಪಟ್ಟು ಹೆಚ್ಚು ವಿಟಮಿನ್ ಸಿ ಯಿಂದ ತುಂಬಿರುತ್ತದೆ. ನೆಲ್ಲಿಕಾಯಿಯಲ್ಲಿನ ಪೋಷಕಾಂಶಗಳು ಕಣ್ಣಿನ ದೃಷ್ಟಿಯನ್ನು ಉತ್ತೇಜಿಸುತ್ತದೆ, ನೋವನ್ನು ನಿವಾರಿಸುತ್ತದೆ ಮತ್ತು ಯಾವುದೇ ದೀರ್ಘಕಾಲದ ಪರಿಸ್ಥಿತಿಗಳನ್ನು ಎದುರಿಸಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅರಿಶಿನ – ಅರಿಶಿನವು ಪ್ರತಿ ಭಾರತೀಯ ಆಹಾರದಲ್ಲಿ ಬಹುತೇಕ ಒಂದು ಘಟಕಾಂಶವಾಗಿದೆ. ಹೆಚ್ಚಿನ ಭಾರತೀಯ ಪಾಕಪದ್ಧತಿಯಲ್ಲಿ ಅರಿಶಿನ ಸಿಂಪಡಿಸುವುದು ಅಭ್ಯಾಸವಾಗಿದೆ. ಅರಿಶಿನ ಆಹಾರದಲ್ಲಿನ ಬ್ಯಾಕ್ಟೀರಿಯಾವನ್ನು ನಾಶಗೊಳಿಸುತ್ತದೆ . ಇದರಲ್ಲಿನ ನಿರ್ವಿಷಗೊಳಿಸುವ ಗುಣವು ಕ್ಯಾನ್ಸರ್ ಅನ್ನು ತಡೆಯುತ್ತದೆ, ಲಿವರ್ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ.
ತುಪ್ಪ – ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬನ್ನು ಸೇರಿಸಲು ನಿಮ್ಮ ನಿಯಮಿತ ಆಹಾರದಲ್ಲಿ ತುಪ್ಪವನ್ನು ಸೇರಿಸಬಹುದು. ಇದರಿಂದ ನೆನಪಿನ ಶಕ್ತಿ ಸುಧಾರಿಸುವುದು, ರೋಗನಿರೋಧಕ ಶಕ್ತಿ ಹೆಚ್ಚುವುದು ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವಂತಹ ಆರೋಗ್ಯ ಪ್ರಯೋಜನಗಳನ್ನು ಇದು ಹೊಂದಿದೆ. ಅನ್ನದ ಜೊತೆಗೆ ಒಂದು ಚಮಚ ತುಪ್ಪ ಸೇರಿಸಿದರೆ ರುಚಿಯನ್ನು ಉತ್ಕೃಷ್ಟಗೊಳಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿದ್ದು, ಅದು ತೂಕವನ್ನು ಹೆಚ್ಚಿಸುವುದಿಲ್ಲ.
ಚಳಿಗಾಲದಲ್ಲಿ ನೆಲ್ಲಿಕಾಯಿಯ ಸೇವನೆಯಿಂದ ಸಿಗುವ ಪ್ರಯೋಜನಗಳು
ರಾಗಿ – ಅಕ್ಕಿ, ಗೋಧಿ ಅನೇಕ ಮನೆಗಳಲ್ಲಿ ನಿಯಮಿತ ಆಹಾರ. ಅಂತೆಯೇ, ರಾಗಿ ಕೂಡ ತನ್ನ ಪೌಷ್ಠಿಕಾಂಶದಿಂದ ಪ್ರಮುಖ ಪಾತ್ರ ವಹಿಸುತ್ತದೆ. ಫೈಬರ್ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಡಿ ನಿಮ್ಮ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ತೂಕ ನಷ್ಟ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ರಾಗಿ ಅತ್ಯುತ್ತಮ ಆಹಾರವಾಗಿದೆ.
ಹಲಸಿನ ಹಣ್ಣು – ಹಲಸಿನ ಹಣ್ಣನ್ನು ಅದರ ಪೌಷ್ಠಿಕಾಂಶದ ಕಾರಣಕ್ಕಾಗಿ ಸೂಪರ್‌ಫುಡ್ ಎಂದು ಕರೆಯಲಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ, ತೂಕವನ್ನು ಕಡಿಮೆ ಮಾಡುತ್ತದೆ, ಕರುಳಿನ ಕ್ಯಾನ್ಸರ್ ಅನ್ನು ತಡೆಯುತ್ತದೆ ಮತ್ತು ಮಧುಮೇಹವನ್ನು ಗುಣಪಡಿಸುತ್ತದೆ.
ಬಾರ್ಲಿ – ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮೌಲ್ಯವನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯನ್ನು ನಿಧಾನಗೊಳಿಸುತ್ತದೆ. ಹೆಚ್ಚಿನ ಕೊಬ್ಬನ್ನು ಕರಗಿಸಲು ನಿಮ್ಮ ಆಹಾರದಲ್ಲಿ ಬಾರ್ಲಿಯನ್ನು ಸೇರಿಸಿ. ಇದು ಪ್ರೋಟೀನ್ ಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಇ ಗಳನ್ನು ಒಳಗೊಂಡಿರುತ್ತದೆ. ಇದು ಕಡಿಮೆ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾರ್ಲಿ ನೀರು ಅಥವಾ ಯಾವುದೇ ಸಿರಿಧಾನ್ಯಗಳ ಜೊತೆಗೆ ಬಾರ್ಲಿ ಸೇವಿಸಿದಾಗ ಹಸಿವನ್ನು ಕಡಿಮೆ ಮಾಡುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪಾಕ್ ನಲ್ಲಿ ಅಲ್ಪಸಂಖ್ಯಾತರ ಕಣ್ಮರೆಗೆ ಆತಂಕ ವ್ಯಕ್ತಪಡಿಸಿದ ಯುಎನ್ ತಜ್ಞರು – ಭಾರತವನ್ನು ರಾಕ್ಷಸ ರಾಷ್ಟ್ರ ಎಂದ ಪಾಕ್ ಪ್ರಧಾನಿhttps://t.co/ctQzl9kSQK
— Saaksha TV (@SaakshaTv) December 12, 2020
ಕೆಮ್ಮು ಮತ್ತು ಶೀತವನ್ನು ಸುಲಭವಾಗಿ ಗುಣಪಡಿಸಲು ಅಡಿಗೆ ಮನೆಯಲ್ಲಿರುವ ಮನೆಮದ್ದುಗಳುhttps://t.co/oN7YerRCki
— Saaksha TV (@SaakshaTv) December 12, 2020