ವಿಧಾನ ಪರಿಷತ್ ನಲ್ಲಿ ಗದ್ದಲ : ತನಿಖೆಗೆ ತೇಜಸ್ವಿನಿ ಗೌಡ ಆಗ್ರಹ
ಬೆಂಗಳೂರು : ವಿಧಾನ ಪರಿಷತ್ ನಲ್ಲಿ ಗದ್ದಲ ಪ್ರಕರಣ ಕುರಿತು ತನಿಖೆ ಆಗಬೇಕು ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಘಟನೆ ಕುರಿತು ಮಾತನಾಡಿದ ಅವರು, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವವರಲ್ಲಿ ನಾನು ಮೊದಲಿಗಳಾಗಿದ್ದೇನೆ.
ನಿಯಮದ ಪುಸ್ತಕವನ್ನು ಅಧ್ಯಯನ ಮಾಡಿ ನಾವು ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ. ನಿಯಮಾವಳಿ ಪ್ರಕಾರ ಉಪಸಭಾಪತಿಗಳು ಸಭಾಪತಿ ಸ್ಥಾನದ ಮೇಲೆ ಕುಳಿತುಕೊಳ್ಳಬೇಕು.
ಅದರ ಪ್ರಕಾರ ಇಂದು ಉಪಸಭಾಪತಿಗಳು ಪೀಠದ ಮೇಲೆ ಕುಳಿತಿದ್ದು ಸಿಂಧುವಾಗಿದೆ.
ಆದ್ರೆ ಉಪಸಭಾಪತಿಗಳು ಸದನವನ್ನು ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ನಜೀರ್ ಬಂದು ಸದನದ ಬಾಗಿಲನ್ನು ಒದ್ದರು. ನಮಗೆ ಇದು ಮಾನಸಿಕವಾಗಿ ಘಾಸಿಯಾಗಿದೆ.
ಕೆಂಪೇಗೌಡರು ಇಂತಹ ಭವ್ಯ ನಗರ ಕೊಟ್ಟರು, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದರೂ, ಒಂದು ದಿನವೂ ಇಲ್ಲಿ ಕುಳಿತುಕೊಳ್ಳಲಿಲ್ಲ. ಆದರೆ ಕೆಟ್ಟ ಘಟನೆಗೆ ಇಂದು ವಿಧಾನಪರಿಷತ್ ಸಾಕ್ಷಿಯಾಯಿತು ಎಂದು ಬೇಸರ ಹೊರಹಾಕಿದರು.
ಗದ್ದಲದ ವೇಳೆ ವಿಧಾನಸೌಧದ ಆಸ್ತಿ-ಪಾಸ್ತಿ ಹಾನಿಗೊಳಿಸಲು ಯತ್ನ ನಡೆಸಲಾಯಿತು. ಉಪ ಸಭಾಪತಿಗಳಿಗೆ ರಕ್ಷಣೆ ಕೊಡಲಿಲ್ಲ, ರಾಜ್ಯಪಾಲರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ತೇಜಸ್ವಿನಿ ಗೌಡ, ಮಾರ್ಷಲ್ ಗಳ ಕರ್ತವ್ಯವೇನು..?
ಸಭಾಪತಿ ಮತ್ತು ಉಪಸಭಾಪತಿಗಳಿಗೆ ರಕ್ಷಣೆ ನೀಡಬೇಕು, ಪೀಠದ ರಕ್ಷಣೆ ಮಾಡಬೇಕು. ಆದರೆ, ಅದ್ಯಾವುದೂ ಆಗಲಿಲ್ಲ, ಇದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









