ನನಸಾಗುತ್ತಿದೆ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಕನಸಿನ ಬುಲೆಟ್ ರೈಲು bullet train dream project
ಹೊಸದಿಲ್ಲಿ, ಡಿಸೆಂಬರ್20: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಕನಸಿನ ಯೋಜನೆ ಬುಲೆಟ್ ರೈಲು ನನಸಾಗುತ್ತಿದೆ.
ಭಾರತದ ಜಪಾನ್ ರಾಯಭಾರ ಕಚೇರಿ ಇ 5 ಸರಣಿ ಶಿಂಕಾನ್‌ಸೆನ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಇದನ್ನು ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (ಎಂಎಎಚ್‌ಎಸ್ಆರ್) ಯೋಜನೆಯ ರೋಲಿಂಗ್ ಸ್ಟಾಕ್ ಆಗಿ ಮಾರ್ಪಡಿಸಲಾಗುವುದು. bullet train dream project

ಇದು ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾಗಿದ್ದು, ತೈವಾನ್ ನಂತರ ಜಪಾನ್‌ನ ಪ್ರಸಿದ್ಧ ‘ಶಿಂಕಾನ್‌ಸೆನ್’ ಬುಲೆಟ್-ರೈಲು ತಂತ್ರಜ್ಞಾನವನ್ನು ಖರೀದಿಸಿದ ಮೊದಲ ದೇಶವಾಗಿದೆ.
ಅಹಮದಾಬಾದ್ ನಲ್ಲಿ ಪ್ರಧಾನಿ ಮೋದಿ ಮತ್ತು ಅವರ ಅಂದಿನ ಜಪ್ನೀಸ್ ಕೌಂಟರ್ ಶಿಂಜೊ ಅಬೆ ಅವರು ಸೆಪ್ಟೆಂಬರ್ 14, 2017 ರಂದು ಅಹಮದಾಬಾದ್-ಮುಂಬೈ ನಡುವೆ ಚಲಿಸುವ ಬುಲೆಟ್ ರೈಲಿನ ಅಡಿಪಾಯವನ್ನು ಹಾಕಿದರು.
ಉಜ್ಜಯಿನಿಯ ಬಾಬಾ ಮಹಕಾಳ್ ದೇವಾಲಯ ಉತ್ಖನನದ ಸಂದರ್ಭದಲ್ಲಿ ಪ್ರಾಚೀನ ಕಲ್ಲುಗಳ ಗೋಡೆ ಪತ್ತೆ
ಈ ಯೋಜನೆಯು 2023 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಹಮದಾಬಾದ್ ಮತ್ತು ಮುಂಬೈ ನಡುವೆ 580 ಕಿ.ಮೀ ದೂರವನ್ನು ಕ್ರಮಿಸಲು ರೈಲುಗಳು 7-12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದೇ ದೂರವನ್ನು 2.5 ಗಂಟೆಗಳಲ್ಲಿ ಬುಲೆಟ್ ರೈಲುಗಳು ಕ್ರಮಿಸಲಿದೆ. ಬುಲೆಟ್ ರೈಲು ಗಂಟೆಗೆ ಗರಿಷ್ಠ 350 ಕಿ.ಮೀ ವೇಗವನ್ನು ಹೊಂದಿದೆ.

ಬುಲೆಟ್ ರೈಲು ಯೋಜನೆಗೆ 1.08 ಲಕ್ಷ ಕೋಟಿ ವೆಚ್ಚವಾಗಲಿದೆ. ಈ ಯೋಜನೆಯು 90 ಸಾವಿರ ಉದ್ಯೋಗಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಒದಗಿಸುವ ನಿರೀಕ್ಷೆಯಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಪಡೆಯಲು ನೈಸರ್ಗಿಕ ಮಾರ್ಗಗಳು https://t.co/rudvahCpHj
— Saaksha TV (@SaakshaTv) December 19, 2020
https://twitter.com/SaakshaTv/status/1340341423099371520?s=19








