ADVERTISEMENT
Monday, August 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಇತಿಹಾಸದಲ್ಲಿ ಕರಾಳ ವರ್ಷವಾಗಿ ಉಳಿಯಲಿದೆ 2020..! 2021 ರಲ್ಲೂ ತಪ್ಪಲ್ಲ ಸಂಕಷ್ಟ..!

Namratha Rao by Namratha Rao
December 22, 2020
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಇತಿಹಾಸದಲ್ಲಿ ಕರಾಳ ವರ್ಷವಾಗಿ ಉಳಿಯಲಿದೆ 2020..! 2021 ರಲ್ಲೂ ತಪ್ಪಲ್ಲ ಸಂಕಷ್ಟ..!

2020ನೇ ವರ್ಷ  ಇತಿಹಾಸದಲ್ಲೇ ಅತ್ಯಂತ ಕರಾಳ ವರ್ಷವಾಗಿ ಉಳಿಯಲಿದೆ ಅಂದ್ರೆ ತಪ್ಪಾಗೋದಿಲ್ಲ. ಈ ವರ್ಷ  ಅನೇಕ ಸಿನಿಮಾ ತಾರೆಯರು , ರಾಜಕಾರಣಿಗಳು, ಬೇರೆ ಬೇರೆ ಕ್ಷೇತ್ರಗಳ ಗಣ್ಯರು ತಮ್ಮ ಜೀವನದ ಪಯಣ ಮುಗಿಸಿದ್ದಾರೆ. ಈ ವರ್ಷ ಬರೀ ಸಂತೋಷಕ್ಕಿಂತ ಹೆಚ್ಚಾಗಿ ದುಃಖವೇ ಮಡುಗಟ್ಟಿತ್ತು. ಇನ್ನೂ  ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ಜನ್ಮ ತಾಳಿದ ಮಾರಕ ಕೊರೊನಾ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಈ ವರ್ಷ ಇನ್ನೇನು ಮುಗಿಯುತ್ತ  ಬಂದರೂ  ಕೊರೊನಾ ಆರ್ಭಟ ನಿಂತಿಲ್ಲ.

Related posts

ಪರಿಷತ್ ಸಭಾ ನಾಯಕ ಸ್ಥಾನಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಸಜ್ಜು!: ಸಿದ್ದರಾಮಯ್ಯ ಮುನಿಸು ತಣಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್

ಪರಿಷತ್ ಸಭಾ ನಾಯಕ ಸ್ಥಾನಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಸಜ್ಜು!: ಸಿದ್ದರಾಮಯ್ಯ ಮುನಿಸು ತಣಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್

August 10, 2026
ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

August 10, 2026

ಕೊರೊನಾ 2ನೇ ಅಲೆ ಮುಚ್ಚಿಟ್ಟುಕೊಂಡ್ರೆ ದೊಡ್ಡ ಅನಾಹುತ: ಸರ್ಕಾರಕ್ಕೆ ಹೆಚ್.ಕೆ ಪಾಟೀಲ್ ವಾರ್ನ್..!

ಕೊರೊನಾ ರೌದ್ರನರ್ತನಕ್ಕೆ ಇಡೀ ವಿಶ್ವವೇ ತತ್ತರಿಸಿಹೋಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾ, ಬ್ರೆಜಿಲ್, ರಷ್ಯಾ, ಇಟಲಿ, ಸೌತ್ ಕೊರಿಯಾ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಹೆಮ್ಮಾರಿಯ ಹೊಡೆತದಿಂದ ಇವರೆಗೂ ಸುಧಾರಿಸಿಕೊಳ್ಳಲಾಗುತ್ತಿಲ್ಲ. ಇತ್ತ  ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ಬಹುತೇಕ ವಿಶ್ವಾದ್ಯಾಂತ ಎಲ್ಲಾ ರಾಷ್ಟ್ರಗಳಲ್ಲೂ ಲಾಕ್ ಡೌನ್ ಹೇರಲಾಗಿತ್ತು.   ಭಾರತದಲ್ಲೂ ತಿಂಗಳಾನುಗಟ್ಟಲೆ ಲಾಕ್ ಡೌನ್ ಜಾರಿ ಮಾಡಲಾಗಿತ್ತು ಪರಿಣಾಮ ಬಡಬಗ್ಗರು, ದಿನಗೂಲಿ ನೌಕರರು, ವಲಸೆ ಕಾರ್ಮಿಕರು ಪಡಬಾರದ ಕಷ್ಟ ಪಟ್ಟರು. ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿದ್ವು. ಎಷ್ಟೋ ವ್ಯಾಪಾರ ವಹಿವಾಟುಗಳು ನಿಂತು ಹೋದ್ವು. ಅನೇಕ ಉದ್ಯಮಗಳು ನಷ್ಟ ಅನುಭವಿಸಿ ಮುಚ್ಚುವ ಹಂತ ತಲುಪಿದ್ವು. ಇತ್ತ ಅನೇಕರು ನಿರುದ್ಯೋಗಿಗಳಾಗಿ ಬೀದಿಗೆ ಬೀಳುವಂತಾಯ್ತು. ಹೀಗೆ ಅದೆಷ್ಟೋ ಕೋಟಿ ಜನರ ಬದುಕು ಮೂರಾಬಟ್ಟೆಯಾಗಿದೆ. ಇನ್ನೂವರೆಗೂ ಚೇತರಿಸಿಕೊಳ್ಳಲು ಎಲ್ಲಾ ರಾಷ್ಟ್ರಗಳು ಒದ್ದಾಟ ನಡೆಸ್ತಿವೆ.

ಬೆಂಗಳೂರು ಟು ಕಾರ್ಕಳ.. ಇದು ಅಂಪೈರ್ ಭಟ್ರ ಕೊರೋನಾ ಜರ್ನಿ…!

ಭಾರತದಲ್ಲೀ ಕೋಟ್ಯಾಂತರ ಜನರಿಗೆ ಸೋಂಕು ತಗುಲಿತ್ತು. ಅನೇಕರು ಗುಣಮುಖರಾಗಿದ್ಧಾರೆ. ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಹೀಗೆ ಎಲ್ಲಿ ನೋಡಿದ್ರು ಸಾವು ನೋವುಗಳೇ ಸಂಭವಿಸಿದ ಕರಾಳತೆಗೆ 2020 ನೇ ವರ್ಷ ಸಾಕ್ಷಿಯಾಗಿದೆ.

ಇನ್ನೇನು ಹೆಮ್ಮಾರಿ ಕೊರೊನಾ ಕಾಟ ಕಡಿಮೆಯಾಗ್ತಿದೆ ಅನ್ನೋವಾಗ್ಲೇ ಇಲ್ಲ ಸಲ್ಲದ ತಲೆನೋವುಗಳು ಪ್ರಾರಂಭವಾಗ್ತಿವೆ. ಹೌದು ಇತ್ತೀಚೆಗಷ್ಟೇ ಆಂಧ್ರಪ್ರದೇಶದಲ್ಲಿ ನಿಗೂಢ ಸೋಂಕು ಪತ್ತೆಯಾಗಿ ನೂರಾರು ಜನರಿಗೆ ಸೋಂಕು ತಗುಲಿತ್ತು. ಬೆರಳೆಣಿಕೆಯಷ್ಟು ಮಂದಿ ಜೀವವನ್ನೂ ಕಳೆದುಕೊಳ್ಳಬೇಕಾಯ್ತು. ಇನ್ನೇನು ಅದರಿಂದಲೂ ಚೇತರಿಸಿಕೊಳ್ಳೋ ಸಮಯದಲ್ಲಿ ಕೇರಳದಲ್ಲಿ ಮತ್ತೊಂದು ಬ್ಯಾಕ್ಟೀರಿಯಾದ ಸಮಸ್ಯೆ ಶುರುವಾಯ್ತು.New variant coronavirus UK

ಕೊರೊನಾ ಕಾಟದ ನಡುವೆ ಮತ್ತೊಂದು ಸಂಕಷ್ಟ : ಮೆದುಳು ತಿನ್ನುವ ಅಮೀಬಾ.!

ಕೇರಳದಲ್ಲಿ ಶಿಗ್ಗಿಲ್ಲಾ ಎಂಬ ಬ್ಯಾಕ್ಟೀರಿಯಾ ಸೋಂಕು ಹತ್ತಾರು ಜನರಿಗೆ ಕಾಣಿಸಿಕೊಂಡಿದೆ. ಈಗಾಗಲೇ ಈ ಬ್ಯಾಕ್ಟೀರಿಯಾದಿಂದ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇದು ಒಂದೆಡೆ ಭಯ ಹುಟ್ಟಿಸಿದೆ. ಮತ್ತೊಂದೆಡೆ ಕೊರೊನಾ ಹೊಸ ಸ್ವರೂಪ ತಾಳಿದೆ. ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ಪತ್ತೆಯಾಗಿ ವೇಗವಾಗಿ ಹಬ್ಬತ್ತಿದೆ. ಇದೀಗ ಭಾರತ, ಇಟಲಿ  ಸೇರಿದಂತೆ ಅನೇಕ ರಾಷ್ಟ್ರಗಳಿಗೂ ಈ ಮಹಾಮಾರಿ ಹಬ್ಬಿದೆ. ಬಾರತದಲ್ಲೂ ಬ್ರಿಟನ್ ನಿಂದ ಬಂದ ಸುಮಾರು 10 ಜನರಲ್ಲಿ ಈ ಹೊಸ ಕೊರೊನಾ ಸೋಂಕು ಕಾಣಿಸಿಕೊಂಡಿರೋದು ನಜಕ್ಕೂ ಗಾಯದ ಮೇಲೆ ಬರೆ ಎಳೆದಂತಾಗಿದೆ.shigella infection Kerala

ದೇಶದಲ್ಲೂ ಕೊರೊನಾ ಹೊಸ ತಳಿ ಪತ್ತೆ: ಕೇಂದ್ರದಿಂದ ಕೋವಿಡ್ ಮಾರ್ಗಸೂಚಿ ರಿಲೀಸ್..!

ಇತ್ತ ಭಾರತ ಹಾಗೂ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿ ಹತ್ತಿರ ಹತ್ತಿರ ಒಂದು ವರ್ಷವೇ ಆಗುತ್ತಾ ಬಂದಿದೆ. ಈವರೆಗೂ ಶಾಲೆಗಳ ತೆರೆಯಲು ಸರ್ಕಾರ ಧೈರ್ಯ ಮಾಡ್ತಿಲ್ಲ. ಇತ್ತ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಆದ್ರೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಅನ್ನೋ ಪ್ರಶ್ನೆ ಪೋಷಕರದ್ದು.  ಇತ್ತ ರಾಜ್ಯ ಸರ್ಕಾರ ಶಾಲೆಗಳನ್ನ ತೆರೆಯುವ ಧೈರ್ಯ ಮಾಡಿ ಶೀಘ್ರವೇ ನಿರ್ಧಾರ ಮಾಡಲು ಮುಂದಾಗಿತ್ತು. ಆದ್ರೆ ಕೊರೊನಾ ಎರಡನೇ ಅಲೆಯ ಭೀತಿಗೆ ಸದ್ಯಕ್ಕಂತು ಶಾಲೆಗಳನ್ನ ತೆರೆಯೋದು ಬಹುತೇಕ ಅನುಮಾನವೇ. ಆದ್ರೆ ಇದರಿಂದ ತೊಂದರೆ ಅನುಭವಿಸುತ್ತಿರೋದು ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕರು, ಖಾಸಗಿ ಶಾಲೆಗಳ ಶಿಕ್ಷಕರು.

ಕೊರೊನಾ ನಿಯಮಾಗಳು ‘ಸಿನಿಮಾ ತಾರೆಯರಿಗೆ’ ಅನ್ವಯಿಸಲ್ವಾ..?

ಹೀಗೆ 2020 ಮುಗಿಯುತ್ತಾ ಬಂದರೂ ಒಂದಾದ ಮೇಲೊಂದು ಸಂಕಷ್ಟ ಎದುರಾಗರ್ತಲೇ ಇದೆ. 2021ನೇ ವರ್ಷದಲ್ಲಿ  ಮಹಾಮಾರಿ ಆರ್ಭಟ ಕಡಿಮೆಯಾಗಿ ಜೀವನ ಸುಧಾರಿಸುತ್ತೆ . ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ಜನರಿಗೆ ಮತ್ತೆ ಆಗಾತ ಎದುರಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: 20202021covid 19 virus
ShareTweetSendShare
Join us on:

Related Posts

ಪರಿಷತ್ ಸಭಾ ನಾಯಕ ಸ್ಥಾನಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಸಜ್ಜು!: ಸಿದ್ದರಾಮಯ್ಯ ಮುನಿಸು ತಣಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್

ಪರಿಷತ್ ಸಭಾ ನಾಯಕ ಸ್ಥಾನಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಸಜ್ಜು!: ಸಿದ್ದರಾಮಯ್ಯ ಮುನಿಸು ತಣಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್

by Shwetha
August 10, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಾಗುವ ಮುನ್ಸೂಚನೆ ಸಿಕ್ಕಿದೆ. ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಮೇಲ್ಮನೆಯ...

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

by Shwetha
August 10, 2026
0

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಕೆಪಿಸಿಸಿ ನಾಯಕ ಬಿ ಕೆ ಹರಿಪ್ರಸಾದ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಅಂದು ತುರ್ತು...

ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ- ವಾರಕ್ಕೊಬ್ಬರನ್ನು ಮಂತ್ರಿ ಮಾಡಿ ಬಂಡಾಯ ಶಮನಗೊಳಿಸಿ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ಆಕ್ರೋಶ

ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ- ವಾರಕ್ಕೊಬ್ಬರನ್ನು ಮಂತ್ರಿ ಮಾಡಿ ಬಂಡಾಯ ಶಮನಗೊಳಿಸಿ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ಆಕ್ರೋಶ

by Shwetha
August 10, 2026
0

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ಶ್ರೀರಾಮುಲು...

ದೇಶಭಕ್ತಿಯ ಸರ್ಟಿಫಿಕೇಟ್ ಕೊಡಲು ಇವರು ಯಾರು  : ಆರ್ ಎಸ್ ಎಸ್ ಗೆ ಕಾನೂನಿನ ಅಂಕುಶ ಹಾಕಲು ಪ್ರಿಯಾಂಕ್ ಖರ್ಗೆ ಸಜ್ಜು

ದೇಶಭಕ್ತಿಯ ಸರ್ಟಿಫಿಕೇಟ್ ಕೊಡಲು ಇವರು ಯಾರು : ಆರ್ ಎಸ್ ಎಸ್ ಗೆ ಕಾನೂನಿನ ಅಂಕುಶ ಹಾಕಲು ಪ್ರಿಯಾಂಕ್ ಖರ್ಗೆ ಸಜ್ಜು

by Shwetha
August 10, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆರ್ ಎಸ್ ಎಸ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಸಂಘ ಪರಿವಾರದ ಚಟುವಟಿಕೆಗಳಿಗೆ ಕಡಿವಾಣ...

ನನ್ನನ್ನು ಕೊಂಡುಕೊಳ್ಳುವ ಗಂಡಸು ಇನ್ನೂ ಹುಟ್ಟಿಲ್ಲ- ಲೂಟಿ ಮಾಡುವುದನ್ನೇ ನಿಲ್ಲಿಸದಿದ್ದರೆ ಸರ್ವನಾಶ ಆಗ್ತೀರಿ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

ನನ್ನನ್ನು ಕೊಂಡುಕೊಳ್ಳುವ ಗಂಡಸು ಇನ್ನೂ ಹುಟ್ಟಿಲ್ಲ- ಲೂಟಿ ಮಾಡುವುದನ್ನೇ ನಿಲ್ಲಿಸದಿದ್ದರೆ ಸರ್ವನಾಶ ಆಗ್ತೀರಿ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

by Shwetha
August 10, 2026
0

ಬೆಂಗಳೂರು: ನನ್ನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ, ಅಂಥವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ. ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram