80ರ ವೃದ್ಧನ ಹೊಟ್ಟೆಯಲ್ಲಿ 2,215 ಕಲ್ಲುಗಳು ಪತ್ತೆ
ಹರ್ಯಾಣ : ಕೈತಾಲ್ ನ ಜಯಪುರದಲ್ಲಿ ವೈದ್ಯರು 80 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2,215 ಕಲ್ಲುಗಳನ್ನು ಹೊರತೆಗೆದಿದ್ದಾರೆ.
ಹೊಟ್ಟೆ ನೋವು ಹಿನ್ನೆಲೆ ತಿತರಾಮ್ ಗ್ರಾಮದ ಶ್ರೀಚಂದ್ ಎಂಬ ವೃದ್ಧ ಜಯಪುರ ಆಸ್ಪತ್ರೆಗೆ ಹಾರ್ನಿಯಾ ಚಿಕಿತ್ಸೆಗಾಗಿ ಬಂದಿದ್ದರು.
ಈ ವೇಳೆಪರೀಕ್ಷೆ ನಡೆಸಿದಾಗ ವೈದ್ಯರಿಗೆ ವೃದ್ಧನ ಹೊಟ್ಟೆಯಲ್ಲಿ ಕಲ್ಲುಗಳಿರುವುದು ಕಂಡುಬಂದಿದೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ, ಕಲ್ಲುಗಳನ್ನು ಹೊರತೆಗೆದಿದ್ದಾರೆ.

ಇನ್ನು ಆಪರೇಷನ್ ಸಮಯದಲ್ಲಿ ಸಣ್ಣ ಮತ್ತು ದೊಡ್ಡ ಗಾತ್ರದ ಒಟ್ಟು 2215 ಕಲ್ಲುಗಳನ್ನು ತೆಗೆಯಲಾಗಿದೆ.
ಈ ಬಗ್ಗೆ ಮಾತನಾಡಿರುವ ಡಾ ಪವಾರ್, ಕಲ್ಲುಗಳನ್ನು ಎಣಿಸಲು ಸುಮಾರು ಒಂದೂವರೆ ಗಂಟೆ ಬೇಕಾಯಿತು.
ವ್ಯಕ್ತಿಯ ದೇಹದಿಂದ 2000ಕ್ಕೂ ಅಧಿಕ ಕಲ್ಲುಗಳನ್ನು ಹೊರತೆಗೆದ ಮೂರನೇ ಪ್ರಕರಣ ಇದಾಗಿದೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








