ಮಗಳ ಅಪಹರಣಕ್ಕೆ ತಾಯಿಯದ್ದೇ ಮಾಸ್ಟರ್ ಪ್ಲಾನ್ : ಕಾರಣ ಏನು..!
ಉತ್ತರಕನ್ನಡ: ಏಕಾಏಕಿ ಮನೆಗೆ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ವಿವಾಹಿತ ಮಹಿಳೆಯನ್ನು ಕಿಡ್ನಾಪ್ ಮಾಡಿರೋ ಘಟನೆ ಉತ್ತರಕನ್ನಡದ ಶಿರಸಿಯ ಬಸವೇಶ್ವರ ನಗರದಲ್ಲಿ ನಡೆದಿದೆ. ರುತಿಕಾ ಎಂಬ ಮಹಿಳೆಯನ್ನ ಅಪಹರಣ ಮಾಡಲಾಗಿದೆ. ಮಹಿಳೆ ಮನೆಯಲ್ಲಿರುವಾಗಲೇ ಒಳ ನುಗ್ಗಿದ ದುಷ್ಕರ್ಮಿಗಳ ತಂಡ ಆಕೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಬಳಿಕ ಮನೆಯಲ್ಲಿದ್ದವರೆಲ್ಲರಿಗೂ ಪೆಪ್ಪರ್ ಸ್ಪರೇ ಹೊಡೆದು ಆಕೆಯನ್ನ ಕಿಡ್ನಾಪ್ ಮಾಡಿದ್ದಾರೆ. ಇನ್ನೂ ಶಾಕಿಂಗ್ ವಿಚಾರ ಎಂದ್ರೆ ಮಹಿಳೆಯ ತಾಯಿಯೇ ಅಪಹರಣ ಮಾಡಿಸಿದ್ದಾರೆ ಎನ್ನಲಾಗಿದೆ.
ಮಾಗಡಿ ರಸ್ತೆಯಲ್ಲಿ ವಿಷ್ಣು ಪ್ರತಿಮೆ ಧ್ವಂಸ ಖಂಡಿಸಿ ಅಭಿಮಾನಿಗಳಿಂದ ಪ್ರತಿಭಟನೆ
ತನಗೆ ಇಷ್ಟವಿಲ್ಲದವನನ್ನ ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ಆಕೆಯ ಅಪಹರಣಕ್ಕೆ ತಾಯಿ ರೂಪ ಶಿರ್ಸಿಕರ್ ಸುಪಾರಿ ಕೊಟ್ಟಿದ್ದಳು ಎನ್ನಲಾಗ್ತಿದೆ. ಅಂದ್ಹಾಗೆ ರುತಿಕಾ ಮಣಿಕಂಠ ಎಂಬಾತನ ಜೊತೆಗೆ ಪ್ರೀತಿಸಿ ಮದುವೆಯಾಗಿದ್ದಳು. ಆದ್ರೆ ಇದು ಯುವತಿಯ ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಕೋಪಗೊಂಡ ರುತಿಕಾ ತಾಯಿ ಮಗಳನ್ನೇ ಕಿಡ್ನಾಪ್ ಮಾಡಿಸಿದ್ದಾಳೆ ಎನ್ನಲಾಗಿದೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








