ರಾಯಚೂರು: ಕೊರೊನಾ ಭೀತಿ ಹಿನ್ನೆಲೆ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಕೂಲಿ ಕಾರ್ಮಿಕರು, ಬಡವರು ಪರದಾಡುತ್ತಿದ್ದು, ರಾಯಚೂರಿನ ಮಾನ್ವಿ ನಗರದ ಉದ್ಯಮಿಯೊಬ್ಬರು ಪುರಸಭೆ ಪೌರ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಮಗಳ ಹುಟ್ಟುಹಬ್ಬಕ್ಕೆ ಪೌರಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ, ಮಾಸ್ಕ್, ಸ್ಯಾನಿಟೈಸರ್, ಡೆಟಾಲ್, ಸಾಬೂನು ಹಾಗೂ ಹ್ಯಾಂಡ್ ಗ್ಲೌಸ್ ಗಳನ್ನ ವಿತರಣೆ ಮಾಡಿದ್ದಾರೆ.
ಮಾನ್ವಿ ನಿವಾಸಿ ಬಸವರಾಜ್, ತಮ್ಮ ಮಗಳು ಚೇತನಾ ಪಾಟೀಲ್ ಹುಟ್ಟುಹಬ್ಬಕ್ಕೆ ಇಂತಹ ಸಂದರ್ಭದಲ್ಲಿ ತುರ್ತಾಗಿ ಅಗತ್ಯವಿರುವ ವಸ್ತುಗಳನ್ನ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲದೇ ಪೌರ ಕಾರ್ಮಿಕರಿಗೆ ಒಂದು ತಿಂಗಳ ಆಹಾರ ಪೂರೈಕೆ ಮಾಡುವುದಾಗಿಯೂ ಬಸವರಾಜ್ ಹೇಳಿದ್ದಾರೆ.








