ADVERTISEMENT
Saturday, October 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಲರ್‍ ಫುಲ್ ಹಳ್ಳಿಫೈಟ್| ಒಂದೇ ಪಂಚಾಯ್ತಿ, ಎರಡು ಪತಿ-ಪತ್ನಿ ಜೋಡಿಗೆ ವಿಜಯಮಾಲೆ, ಕರಪತ್ರ ಗಂಗಮ್ಮಗೆ ಸೋಲು..!

Kariyappa N by Kariyappa N
December 31, 2020
in Newsbeat, Politics, Samagra karnataka, ರಾಜ್ಯ
village fight
Share on FacebookShare on TwitterShare on WhatsappShare on Telegram

ಕಲರ್‍ಫುಲ್ ಹಳ್ಳಿಫೈಟ್: ಒಂದೇ ಪಂಚಾಯ್ತಿ, ಎರಡು ಪತಿ-ಪತ್ನಿಗೆ ಜೋಡಿಗೆ ವಿಜಯಮಾಲೆ, ಕರಪತ್ರ ಗಂಗಮ್ಮಗೆ ಸೋಲು..!
ಬೆಂಗಳೂರು: ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆದಿದೆ. ಕೆಲ ಕ್ಷೇತ್ರಗಳಲ್ಲಿ ಮತದಾರರು ಅಚ್ಚರಿಯ ಫಲಿತಾಂಶವನ್ನೂ ನೀಡಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಪ್ರತಿಬಿಂಬ ಎಂದೇ ಬಿಂಬಿತವಾಗಿರುವ ಗ್ರಾಮ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಹಿನ್ನೆಲೆ, ಒಂದೇ ಮತದ ಗೆಲವು, ಟೈ ಆಗಿ ಲಕ್ಕಿ ಡ್ರಾದಲ್ಲಿ ಗೆಲವು ಸಾಧನೆ..ಹೀಗೆ ಹಳ್ಳಿಫೈಟ್ ಕಲರ್‍ಫುಲ್ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ಗೆದ್ದ ಪತಿ-ಪತ್ನಿ ಜೋಡಿ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮ ಪಂಚಾಯತ್‍ಗೆ ಸ್ಪರ್ಧೆ ಮಾಡಿದ್ದ ಎರಡು ಜೋಡಿ ಪತಿ ಪತ್ನಿಯರು ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

Related posts

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

October 16, 2026
saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

October 16, 2026


ಬೆಳಗೊಳದ 1ನೇ ವಾರ್ಡ್‍ನಿಂದ ಪತ್ನಿ ಅಶ್ವಿನಿ ಗೆದ್ದರೆ, 2ನೇ ವಾರ್ಡ್‍ನಿಂದ ಪತಿ ರವಿಕುಮಾರ್ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಪತಿ ರವಿಕುಮಾರ್ ಮೂರನೆ ಬಾರಿ ಗೆದ್ದರೆ, ಪತ್ನಿ ಅಶ್ವಿನಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.


ಇದೇ ವೇಳೆ, ಅದೇ ಗ್ರಾಮದ ಮತ್ತೊಂದು ಜೋಡಿ ಸುರೇಶ್ ಹಾಗೂ ಪ್ರಭಾ ಗೆಲುವು ಸಾಧಿಸಿ ಹುಬ್ಬೇರುವಂತೆ ಮಾಡಿದ್ದಾರೆ. 8ನೇ ವಾರ್ಡ್‍ನಿಂದ ಸ್ಪರ್ಧೆ ಮಾಡಿದ್ದ ಪತಿ ಸುರೇಶ್ ಹಾಗೂ ಪತ್ನಿ ಪ್ರಭಾ ಸುರೇಶ್‍ಗೆ ಗ್ರಾಮಸ್ಥರು ಜಯದ ಮಾಲೆ ಹಾಕಿದ್ದಾರೆ. ಸಾಮಾನ್ಯ ಹಾಗೂ ಸಾಮಾನ್ಯ ಮಹಿಳಾ ವರ್ಗದಿಂದ ಇಬ್ಬರು ಆಯ್ಕೆಯಾಗಿರುವುದು ವಿಶೇಷ.

ಗೆದ್ದ ಸಿಪಿಐ(ಎಂ) ಬೆಂಬಲಿತ ಅಭ್ಯರ್ಥಿ
ಮಂಡ್ಯ ಜಿಲ್ಲೆಯ ತಳಗವಾದಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಿಪಿಐ(ಎಂ) ಬೆಂಬಲಿತ ಅಭ್ಯರ್ಥಿ ಟಿ.ಹೆಚ್. ಆನಂದ್ ಗೆಲುವು ಸಾಧಿಸಿದ್ದಾರೆ. ಇವರ ಜತೆಗೆ ಪ್ರಗತಿಪರ ತಂಡದ ಶಿವಮ್ಮ, ಲೀಲಾವತಿ, ಕುಮಾರ, ಸೌಮ್ಯ ಟಿ.ಪಿ. ಜಯಲಕ್ಷ್ಮಿ, ಸಿದ್ದರಾಜು ರೂಪ, ಗುರುಸ್ವಾಮಿ, ಸುಲೋಚನಾ ಸೇರಿದತೆ 10 ಜನರನ್ನ ತಳಗವಾದಿಯ ಮತದಾರರು ಆಯ್ಕೆ ಮಾಡಿ ಕಳಿಸಿದ್ದಾರೆ.

ಕರಪತ್ರದ ಗಂಗಮ್ಮಗೆ ಎರಡು ಕಡೆ ಸೋಲು
ವಿಭಿನ್ನ ಚುನಾವಣಾ ಕರಪತ್ರದಿಂದ ವೈರಲ್ ಆಗಿ ಗಮನಸೆಳೆದಿದ್ದ ಕರಪತ್ರದ ಗಂಗಮ್ಮ ಸ್ಪರ್ಧೆ ಮಾಡಿದ್ದ ಎರಡು ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದಾರೆ.
ತುಮಕೂರು ತಾಲೂಕಿನ ಕಲ್ಕೆರೆ ಮತ್ತು ದೊಡ್ಡಗುಣಿ ಕ್ಷೇತ್ರದ ಸದಸ್ಯ ಸ್ಥಾನಗಳಿಗೆ ಹೆಚ್. ಗಂಗಮ್ಮ ಸ್ಪರ್ಧಿಸಿದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದಾರೆ


ದೊಡ್ಡಗುಣಿ ಕ್ಷೇತ್ರದಲ್ಲಿ ಕೇವಲ 2 ಮತಗಳನ್ನು ಪಡೆದಿದ್ದರೆ, ಕಲ್ಕೆರೆ ಕ್ಷೇತ್ರದಲ್ಲಿ ಕನಿಷ್ಠ ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ಹಾಗೂ ಸೋತರೆ ಏನೇನು ಮಾಡುವೆ ಎಂಬ ಬಗ್ಗೆ ಗಂಗಮ್ಮ ಕರಪತ್ರದಲ್ಲಿ ಮುದ್ರಿಸಿದ್ದರು. ಈ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೂ, ಮತದಾರ ಪ್ರಭುಗಳು ಗಂಗಮ್ಮಗೆ ಸೋಲಿನ ಬಿಸಿ ಮುಟ್ಟಿಸಿದ್ದು, ಕರಪತ್ರದಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Grama panchayath electonkarnatakaTwo Husband Wives wins in mandyaviral gangamma defeat
ShareTweetSendShare
Join us on:

Related Posts

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

by admin
October 16, 2026
0

​ ಬೆಂಗಳೂರು : ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ‘ಪ್ರೇಮದ ಊರಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ...

saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
October 16, 2026
0

ರಾಮನಗರ, ಗ್ಯಾರಂಟಿಗಳಿಗಾಗಿ ಎಲ್ಲ ಸೌಲಭ್ಯಗಳನ್ನು ಕಡಿತ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಈಗ ಅಂಗವಿಕಲರ ಪಿಂಚಣಿ ಹಣಕ್ಕೂ ಕೈ ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು....

saakshatv-instamart-qim-sale-2026-beauty-products-festival-discounts

ಇನ್‌ಸ್ಟಾಮಾರ್ಟ್ QIM ಸೇಲ್ 2026: ಹಬ್ಬದ ಸೀಸನ್‌ಗೆ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಬಂಪರ್‌ ರಿಯಾಯಿತಿ

by admin
October 16, 2026
0

ಬೆಂಗಳೂರು: ದಸರಾ ಸಂಭ್ರಮ, ದೀಪಾವಳಿ ಪಾರ್ಟಿ, ಹಬ್ಬದ ಭೋಜನ ಹಾಗೂ ಸಂಭ್ರಮಕ್ಕೆ ತಯಾರಾಗಲು ಇನ್‌ಸ್ಟಾಮಾರ್ಟ್ ತನ್ನ 'ಕ್ವಿಕ್ ಇಂಡಿಯಾ ಮೂವ್ಮೆಂಟ್' (ಕ್ಯೂಐಎಂ) ಸೇಲ್ 2026 ಅನ್ನು ಆರಂಭಿಸಿದೆ....

ಜಿಯೋ ಐಪಿಒ ಬಗ್ಗೆ ವಿಶ್ಲೇಷಕರು ಪಾಸಿಟಿವ್; ಲಿಸ್ಟಿಂಗ್‌ನಲ್ಲಿ ಶೇ 15-20ರಷ್ಟು ಲಾಭದ ನಿರೀಕ್ಷೆ

by admin
October 16, 2026
0

ಮುಂಬೈ,: ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರೈಸ್ ಬ್ಯಾಂಡ್ (ಬೆಲೆ ಶ್ರೇಣಿ) ಪ್ರಕಟವಾದ ನಂತರ ವಿಶ್ಲೇಷಕರ ಅಭಿಪ್ರಾಯಗಳು ಬಹುತೇಕ ಉತ್ಸಾಹದಿಂದ ಕೂಡಿದೆ. ಹಲವು ವರದಿಗಳು ಐಪಿಒಗೆ ಧನಾತ್ಮಕ ಮೌಲ್ಯಮಾಪನ ನೀಡಿವೆ....

saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

by admin
October 16, 2026
0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್‌) ಮತ್ತು ಕೆನಡಾದ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್‌) ನಡುವೆ ಐತಿಹಾಸಿಕ 'ಸಿಸ್ಟರ್ ಏರ್‌ಪೋರ್ಟ್' ಒಪ್ಪಂದಕ್ಕೆ ಸಹಿ ಹಾಕಲಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram