ಮಂಡ್ಯ: ಗ್ರಾ.ಪಂ. ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಗೆದ್ದ ಅಭ್ಯರ್ಥಿ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದರಿಂದ ಮಾರಾಮಾರಿ ನಡೆದಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಸಮೀಪದ ಕಾಡೇನಹಳ್ಳಿಯಲ್ಲಿ ನಡೆದಿದೆ.

ಮಾರಾಮಾರಿಯಲ್ಲಿ ಮಂಡ್ಯ ಹಾಲು ಒಕ್ಕೂಟ(ಮನ್ಮುಲ್) ನಿರ್ದೇಶಕ ಸೇರಿ 8 ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡೇನಹಳ್ಳಿ ಗ್ರಾಮದ ಮನ್ಮುಲ್ ನಿರ್ದೇಶಕ ರಾಮಚಂದ್ರ ಹಾಗೂ ಅವರ ಪುತ್ರ ರವಿ, ಬೆಂಗಲಿಗರ ಮೇಲೆ ಹಲ್ಲೆ ಮಾಡಲಾಗಿದೆ.
ಗ್ರಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಸ್ವಾಮೀಗೌಡ ಮತ್ತು ಗೀತಾ ಗೆಲುವು ಸಾಧಿಸಿದ್ರು. ಇವರ ಗೆಲುವಿಗಾಗಿ ಮನ್ಮುಲ್ ನಿರ್ದೇಶಕ ರಾಮಚಂದ್ರು ಸೇರಿ ಬೆಂಬಲಿಗರು ಕೆಲಸ ಮಾಡಿದ್ರು. ಇವರ ವಿರುದ್ದ ಸೋತ ಅಭ್ಯರ್ಥಿಗಳ ಸಂಬಂಧಿಕರು ಮತ್ತು ಬೆಂಬಲಿಗರಿಂದ ಹಲ್ಲೆ ನಡೆದಿದ್ದು, ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹೆದ್ದಾರಿಯಲ್ಲೆ ದೊಣ್ಣೆ ಹಿಡಿದು ಸೀನಿಮೀಯ ರೀತಿ ಹೊಡೆದಾಟ
ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶದ ಹಿನ್ನೆಲೆ ಜೆಡಿಎಸ್ ಹಾಗೂ ರೈತ ಸಂಘ ಮುಖಂಡರುಗಳ ನಡುವೆ ಹೊಡೆದಾಟ ನಡೆದಿದೆ. ಕಳೆದ ರಾತ್ರಿ ನಡೆದ ಘರ್ಷಣೆ ಬಳಿಕ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜನಕ್ಕನಹಳ್ಳಿ ಸಮೀಪದ ಮೇಲುಕೋಟೆ ರಸ್ತೆಯಲ್ಲಿ ಜೆಡಿಎಸ್ ಹಾಗೂ ರೈತ ಸಂಘದ ಮುಖಂಡರುಗಳ ನಡುವೆ ಮಾರಮಾರಿ ನಡೆದಿದೆ.

ಗಲಾಟೆಯಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ಅವರ ಆಪ್ತ ಹಾಗೂ ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ ಮೇಲೆ ಹಲ್ಲೆ ಮಾಡಲಾಗಿದೆ. ಈ ವೇಳೆ ಮಂಡ್ಯ ಮನ್ ಮುಲ್ ನಿರ್ದೇಶಕ ರಾಮಚಂದ್ರು ಹಾಗೂ ರೈತ ಸಂಘದವರು ರಸ್ತೆಯಲ್ಲಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲೇ ದೊಣ್ಣೆ ಹಿಡಿದು ಸೀನಿಮೀಯ ರೀತಿ ಹೊಡೆದಾಟ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಮೇಲುಕೋಟೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








