ಪತಿಗಾಗಿ ಇಬ್ಬರು ಸಹೋದರಿಯರ ಕಿತ್ತಾಟ : ಜಡೆ ಜಗಳಕ್ಕೆ ಹೈರಾಣಾದ ಪೊಲೀಸರು..!
ಗಂಡನಿಗೆ ಇಬ್ಬರು ಹೆಂಡತಿಯರಿದ್ದರೆ ಅಲ್ಲಿ ಜಡೆ ಜಗಳ ಖಾಯಂ. ಅದೇ ರೀತಿ ಇಬ್ಬರು ಹೆಂಡತಿಯರ ಜಗಳದ ನಡುವೆ ಸಿಲುಕಿ ಉತ್ತರಖಂಡದ ಈ ವ್ಯಕ್ತಿ ಪಡಬಾರದ ಪಾಡು ಪಟ್ಟಿದ್ದಾನೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿರುವ ಇಬ್ಬರ ಹೆಂಡತಿಯರ ಜಗಳ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇನ್ನೂ ಕುತೂಹಲಕಾರಿ ವಿಚಾರವೇನೆಂದ್ರೆ ಈತನ ಇಬ್ಬರು ಪತ್ನಿಯರು ಸಹೋದರಿಯರು. ಇಬ್ಬರೂ ಅಕ್ಕತಂಗಿಯರೇ. ಪತಿಗಾಗಿ ಇಬ್ಬರು ಸಹೋದರು ಕಿತ್ತಾಡಿ ಬೀದಿ ರಂಪಾಟ ಮಾಡಿಕೊಂಡಿದ್ದಾರೆ.
2020 ರಲ್ಲಿ ಅಂತ್ಯಗೊಂಡ ತೆಲುಗು ಸಿನಿತಾರೆಯರ ಬದುಕು: ಕಲಾವಿಧರಿಗೆ ಗೌರವ ನಮನ..!
ಮಾವನಾ ನಗರದ ವ್ಯಕ್ತಿಯೊಬ್ಬ 10 ವರ್ಷಗಳ ಹಿಂದೆ ಅಂಬರ್ ತಾಲಾಬ್ ಊರಿನ ಯುವತಿಯನ್ನು ಮದುವೆಯಾಗಿದ್ದ. ಇವರಿಗೆ ನಾಲ್ಕು ಮಂದಿ ಮಕ್ಕಳು ಇದ್ದಾರೆ. ಆದರೆ 4 ಮಕ್ಕಳಾಗುತ್ತಿದ್ದಂತೆಯೇ ಪತ್ನಿಯ ಮೇಲಿನ ಆಸಕ್ತಿ ಕಳೆದುಕೊಂಡಿದ್ದ ಈತನಿಗೆ ಪತ್ನಿಯ ಚಿಕ್ಕಮ್ಮನ ಮಗಳ ಮೇಲೆ ಪ್ರೀತಿ ಹುಟ್ಟಿದೆ. ಇನ್ನೂ ಈ ವಿಚಾರ ಗೊತ್ತಾಗ್ತಿದ್ದಂತೆ ದಂಪತಿ ನಡುವೆ ಜನಳ ಶುರುವಾಗಿತ್ತು. ಜಗಳ ತಾರಕಕ್ಕೇರಿದ ಬೆನ್ನಲ್ಲೇ ಪತ್ನಿ ತವರು ಸೇರಿದ್ದಳು.
ಪತ್ನಿ ತವರಿಗೆ ಹೋಗುತ್ತಿದ್ದಂತೆಯೇ ಈತ ಪತ್ನಿಯ ತಂಗಿಯ ಜೊತೆಗೆ ಪರಾರಿಯಾಗಿದ್ದಾನೆ. ಇತ್ತ ಪತಿ ಪರಾರಿಯಾಗ್ತಿದ್ದಂತೆ ಪತ್ನಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಅವರಿಬ್ಬರನ್ನೂ ಪತ್ತೆ ಹಚ್ಚಿ ಕರೆತಂದಿದ್ದಾರೆ.
ಆದ್ರೆ ಪತಿರಾಯ ಪತ್ನಿಯ ತಂಗಿಯ ಜೊತೆಗೂ ವಿವಾಹವಾಗಿದ್ದಾನೆ. ಇದೀಗ ಇಬ್ಬರೂ ಹೆಂಡತಿಯರು ಆತನಿಗಾಗಿ ಜಗಳ ಶುರುಮಾಡಿದ್ದು, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಒಟ್ಟಾರೆ ಗಂಡನ ತಪ್ಪಿನಿಂದ ಕಿಚ್ಚು ಹೊತ್ತ ಅಕ್ಕ ತಂಗಿಯರ ಕಿತ್ತಾಟ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








