2021 ರಲ್ಲಿ ರಿಲೀಸ್ ಆಗಲಿರುವ ಕನ್ನಡ ಸಿನಿಮಾಗಳು..!
2020ರಲ್ಲಿ ಸಿನಿಮಾ ರಂಗ ಕುಸಿದು ಹೋಗಿದೆ. ಆದ್ರೆ 2021ರಲ್ಲಿ ಸಿನಿಮಾರಂಗ ಚೇತರಿಸಿಕೊಳ್ಳಲಿದೆ. ಹೊಸ ಹೊಸ ಸಿನಿಮಾಗಳು, ಸ್ಟಾರ್ ನಟರ ಸಿನಿಮಾಗಳು 2021 ರಲ್ಲಿ ರಿಲೀಸ್ ಆಗಲಿವೆ. 2020ರಲ್ಲಿ ನಿರಾಸೆಯಾಗಿದ್ದ ಸಿನಿಪ್ರೇಕ್ಷಕರಿಗೆ ಈ ವರ್ಷ ನಾನ್ ಸ್ಟಾಪ್ ಎಂಟರ್ ಟೈನ್ ಮೆಂಟ್ ಸಿಗೋದು ಪಕ್ಕಾ..
ಹಾಗಾದ್ರೆ ಈ ವರ್ಷ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗಲಿವೆ…!
ಬಹುನಿರೀಕ್ಷೆಯ ಸ್ಟಾರ್ ನಟರ ಸಿನಿಮಾಗಳು
ಕೆಜಿಎಫ್ ಚಾಪ್ಟರ್ 2 : ಭಾರತ ಸಿನಿಮಾರಂಗದ ಹೈ ವೋಲ್ಟೇಜ್ ಸಿನಿಮಾ KGF 2. ರಾಕಿಂಗ್ ಸ್ಟಾರ್ ಯಶ್ ನಟನೆಯ , ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ರಿಲೀಸ್ ಗಾಗಿ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದ್ದು ಈ ವರ್ಷವೇ ತೆರೆಗಪ್ಪಳಿಸಲಿದೆ.
ಕೋಟಿಗೊಬ್ಬ -3 : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿನಯದ ಬಹುನಿರೀಕ್ಷೆಯ ಚಿತ್ರ ಕೋಟಿಗೊಬ್ಬ 3 ಸಹ ಇದೇ ವರ್ಷವೇ ರಿಲೀಸ್ ಆಗಲಿದೆ.
ರಾಬರ್ಟ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಸಿನಿಮಾ ರಿಲೀಸ್ ಗಾಗಿ ಡಿ ಬಾಸ್ ಭಕ್ತರು ಕಾಯ್ತಿದ್ದಾರೆ.
2020 ರಲ್ಲಿ ಅಂತ್ಯಗೊಂಡ ಕನ್ನಡ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!

ಸಲಗ : ದುನಿಯಾ ವಿಜಿ ನಟನೆಯ ಸಲಗ ಚಿತ್ರವೂ ಸಹ ಇದೇ ವರ್ಷವೇ ರಿಲೀಸ್ ಆಗಲಿದೆ.
ಪೊಗರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈ ವೋಲ್ಟೇಜ್ ಸಿನಿಮಾ ಪೊಗರು ರಿಲೀಸ್ ಗೆ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ಧಾರೆ. ಸಿನಿಮಾದಲ್ಲಿ ಧ್ರುವಾಗೆ ನಾಯಕಿಯಾಗಿ ರಷ್ಮಿಕಾ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಮುಗಿದಿದ್ದು ಸಂಕ್ರಾಂತಿಗೆ ರಿಲೀಸ್ ಆಗುವ ಸಾಧ್ಯತೆಯಿದೆ.
ಪ್ಯಾಂಟಮ್ : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಪ್ಯಾಂಟಮ್ ಕಕೊನೆಯ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾ ಶೂಟಿಂಗ್ ಮುಕ್ತಾಯವಾದ ತಕ್ಷಣ ಪ್ರೀ ಪ್ರೊಡಕ್ಷನ್ ಕೆಲಸ ಆರಂಭವಾಗಲಿದ್ದು ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ.
ಯುವರತ್ನ : ಪುನೀತ್ ರಾಜ್ ಕುಮಾರ್ ಅಭಿನಯದ ಬಬಹುನಿರೀಕ್ಷೆಯ ಚಿತ್ರ ಯುವರತ್ನದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು, ಅಪ್ಪು ಜೇಮ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಜೇಮ್ಸ್ : ಇದೇ ವರ್ಷವೇ ಶೂಟಿಂಗ್ ಮುಕ್ತಾಯಗೊಂಡು ಜೇಮ್ಸ್ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ.
ಭಜರಂಗಿ -2 : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಭಜರಂಗಿ 2 ಇದೇ ವರ್ಷವೇ ರಿಲೀಸ್ ಆಗಿ ಅಭಿಮಾನಿಗಳನ್ನ ರಂಜಿಸಲಿದೆ.
ಮದಗಜ : ಇನ್ನೂ ಸ್ಯಾಂಡಲ್ ವುಡ್ ನ ಮತ್ತೊಂದು ಬಹುನಿರೀಕ್ಷೆ ಸಿನಿಮಾ ಮದಗಜ.. ಈ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರು ನಾಯಕನಾಗಿ ಕಾಣಿಸಿಕೊಳ್ತಿದ್ದು, ನಾಯಕಿಯಾಗಿ ಆಶಿಕಾರಂಗನಾಥ್ ಬಣ್ಣ ಹಚ್ಚಿದ್ದಾರೆ.
2020 ರಲ್ಲಿ ಅಂತ್ಯಗೊಂಡ ಬಾಲಿವುಡ್ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!
ರಾಜಮಾರ್ತಾಂಡ: ಚಿರಂಜೀವಿ ಸರ್ಜಾ ಅಭಿನಯದ ಕಡೆಯ ಸಿನಿಮಾ ರಾಜಮಾರ್ತಾಂಡ
ಗಾಳಿಪಟ -2: ಗಣೇಶ್ , ದಿಗಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸಿನಿಮಾ.
ಲವ್ ಮಾಕ್ಟೇಲ್ 2 : ಡಾರ್ಲಿಂಗ್ ಕೃಷ್ಣ ನಟನೆಯ ಲವ್ ಮಾಕ್ಟೇಲ್ ಸಿನಿಮಾ ಕೂಡ ಇದೇ ವರ್ಷವೇ ತೆರೆಗಪ್ಪಳಿಸಲಿದೆ.
ಇದರ ಹೊರತಾಗಿ ಠಾಕ್ರೆ, ರವಿ ಬೋಪಣ್ಣ, ರಂಗನಾಯಕ, , ಭಿನ್ನ , , ಉಪೇಂದ್ರ ಅಭಿನಯದ ಹೋಂ ಮಿನಿಸ್ಟರ್ , , ಪದವಿ ಪೂರ್ವ, ದಸರಾ, ಸೂಪರ್ ಸ್ಟಾರ್, 2020, ಗುರು ಶಿಷ್ಯರು, ಲಾಫಿಂಗ್ ಬುದ್ಧ, ಶೋಕಿವಾಲಾ, ತ್ರಿವಿಕ್ರಮ, ಮಾಂಜಾ, ಟಪೋರಿ, ಟಕ್ಕರ್, ಆಡಿಸಿದಾತ, ಕಾಲವೇ ಮೋಸಗಾರ ಬೈ ಲವ್ 2 , ಅಬ್ಬರ, ಬಾಡ್ ಮಾನರ್ಸ್, shrikrishna @ gmail.com, ಪರಿಮಳ ಲಾಡ್ಜ್, ಗ್ರಾಮಾಯಣ ಸೇರಿದಂತೆ ಹಲವು ಸಿನಿಮಾಗಳು 2021 ರಲ್ಲಿ ಬಿಡುಗಡೆಯಾಗಲಿದೆ.
2024ರಲ್ಲಿ ಆಂಧ್ರದ ಸಿಎಂ ಆಗ್ತಾರಂತೆ ‘ಕೊಮರಂ ಭೀಮ್’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








