2020 ರಲ್ಲಿ ಅಂತ್ಯಗೊಂಡ ಬಾಲಿವುಡ್ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!
2020… ಈ ವರ್ಷ ಇತಿಹಾಸದ ಪುಟದಲ್ಲಿ ಸದಾ ಕಾಲ ಕರಾಳತೆಯ ಕಪ್ಪು ಚುಕ್ಕೆಯಾಗಿ ಶತಶತಮಾನಗಳ ಕಾಲ ಉಳಿಯಲಿದೆ. ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ಸಿನಿಮಾರಂಗದಲ್ಲೂ ಸಾಲು ಸಾಲು ಕಲಾವಿಧರು, ದಿಗ್ಗಜರು ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಕೊರೊನಾ ಹಾವಳಿ, ಲಾಕ್ ಡೌನ್ ನಿಂದ ಚಿತ್ರರಂಗ ನೆಲಕಚ್ಚಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇನ್ನೇನು 2021 ಕ್ಕೆ ದಿನಗಣನೆ ಆರಂಭವಾಗಿದೆ. 2021ನ್ನ ವೆಲ್ ಕಮ್ ಮಾಡಲು ಹೊಸ ಆಶಯದೊಂದಿಗೆ ಜನ ಕಾಯ್ತಿದ್ದಾರೆ.
ಇದೀಗ ಈ ವರ್ಷದಲ್ಲಿ ಯಾರೆಲ್ಲಾ ಸಿನಿ ತಾರೆಯರು, ಕಲಾವಿಧರು, ಧಾರಾವಾಹಿ ನಟ – ನಟಿಯರ ಬದುಕು ಅಂತ್ಯವಾಗಿದೆ ಎಂಬುವ ಕಹಿ ನೆನಪನ್ನ ಒಮ್ಮೆ ನೆನೆಯೋಣ. ನಮ್ಮನ್ನ ಈ ವರ್ಷ ಅಗಲಿದ ಗಣ್ಯರಿಗೆ ಗೌರಮ ನಮನ ಸಲ್ಲಿಸೋಣ..
2020 ರಲ್ಲಿ ಅಂತ್ಯಗೊಂಡ ಕನ್ನಡ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!
ಬಾಲಿವುಡ್
ಏಪ್ರಿಲ್ -29-2020:
ಇರ್ಫಾನ್ ಖಾನ್ – ಭಾರತೀಯ ಸಿನಿಮಾಗಳಲ್ಲಿ ತಮ್ಮ ಅದ್ಭುತಾ ನಟನೆಯಿಂದ ಸಾಕಷ್ಟು ಹೆಸರು ಮಾಡಿರುವ ಇರ್ಫಾನ್ ಅವರು 53 ನೇ ವಯಸ್ಸಿನಲ್ಲಿ ವಿಧಿವಶರಾದ್ರು. ಅಷ್ಟೇ ಅಲ್ಲ ಸ್ಲಂ ಡಾಗ್ ಮಿಲೇನಿಯರ್ ಅಂತಹ ಸೂಪರ್ ಹಿಟ್ ಅವಾರ್ಡ್ ಸಿನಿಮಾಗಳು, ಬಾಲಿವುಡ್ , ಬ್ರಿಟೀಶ್, ಅಮೆರಿಕನ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಲೈಫ್ ಆಫ್ ಪೈ , ಸ್ಫಯಡರ್ ಮ್ಯಾನ್ ರಿಟರ್ನ್ಸ್ ನಲ್ಲೂ ಅದ್ಭುತ ನಟನೆಯಿಂದ ಜನಮನ್ನಣೆ ಪಡೆದಿದ್ದಾರೆ. ಕೊಲೋನ್ ಇನ್ ಪೆಕ್ಷನ್ ನಿಂದಾಗಿ ಇರ್ಫಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ಏಪ್ರಿಲ್ -30 -2020 :
ರಿಷಿ ಕಪೂರ್: ಬಾಲಿವುಡ್ ನ ಹಿರಿಯ ನಟ ಹಾಗೂ ನಿರ್ಮಾಪಕ. ಇತಿಹಾಸದಲ್ಲೇ ಒನ್ ಆಫ್ ದ ಮೋಸ್ಟ್ ಸಕ್ಸಸ್ ಫುಲ್ ನಟ ರಿಷಿ ಕಪೂರ್. ಬೋನ್ ಮ್ಯಾರೋ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಚಿಕಿತ್ಸೆ ಫಲಕಾರಿಯಾಗದೇ 67ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಮೇರಾ ನಾಮ್ ಜೋಕರ್, ಬಾಬಿ, ಶ್ರೀ 420, ಜೆಹ್ ರೀಲಾ ಇನ್ ಸಾನ್, ಲೈಲಾ, ಮಜುನು ಹೀಗೆ 119 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜೂನ್ – 14 – 2020:
ಸುಶಾಂತ್ ಸಿಂಗ್ ರಜಪೂತ್ : ಬಾಲಿವುಡ್ ನ ಉದಯೋನ್ಮುಖ ನಟ ಸುಸಾಂತ್ ಸಿಂಗ್ ರಜಪೂತ್ 34 ನೇ ವಯಸ್ಸಿನಲ್ಲಿ ತಮ್ಮ ಜೀವನದ ಪಯಣ ಮುಗಿಸಿದ್ರು. ಮುಂಬೈನ ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಕೆಲವರು ಇದನ್ನ ಕೊಲೆ ಎಂದು ವಾದಿಸುತ್ತಲೇ ಇದ್ದು, ಈ ಪ್ರಕರಣ ಇನ್ನೂವರೆಗೂ ತನಿಖಾ ಹಂತದಲ್ಲೇ ಇದೆ. ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ತಾಯಿದೆ. ಆದ್ರೆ ಈವರೆಗೂ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗಿಲ್ಲ. M.S ಧೋನಿ , ಕೇದಾರ್ ನಾಥ್, ಚಿಚೋರೆಯಂತಹ ಅನೇಕ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದ ಸುಶಾಂತ್ ಸಾವು ಭಾರತೀಯರಿಗೆ ಅತ್ಯಂತ ನೋವುಂಟು ಮಾಡಿತ್ತು. ಅವರ ನಟನೆಯ ಕೊನೆಯ ಸಿನಿಮಾ ದಿಲ್ ಬೇಚಾರ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.
ಹಾಫ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel