ಗಂಗೂಲಿ ರಾಜಕೀಯ ಪ್ರವೇಶ : ಬಿರುಗಾಳಿ ಎಬ್ಬಿಸಿದ ಸಿಪಿಎಂ ಮುಖಂಡನ ಹೇಳಿಕೆ
ಕೋಲ್ಕತ್ತಾ : ಬಿಸಿಸಿಐ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ರಾಜಕೀಯ ಸೇರುವ ಒತ್ತಡದಲ್ಲಿದ್ದಾರೆ.
ಅವರನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳಲು ಬಯಸಿದ್ದರು ಎಂದು ಸಿಪಿಐ ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಹೇಳಿದ್ದು, ಬಿರುಗಾಳಿ ಎಬ್ಬಿಸಿದೆ.
ಈ ವರ್ಷ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸೌರವ್ ಗಂಗೂಲಿ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳನ್ನು ಹರಿದಾಡುತ್ತಿವೆ.
ಬಂಗಾಳದಲ್ಲಿ ದೀದಿ ದರ್ಬಾರಿಗೆ ಬ್ರೇಕ್ ಹಾಕಲು ಬಿಜೆಪಿ ಗಂಗೂಲಿಯವರನ್ನು ಗೂಗ್ಲಿಯಾಗಿ ಬಳಕೆ ಮಾಡಿಕೊಳ್ಳಲು ಪ್ಲಾನ್ ಮಾಡಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಈ ಚರ್ಚೆ,ವದಂತಿಗಳ ಮಧ್ಯೆ ಸಿಪಿಐ ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಈ ಹೇಳಿಕೆ ನೀಡಿರೋದು ಚರ್ಚೆಗೆ ಗ್ರಾಸವಾಗಿದೆ.
ಕೊರೊನಾ ಅಪ್ ಡೇಟ್ | ಕಳೆದ 24 ಗಂಟೇಲಿ 16,505 ಕೇಸ್ ಪತ್ತೆ
‘ಕೆಲವರು ಗಂಗೂಲಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಯಸಿದ್ದರು. ಬಹುಶಃ ಅದು ಅವರ ಮೇಲೆ ಒತ್ತಡ ಹೇರಿದೆ.
ಅವರು ರಾಜಕೀಯ ವ್ಯಕ್ತಿಯಲ್ಲ, ಸೌರವ್ ಎಂದಿಗೂ ಕ್ರೀಡಾ ಐಕಾನ್. ಗಂಗೂಲಿ ಮೇಲೆ ರಾಜಕೀಯಕ್ಕೆ ಸೇರಲು ನಾವು ಒತ್ತಡ ಸೃಷ್ಟಿಸಬಾದರು.
ರಾಜಕೀಯಕ್ಕೆ ಬರಬೇಡಿ ಎಂದು ಕಳೆದ ವಾರ ಸೌರವ್ಗೆ ಹೇಳಿದ್ದೆ, ಅವರು ನನ್ನ ಅಭಿಪ್ರಾಯಗಳನ್ನು ವಿರೋಧಿಸಿರಲಿಲ್ಲ’ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಭಟ್ಟಾಚಾರ್ಯ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









