ಚೀನಾ ಸರ್ಕಾರದ ವಿರುದ್ಧ ಸಂಘರ್ಷ : ಕೋಟ್ಯಾಧಿಪತಿ ಜಾಕ್ ಮಾ ನಾಪತ್ತೆ..!
ಚೀನಾ: ಚೀನಾ ಸರ್ಕಾರದ ವಿರುದ್ಧ ಮಾತನಾಡುವವರಿಗೆ ಉಳಿಗಾಲವಿಲ್ಲ. ಯಾರು ಚೀನಾ ಸರ್ಕಾರದ ನಡೆಯನ್ನ ಪ್ರಶ್ನಿಸಸುತ್ತಾರೋ, ಚೀನಾ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೋ ಅವರು ಎಂಥ ದೊಡ್ಡ ಕುಳಗಳೇ ಆದ್ರು ಅವರನ್ನ ಕಣ್ಮರೆ ಮಾಡಿಸಿಬಿಡುತ್ತೆ ಚೀನಾ ಸರ್ಕಾರ. ಸದ್ಯ ಚೀನಾ ವಿರುದ್ಧ ಸಂಘರ್ಷ ಶುರು ಮಾಡಿದ್ದ ಚೀನಾ ಕೋಟ್ಯಾಧಿಪತಿ ಅಲಿಬಾಬಾ ಗ್ರೂಪ್ ನ ಸ್ಥಾಪಕ, ಉದ್ಯಮಿ ಜಾಕ್ ಮಾ ನನ್ನೂ ನಾಪತ್ತೆ ಮಾಡಿಸಿದೆ ಅನ್ನೋ ಚರ್ಚೆ ಇದೀಗ ವಿಶ್ವಾದ್ಯಂತ ಆರಂಭವಾಗಿದೆ. ಹೌದು 2 ತಿಂಗಳಿನಿಂದ ಜಾಕ್ ಮಾ ನಾಪತ್ತೆಯಾಗಿದ್ದಾರೆ. ಆದ್ರೆ ಎಲ್ಲಿದ್ದಾರೆ, ಏನ್ ಮಾಡ್ತಾಯಿದ್ದಾರೆ… ಯಾವ ಪರಿಸ್ಥಿತಿಯಲಿದ್ದಾರೆ ಅನ್ನೋ ಒಂದು ಸಣ್ಣ ಕ್ಲೂ ಕೂಡ ಸಿಕ್ಕಿಲ್ಲ…
ಚೀನಾ ಸರ್ಕಾರದ ಕಣ್ಗಾವಲಿನಲ್ಲಿದ್ದ ಜಾಕ್ ಮಾ ಅವರು ಅಚ್ಚರಿಯೆಂಬಂತೆ ಕಳೆದೆರಡು ತಿಂಗಳಿಂದ ನಾಪತ್ತೆಯಾಗಿದ್ದಾರೆ. ನವೆಂಬರ್ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಆಫ್ರಿಕಾಸ್ ಬ್ಯುಸಿನೆಸ್ ಹೀರೋಸ್ ಟ್ಯಾಲೆಂಟ್ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳಬೇಕಿದ್ದ ಅವರು, ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿಶೇಷವೆಂದರೆ, ಈ ಕಾರ್ಯಕ್ರಮದ ವೆಬ್ ಸೈಟ್‌ನಿಂದಲೂ ಅವರ ಫೋಟೋ ತೆಗೆದು ಹಾಕಲಾಗಿತ್ತು. ಒಟ್ಟಿನಲ್ಲಿ ಜಾಕ್ ನಿಗೂಢವಾಗಿ ಕಣ್ಮರೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಲಂಚ ತೆಗೆದುಕೊಂಡ ಅಧಿಕಾರಿಗೆ ಗಲ್ಲು ಶಿಕ್ಷೆ : ಎಲ್ಲಿ ಗೊತ್ತಾ..?
ಜಾಕ್ ಮಾ ಮತ್ತು ಚೀನಾ ಆಡಳಿತದ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು 2020ರ ಅಕ್ಟೋಬರ್ ನಲ್ಲಿ, ಶಾಂಘೈನ ಕಾರ್ಯಕ್ರಮದಲ್ಲಿ ಜಾಕ್ ಅವರು ಚೀನಾ ಸರ್ಕಾರ, ಅದರ ನಿಯಂತ್ರಣ ಸಂಸ್ಥೆಗಳು, ಬ್ಯಾಂಕುಗಳ ವಿರುದ್ಧ ಹರಿಹಾಯ್ದಿದ್ದರು. ಚೀನಾದ ಬ್ಯಾಂಕುಗಳನ್ನು ಗಿರವಿ ಅಂಗಡಿಗಳಿಗೆ ಹೋಲಿಸಿದ್ದರು. ಇದರ ಬೆನ್ನಲ್ಲೇ ಅವರ ಆಯಂಟ್ ಗ್ರೂಪ್‌ನ 2.70 ಲಕ್ಷ ಕೋಟಿ ರೂ. ಮೌಲ್ಯದ ಸಾರ್ವಜನಿಕ ಷೇರು ಬಿಡುಗಡೆಯನ್ನೇ ಚೀನಾದ ಅಧಿಕಾರಿಗಳು ತಡೆಹಿಡಿದಿದ್ದರು. ಡಿಸೆಂಬರ್‌ನಲ್ಲಿ ಜಾಕ್ 80,300 ಕೋಟಿ ರೂ. ಕಳೆದುಕೊಂಡರು.
ಅಲಿಬಾಬಾ ಮಾರುಕಟ್ಟೆ ಮೌಲ್ಯ ಶೇ.17 ಪತನಗೊಂಡಿತು. ಅಲಿಬಾಬಾ “ಏಕಸ್ವಾಮ್ಯದ ಚಟುವಟಿಕೆ’ ನಡೆಸುತ್ತಿದೆ ಎಂಬ ಆರೋಪ ದಲ್ಲಿ ಜಾಕ್ ವಿರುದ್ಧ ತನಿಖೆಗೂ ಆದೇಶಿಸಲಾಯಿತು. ಒಂದಾದ ಮೇಲೆ ಒಂದರಂತೆ ಬಂದ ಸಂಕಷ್ಟಗಳು, ಚೀನಾ ಸರ್ಕಾರದ ದ್ವೇಷ ಸಾಧನೆಯ ನಡುವೆಯೇ ಜಾಕ್ ಮಾ ಕಣ್ಮರೆಯಾಗಿದ್ದಾರೆ ಎಂಬ ಅನುಮಾನಗಳು ಮೂಡಿವೆ.
ಮಿಲಿಟರಿ ಬೇಸ್ ಆಸ್ಪತ್ರೆಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ
ಇನ್ನೂ ಜಾಕ್ ಮಾ ಕಳೆದ ವರ್ಷದ ಅಕ್ಟೋಬರ್ 10ರಂದು ಹವಾಮಾನ ವೈಪರೀತ್ಯದ ಸವಾಲು ಎದುರಿಸುವಂಥ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳಿ ಟ್ವೀಟ್ ಮಾಡಿದ್ದರು. ಇದು ಅವರ ಕೊನೆಯ ಟ್ವೀಟ್ ಆಗಿತ್ತು. ಇದೀಗ ಟ್ವಿಟರ್‌ನಲ್ಲಿ ಜಾಕ್ ಮಾ ಮತ್ತು ಅಲಿಬಾಬಾ ಹ್ಯಾಷ್ ಟ್ಯಾಗ್‌ಗಳು ಟ್ರೆಂಡಿಂಗ್ ಆಗಿವೆ.
ಜಾಕ್ ಮಾ ಚೀನಾ ಸರ್ಕಾರವನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಟೀಕಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಜಾಕ್ ಮಾ ಒಡೆತನದ ಅಲಿಬಾಬಾ ಮತ್ತು ಇತರ ಕಂಪನಿಗಳ ಮೇಲೆ ಚೀನಾ ಸರ್ಕಾರವು ಇತ್ತೀಚೆಗೆ ಹಲವು ನಿರ್ಬಂಧಗಳನ್ನೂ ವಿಧಿಸಿತ್ತು. ವಾರ್ಷಿಕ ನೂರಾರು ಕೋಟಿ ಡಾಲರ್ ವ್ಯವಹಾರ ನಡೆಸುತ್ತಿರುವ ಜಾಕ್ ಮಾ ಒಡೆತನದ ಕಂಪನಿಗಳು ಅನೇಕ ಕ್ಷೇತ್ರಗಳಿಗೆ ಉದ್ಯಮವನ್ನು ವಿಸ್ತರಿಸಿಕೊಂಡಿವೆ. ಭಾರತದಲ್ಲಿ ಪೇಟಿಎಂ, ಪೇಟಿಎಂ ಮಾಲ್, ಜೊಮಾಟೊ, ಬಿಗ್ ಬಾಸ್ಕೆಟ್ ಹಾಗೂ ಇ-ಕಾಮರ್ಸ್ ಕಂಪನಿ ಸ್ನ್ಯಾಪ್‌ಡೀಲ್‌ನಲ್ಲಿ ಅಲಿಬಾಬಾ ಹೂಡಿಕೆ ಮಾಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಲಿಬಾಬಾ ಗ್ರೂಪ್ ವಿರುದ್ಧ ಚೀನಾ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಸಾಲ ಮತ್ತು ಗ್ರಾಹಕ ಹಣಕಾಸು ಕಾರ್ಯಾಚರಣೆಯನ್ನು ಮರುರೂಪಿಸುವಂತೆ ಚೀನಾದ ಕೇಂದ್ರ ಬ್ಯಾಂಕ್ ಕಂಪನಿಗೆ ಸೂಚಿಸಿತ್ತು.
ಒಟ್ಟಾರೆ ಚೀನಾದ ಕೋಟ್ಯಾಧೀಶ್ವರ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ನಿಗೂಢವಾಗಿ ನಾಪತ್ತೆಯಾಗಿರೋದರ ಹಿಂದೆ ಚೀನಾ ಸರ್ಕಾರದ ಕೈವಾಡವಿದೆ ಎಂಬ ಅನುಮಾನುಗಳು ಬಲವಾಗಿವೆ. ಜಾಕ್ ಮಾ ಎಲ್ಲಿದ್ದಾರೆ. ಹೇಗಿದ್ದಾರೆ ಎಂಬ ಗೊಂದಲಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








