ADVERTISEMENT
Saturday, September 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಚೀನಾ ಸರ್ಕಾರದ ವಿರುದ್ಧ ಸಂಘರ್ಷ : ಕೋಟ್ಯಾಧಿಪತಿ ಜಾಕ್ ಮಾ ನಾಪತ್ತೆ..!

Namratha Rao by Namratha Rao
January 6, 2021
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಚೀನಾ ಸರ್ಕಾರದ ವಿರುದ್ಧ ಸಂಘರ್ಷ : ಕೋಟ್ಯಾಧಿಪತಿ ಜಾಕ್ ಮಾ ನಾಪತ್ತೆ..!

ಚೀನಾ: ಚೀನಾ ಸರ್ಕಾರದ ವಿರುದ್ಧ ಮಾತನಾಡುವವರಿಗೆ ಉಳಿಗಾಲವಿಲ್ಲ. ಯಾರು ಚೀನಾ ಸರ್ಕಾರದ ನಡೆಯನ್ನ ಪ್ರಶ್ನಿಸಸುತ್ತಾರೋ, ಚೀನಾ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೋ ಅವರು ಎಂಥ ದೊಡ್ಡ ಕುಳಗಳೇ ಆದ್ರು ಅವರನ್ನ ಕಣ್ಮರೆ ಮಾಡಿಸಿಬಿಡುತ್ತೆ ಚೀನಾ ಸರ್ಕಾರ.  ಸದ್ಯ ಚೀನಾ ವಿರುದ್ಧ ಸಂಘರ್ಷ ಶುರು ಮಾಡಿದ್ದ ಚೀನಾ ಕೋಟ್ಯಾಧಿಪತಿ ಅಲಿಬಾಬಾ ಗ್ರೂಪ್‌ ನ ಸ್ಥಾಪಕ, ಉದ್ಯಮಿ ಜಾಕ್‌ ಮಾ ನನ್ನೂ ನಾಪತ್ತೆ ಮಾಡಿಸಿದೆ ಅನ್ನೋ ಚರ್ಚೆ ಇದೀಗ ವಿಶ್ವಾದ್ಯಂತ ಆರಂಭವಾಗಿದೆ. ಹೌದು 2 ತಿಂಗಳಿನಿಂದ ಜಾಕ್ ಮಾ ನಾಪತ್ತೆಯಾಗಿದ್ದಾರೆ. ಆದ್ರೆ ಎಲ್ಲಿದ್ದಾರೆ, ಏನ್ ಮಾಡ್ತಾಯಿದ್ದಾರೆ… ಯಾವ ಪರಿಸ್ಥಿತಿಯಲಿದ್ದಾರೆ ಅನ್ನೋ ಒಂದು ಸಣ್ಣ ಕ್ಲೂ ಕೂಡ ಸಿಕ್ಕಿಲ್ಲ…

Related posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಸಚಿವ ಸತೀಶ್ ಜಾರಕಿಹೊಳಿ ಸುತ್ತ ಇಡಿ ಚಕ್ರವ್ಯೂಹ: ದೆಹಲಿ ಮಟ್ಟಕ್ಕೆ ತಲುಪಿದ ತನಿಖೆಯ ಬಿಸಿ -ಸಚಿವ ಸ್ಥಾನಕ್ಕೆ ಕುತ್ತು ತರುತ್ತಾ ಕಮಿಷನ್ ಆರೋಪ

September 26, 2026
ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಪ್ರಣಾಳಿಕೆ ನಂಬಿದ ರೈತರಿಗೆ ದ್ರೋಹವಾಗಿದೆಯೇ? ಭೂ ಸುಧಾರಣೆ ಭರವಸೆ ಮರೆತ ಸರ್ಕಾರ:ನಮಗೂ ಬಿಜೆಪಿಗೂ ವ್ಯತ್ಯಾಸವೇನು ಎಂದು ಪ್ರಶ್ನಿಸಿ ತಮ್ಮ ಸರ್ಕಾರದ ವಿರುದ್ಧವೇ ಯುದ್ಧ ಸಾರಿದ ಬಿಆರ್ ಪಾಟೀಲ್

September 26, 2026

ಚೀನಾ ಸರ್ಕಾರದ ಕಣ್ಗಾವಲಿನಲ್ಲಿದ್ದ ಜಾಕ್‌ ಮಾ ಅವರು ಅಚ್ಚರಿಯೆಂಬಂತೆ ಕಳೆದೆರಡು ತಿಂಗಳಿಂದ ನಾಪತ್ತೆಯಾಗಿದ್ದಾರೆ. ನವೆಂಬರ್‌ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಆಫ್ರಿಕಾಸ್‌ ಬ್ಯುಸಿನೆಸ್‌ ಹೀರೋಸ್‌ ಟ್ಯಾಲೆಂಟ್‌ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳಬೇಕಿದ್ದ ಅವರು, ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿಶೇಷವೆಂದರೆ, ಈ ಕಾರ್ಯಕ್ರಮದ ವೆಬ್‌ ಸೈಟ್‌ನಿಂದಲೂ ಅವರ ಫೋಟೋ ತೆಗೆದು ಹಾಕಲಾಗಿತ್ತು. ಒಟ್ಟಿನಲ್ಲಿ ಜಾಕ್‌ ನಿಗೂಢವಾಗಿ ಕಣ್ಮರೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಲಂಚ ತೆಗೆದುಕೊಂಡ ಅಧಿಕಾರಿಗೆ ಗಲ್ಲು ಶಿಕ್ಷೆ : ಎಲ್ಲಿ ಗೊತ್ತಾ..?

ಜಾಕ್‌ ಮಾ ಮತ್ತು ಚೀನಾ ಆಡಳಿತದ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು 2020ರ ಅಕ್ಟೋಬರ್‌ ನಲ್ಲಿ, ಶಾಂಘೈನ ಕಾರ್ಯಕ್ರಮದಲ್ಲಿ ಜಾಕ್‌ ಅವರು ಚೀನಾ ಸರ್ಕಾರ, ಅದರ ನಿಯಂತ್ರಣ ಸಂಸ್ಥೆಗಳು, ಬ್ಯಾಂಕುಗಳ ವಿರುದ್ಧ ಹರಿಹಾಯ್ದಿದ್ದರು. ಚೀನಾದ ಬ್ಯಾಂಕುಗಳನ್ನು ಗಿರವಿ ಅಂಗಡಿಗಳಿಗೆ ಹೋಲಿಸಿದ್ದರು. ಇದರ ಬೆನ್ನಲ್ಲೇ ಅವರ ಆಯಂಟ್‌ ಗ್ರೂಪ್‌ನ 2.70 ಲಕ್ಷ ಕೋಟಿ ರೂ. ಮೌಲ್ಯದ ಸಾರ್ವಜನಿಕ ಷೇರು ಬಿಡುಗಡೆಯನ್ನೇ ಚೀನಾದ ಅಧಿಕಾರಿಗಳು ತಡೆಹಿಡಿದಿದ್ದರು. ಡಿಸೆಂಬರ್‌ನಲ್ಲಿ ಜಾಕ್‌ 80,300 ಕೋಟಿ ರೂ. ಕಳೆದುಕೊಂಡರು.

ಅಲಿಬಾಬಾ ಮಾರುಕಟ್ಟೆ ಮೌಲ್ಯ ಶೇ.17 ಪತನಗೊಂಡಿತು. ಅಲಿಬಾಬಾ “ಏಕಸ್ವಾಮ್ಯದ ಚಟುವಟಿಕೆ’ ನಡೆಸುತ್ತಿದೆ ಎಂಬ ಆರೋಪ ದಲ್ಲಿ ಜಾಕ್‌ ವಿರುದ್ಧ ತನಿಖೆಗೂ ಆದೇಶಿಸಲಾಯಿತು. ಒಂದಾದ ಮೇಲೆ ಒಂದರಂತೆ ಬಂದ ಸಂಕಷ್ಟಗಳು, ಚೀನಾ ಸರ್ಕಾರದ ದ್ವೇಷ ಸಾಧನೆಯ ನಡುವೆಯೇ ಜಾಕ್‌ ಮಾ ಕಣ್ಮರೆಯಾಗಿದ್ದಾರೆ ಎಂಬ ಅನುಮಾನಗಳು ಮೂಡಿವೆ.

ಮಿಲಿಟರಿ ಬೇಸ್ ಆಸ್ಪತ್ರೆಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ

ಇನ್ನೂ ಜಾಕ್ ಮಾ ಕಳೆದ ವರ್ಷದ ಅಕ್ಟೋಬರ್‌ 10ರಂದು ಹವಾಮಾನ ವೈಪರೀತ್ಯದ ಸವಾಲು ಎದುರಿಸುವಂಥ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳಿ ಟ್ವೀಟ್‌ ಮಾಡಿದ್ದರು. ಇದು ಅವರ ಕೊನೆಯ ಟ್ವೀಟ್ ಆಗಿತ್ತು.  ಇದೀಗ ಟ್ವಿಟರ್‌ನಲ್ಲಿ ಜಾಕ್‌ ಮಾ ಮತ್ತು ಅಲಿಬಾಬಾ ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡಿಂಗ್‌ ಆಗಿವೆ.

 ಜಾಕ್ ಮಾ ಚೀನಾ ಸರ್ಕಾರವನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಟೀಕಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಜಾಕ್ ಮಾ ಒಡೆತನದ ಅಲಿಬಾಬಾ ಮತ್ತು ಇತರ ಕಂಪನಿಗಳ ಮೇಲೆ ಚೀನಾ ಸರ್ಕಾರವು ಇತ್ತೀಚೆಗೆ ಹಲವು ನಿರ್ಬಂಧಗಳನ್ನೂ ವಿಧಿಸಿತ್ತು. ವಾರ್ಷಿಕ ನೂರಾರು ಕೋಟಿ ಡಾಲರ್ ವ್ಯವಹಾರ ನಡೆಸುತ್ತಿರುವ ಜಾಕ್ ಮಾ ಒಡೆತನದ ಕಂಪನಿಗಳು ಅನೇಕ ಕ್ಷೇತ್ರಗಳಿಗೆ ಉದ್ಯಮವನ್ನು ವಿಸ್ತರಿಸಿಕೊಂಡಿವೆ. ಭಾರತದಲ್ಲಿ ಪೇಟಿಎಂ, ಪೇಟಿಎಂ ಮಾಲ್, ಜೊಮಾಟೊ, ಬಿಗ್‌ ಬಾಸ್ಕೆಟ್‌ ಹಾಗೂ ಇ-ಕಾಮರ್ಸ್ ಕಂಪನಿ ಸ್ನ್ಯಾಪ್‌ಡೀಲ್‌ನಲ್ಲಿ ಅಲಿಬಾಬಾ ಹೂಡಿಕೆ ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಲಿಬಾಬಾ ಗ್ರೂಪ್‌ ವಿರುದ್ಧ ಚೀನಾ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಸಾಲ ಮತ್ತು ಗ್ರಾಹಕ ಹಣಕಾಸು ಕಾರ್ಯಾಚರಣೆಯನ್ನು ಮರುರೂಪಿಸುವಂತೆ ಚೀನಾದ ಕೇಂದ್ರ ಬ್ಯಾಂಕ್ ಕಂಪನಿಗೆ ಸೂಚಿಸಿತ್ತು.

ಒಟ್ಟಾರೆ ಚೀನಾದ ಕೋಟ್ಯಾಧೀಶ್ವರ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ನಿಗೂಢವಾಗಿ ನಾಪತ್ತೆಯಾಗಿರೋದರ ಹಿಂದೆ ಚೀನಾ ಸರ್ಕಾರದ ಕೈವಾಡವಿದೆ ಎಂಬ ಅನುಮಾನುಗಳು ಬಲವಾಗಿವೆ. ಜಾಕ್ ಮಾ ಎಲ್ಲಿದ್ದಾರೆ. ಹೇಗಿದ್ದಾರೆ ಎಂಬ ಗೊಂದಲಗಳಿವೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: alibabachainaJack Ma
ShareTweetSendShare
Join us on:

Related Posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಸಚಿವ ಸತೀಶ್ ಜಾರಕಿಹೊಳಿ ಸುತ್ತ ಇಡಿ ಚಕ್ರವ್ಯೂಹ: ದೆಹಲಿ ಮಟ್ಟಕ್ಕೆ ತಲುಪಿದ ತನಿಖೆಯ ಬಿಸಿ -ಸಚಿವ ಸ್ಥಾನಕ್ಕೆ ಕುತ್ತು ತರುತ್ತಾ ಕಮಿಷನ್ ಆರೋಪ

by Shwetha
September 26, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧದ ಇಡಿ ತನಿಖೆ ಅತಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಬೆಂಗಳೂರು ಮಟ್ಟದ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಪ್ರಣಾಳಿಕೆ ನಂಬಿದ ರೈತರಿಗೆ ದ್ರೋಹವಾಗಿದೆಯೇ? ಭೂ ಸುಧಾರಣೆ ಭರವಸೆ ಮರೆತ ಸರ್ಕಾರ:ನಮಗೂ ಬಿಜೆಪಿಗೂ ವ್ಯತ್ಯಾಸವೇನು ಎಂದು ಪ್ರಶ್ನಿಸಿ ತಮ್ಮ ಸರ್ಕಾರದ ವಿರುದ್ಧವೇ ಯುದ್ಧ ಸಾರಿದ ಬಿಆರ್ ಪಾಟೀಲ್

by Shwetha
September 26, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಸ್ವಪಕ್ಷದ ಹಿರಿಯ ಶಾಸಕರಿಂದಲೇ ಮತ್ತೆ ಭಾರಿ ಮುಜುಗರ ಎದುರಾಗಿದೆ. ಈ ಹಿಂದೆ ವಸತಿ ಇಲಾಖೆಯ ಅವ್ಯವಹಾರದ ಬಗ್ಗೆ ಧ್ವನಿ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಹಬ್ಬದ ಸಂಭ್ರಮ ಹೆಚ್ಚಿಸಲು ಕೇಂದ್ರದಿಂದ ಸಿಹಿ ಸುದ್ದಿ: ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಮುಹೂರ್ತ ಫಿಕ್ಸ್

by Shwetha
September 26, 2026
0

ನವದೆಹಲಿ: ದಸರಾ ಮತ್ತು ದೀಪಾವಳಿ ಹಬ್ಬದ ಸಡಗರದಲ್ಲಿರುವ ದೇಶದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಅತಿ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಅಡುಗೆ ಮನೆಯ ಬಜೆಟ್ ಏರುಪೇರಾಗುತ್ತಿರುವ ಈ ಹೊತ್ತಿನಲ್ಲಿ,...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಒಂದು ಕೊಲೆಗೆ ಕ್ಷಮಾದಾನ ಸಿಕ್ಕರೆ ನಾನು ಮೊದಲು ಕೊಲ್ಲುವುದು ಮುಖ್ಯ ಚುನಾವಣಾ ಆಯುಕ್ತರನ್ನೇ:ವಿಐಪಿ ಮುಖ್ಯಸ್ಥ ಮುಕೇಶ್ ಸಾಹನಿ ಆಕ್ರೋಶ

by Shwetha
September 26, 2026
0

ಪಟ್ನಾ: ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬಿಹಾರದ ಮಾಜಿ ಸಚಿವ ಹಾಗೂ ವಿಕಾಸಶೀಲ ಇನ್ಸಾನ್ ಪಾರ್ಟಿ ಮುಖ್ಯಸ್ಥ ಮುಕೇಶ್ ಸಾಹನಿ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

by Shwetha
September 26, 2026
0

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿರುವ ಬೆನ್ನಲ್ಲೇ, ಗೃಹ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಆಯೋಗದ ವಿರುದ್ಧ ಅತ್ಯಂತ ಕಟುವಾದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram