ಕಾಸರಗೋಡು : ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದಕ್ಕೆ ಕೇರಳ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಅಲ್ಲಿನ ಯುವ ಸಮುದಾಯ ಆರೋಪಿಸುತ್ತಿದೆ. ಅಲ್ಲದೆ ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ ಎಂದು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಅಭಿಯಾನಕ್ಕೆ ಮುಂದಾಗಿದೆ.
#MakeUtOfKasaragod, #FreeKasaragodFromKL ಎಂಬ ಹ್ಯಾಷ್ ಟ್ಯಾಗ್ ಮೂಲಕ ಕೇಂದ್ರದ ಗಮನ ಸೆಳೆಯಲು ಯುವ ಸಮುದಾಯ ಸಜ್ಜಾಗಿದೆ.
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಕಾಸರಗೋಡು ಆಟಕ್ಕುಂಟು ಲೆಕ್ಕಕ್ಕಿಲ್ಲ, ಕೇರಳಕ್ಕೆ ಬೇಡವಾದ ಕಾಸರಗೋಡು ಕೇಂದ್ರಾಡಳಿತ ಪ್ರದೇಶವಾಗಲಿ, ಕನ್ನಡಿಗರು ಮತ್ತು ತುಳುವರು ಹೆಚ್ಚಿರುವ ಕಾಸರಗೋಡನ್ನು ಕೇರಳ ನಿರ್ಲಕ್ಷ್ಯಿಸುತ್ತಿದೆ ಎಂದು ಟ್ವೀಟ್ ಮಾಡಲಾಗುತ್ತಿದೆ.








