ADVERTISEMENT
Saturday, August 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಂಪುಟ ವಿಸ್ತರಣೆಯೋ..ಪುನಾರಚನೆಯೋ..! ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಪುನಾರಚನೆ ಇಲ್ಲ ಅಂತಿದಾರೆ ಮಂತ್ರಿಗಳು..?

Kariyappa N by Kariyappa N
January 12, 2021
in Newsbeat, Politics, Samagra karnataka, Uncategorized, ರಾಜ್ಯ
cabinet
Share on FacebookShare on TwitterShare on WhatsappShare on Telegram

ಬೆಂಗಳೂರು: ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸಚಿವ ಸ್ಥಾನಕ್ಕಾಗಿ ಹಾಲಿ ಶಾಸಕರು ತೀವ್ರ ಲಾಬಿ ನಡೆಸುತ್ತಿರುವಾಗಲೇ, 3-4 ಸಚಿವರು ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
6ರಿಂದ 7 ಶಾಸಕರಿಗೆ ಸಚಿವ ಭಾಗ್ಯ ಸಿಗುವ ಸಾಧ್ಯತೆ ಇದ್ದರೆ, 3-4 ಮಂದಿ ಹಾಲಿ ಸಚಿವರನ್ನು ಸಚಿವ ಸಂಪುಟದಿಂದ ಕೊಕ್ ನೀಡಿ ಆ ಸ್ಥಾನಕ್ಕೆ ಹೊಸಬರಿಗೆ ಮಂತ್ರಿ ಭಾಗ್ಯ ಕರುಣಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

minsiter
ಸದ್ಯದ ಮೂಲಗಳ ಪ್ರಕಾರ ಅಬಕಾರಿ ಸಚಿವ ಹೆಚ್.ನಾಗೇಶ್, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಗೆ ಸಂಪುಟದಿಂದ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ ಕೆಲ ಸಚಿವರು ಮಾತ್ರ ಈ ಸಂಗತಿಯನ್ನು ಅಲ್ಲಗಳೆದಿದ್ದಾರೆ.

Related posts

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

August 15, 2026
ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್  ಆಕ್ರೋಶ!

ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್ ಆಕ್ರೋಶ!

August 15, 2026

ಹೆಚ್.ನಾಗೇಶ್ ಬಿಎಸ್‍ವೈ ಭೇಟಿಯಾಗಿದ್ದೇಕೆ..!
ಸಚಿವ ಸಂಪುಟ ಪುನಾರಚನೆಯಾದರೆ ಅಬಕಾರಿ ಸಚಿವ ನಾಗೇಶ್‍ಗೆ ಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಇದರಿಂದ ಆತಂಕಗೊಂಡ ಹೆಚ್. ನಾಗೇಶ್ ಇಂದು ಮುಂಜಾನೆಯೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮನ್ನು ಸಂಪುಟದಿಂದ ಕೈಬಿಡದಂತೆ ಮನವಿ ಮಾಡಿದ್ದಾರೆ. ಆದರೆ, ಬಿಎಸ್‍ವೈ ಭೇಟಿ ಬಳಿಕ ಕೋಪದಿಂದಲೇ ಹೊರಬಂದ ಹೆಚ್. ನಾಗೇಶ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅವರನ್ನು ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಪುನಾರಚನೆ ಇಲ್ಲವೇ ಇಲ್ಲ ಎಂದ ಪ್ರಭು ಚೌಹಾಣ್..
ಸಂಪುಟ ಪುನಾರಚನೆಯಾದರೆ ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್‍ರನ್ನೂ ಕ್ಯಾಬಿನೆಟ್‍ನಿಂದ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ವರದಿಗಳನ್ನು ತಳ್ಳಿ ಹಾಕಿರುವ ಪ್ರಭುಚೌಹಾಣ್, ಸಿಎಂ ಬಿಎಸ್ ಯಡಿಯೂರಪ್ಪ ರಾಷ್ಟ್ರೀಯ ನಾಯಕರೊಂದಿಗೆ ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಮಾತ್ರ ಇದೆ ವಿನಃ ಪುನರ್ ರಚನೆ ಅಂತೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ನಾನು ಮೂವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ, ನಮ್ಮ ಬಿಜೆಪಿ ಪಕ್ಷ ನನಗೆ ಮನೆ ಇದ್ದಹಾಗೆ. ನಮ್ಮ ಹೈ ಕಮಾಂಡ್ ಸೂಚನೆಯಂತೆ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದಿದ್ದಾರೆ.
ಒಟ್ಟಾರೆ, ಸಚಿವ ಸಂಪುಟ ಕ್ಷಣಗಣನೆ ಆರಂಭವಾಗಿರುವಾಗಲೇ ಯಾರು ಇನ್, ಯಾರು ಔಟ್ ಎಂಬ ಕುತೂಹಲ ಹೆಚ್ಚಿಸಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: B S YADIYURAPPACabinet Expansioncabinet reshuffleministers
ShareTweetSendShare
Join us on:

Related Posts

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

by Shwetha
August 15, 2026
0

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೊರಡಿಸಲಾಗಿದ್ದ ಗುಟ್ಕಾ ಮಾರಾಟ ನಿಷೇಧ ಆದೇಶವನ್ನು ತಕ್ಷಣವೇ ವಾಪಸ್ ಪಡೆಯುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ...

ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್  ಆಕ್ರೋಶ!

ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್ ಆಕ್ರೋಶ!

by Shwetha
August 15, 2026
0

ಲಕ್ನೋ: ಭಾರತದ ವಿಭಜನೆ ಮತ್ತು ಆ ಸಮಯದಲ್ಲಿ ನಡೆದ ಅತ್ಯಂತ ಭೀಕರವಾದ ರಕ್ತಪಾತಕ್ಕೆ ಕಾಂಗ್ರೆಸ್ ಪಕ್ಷದ ಅಧಿಕಾರದ ದಾಹವೇ ನೇರ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ...

ಸರ್ಕಾರಿ ಶಾಲಾ-ಕಾಲೇಜುಗಳ ಆವರಣದಲ್ಲಿ ಧರ್ಮಾಧಾರಿತ ಕಾರ್ಯಕ್ರಮಗಳಿಗೆ ಬ್ರೇಕ್

ಸರ್ಕಾರಿ ಶಾಲಾ-ಕಾಲೇಜುಗಳ ಆವರಣದಲ್ಲಿ ಧರ್ಮಾಧಾರಿತ ಕಾರ್ಯಕ್ರಮಗಳಿಗೆ ಬ್ರೇಕ್

by Shwetha
August 15, 2026
0

ಸರ್ಕಾರಿ ಶಾಲಾ-ಕಾಲೇಜುಗಳ ಆವರಣದಲ್ಲಿ ನಡೆಯುವ ಧರ್ಮಾಧಾರಿತ ಸಭೆ-ಸಮಾರಂಭಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಸಂಬಂಧ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸಚಿವ ಸಂಪುಟ...

ಸಮಯದ ಕೊರತೆ: ವಿಜಯನಗರ ಜಿಲ್ಲಾ ಉಸ್ತುವಾರಿ ಹೊಣೆ ನಿರಾಕರಿಸಿದ ಜಮೀರ್

ಸಮಯದ ಕೊರತೆ: ವಿಜಯನಗರ ಜಿಲ್ಲಾ ಉಸ್ತುವಾರಿ ಹೊಣೆ ನಿರಾಕರಿಸಿದ ಜಮೀರ್

by Shwetha
August 15, 2026
0

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಮಯದ ಕೊರತೆಯನ್ನು ಕಾರಣವಾಗಿಸಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ....

ಜಮೀರ್ ನಷ್ಟು ದೇಶಪ್ರೇಮ ಬಿಜೆಪಿ ನಾಯಕರಿಗಿಲ್ಲ- ಸ್ವಾತಂತ್ರ್ಯ ದಿನದ ಧ್ವಜಾರೋಹಣ ವಿವಾದ: ದೇಶಕ್ಕೇ ಮಾಡಿದ ಅಪಮಾನ ಎಂದ ಆರ್ ಅಶೋಕ್!

ಜಮೀರ್ ನಷ್ಟು ದೇಶಪ್ರೇಮ ಬಿಜೆಪಿ ನಾಯಕರಿಗಿಲ್ಲ- ಸ್ವಾತಂತ್ರ್ಯ ದಿನದ ಧ್ವಜಾರೋಹಣ ವಿವಾದ: ದೇಶಕ್ಕೇ ಮಾಡಿದ ಅಪಮಾನ ಎಂದ ಆರ್ ಅಶೋಕ್!

by Shwetha
August 15, 2026
0

ಬೆಂಗಳೂರು: ಆಗಸ್ಟ್ 15 ರ ಇಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಜಿಲ್ಲಾ ಮಟ್ಟದ ಧ್ವಜಾರೋಹಣದಿಂದ ವಿನಾಯಿತಿ ಕೋರಿ ಸಚಿವ ಜಮೀರ್ ಅಹ್ಮದ್ ಖಾನ್ ಪತ್ರ ಬರೆದಿರುವ ವಿಚಾರವೀಗ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram