‘ಕೊರೊನಾ ಲಸಿಕೆ ಸೇಫಾ’ : ವ್ಯಾಕ್ಸಿನ್ ಬಗ್ಗೆ ‘ದೀದಿ’ ಅನುಮಾನ!
ಕೊಲ್ಕತ್ತಾ : ಕೊರೊನಾ ಲಸಿಕೆಯ ಸಾಮರ್ಥ್ಯದ , ಸುರಕ್ಷತೆಯ ಬಗ್ಗೆ ಅನೇಕ ರಾಜಕೀಯ ನಾಯಕರು , ವಿಪಕ್ಷಗಳ ಮುಖಂಡರು ಪ್ರಶ್ನೆಗಳನ್ನ ಮಾಡ್ತಿದ್ದು, ಅನುಮಾನಗಳನ್ನ ವ್ಯಕ್ತಪಡಿಸ್ತಾಯಿದ್ದಾರೆ. ಇದೀಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಈ ಪ್ರಶ್ನೆ ಎತ್ತಿದ್ದಾರೆ. ಲಸಿಕೆ ಆಂದೋಲನದ ಬಗ್ಗೆ ಪ್ರಧಾನ ನರೇಂದ್ರ ಮೋದಿ ಅವರು ನಿನ್ನೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಮಾಲೋಚನಾ ಸಭೆ ನಡೆಸಿದರು. ಆ ವೇಳೆ ಮಾತನಾಡಿರುವ ಮಮತಾ ಬ್ಯಾನರ್ಜಿ ಅವರು, ಕೇಂದ್ರ ಸರ್ಕಾರ ಅಂಗೀಕಾರ ಮಾಡಿರುವ ಎರಡು ಲಸಿಕೆಗಳಲ್ಲಿ ರಾಜ್ಯ ಸರ್ಕಾರ ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸೆಲ್ಫಿ ಕ್ರೇಜ್ ಗೆ ಬಿದ್ದು ಕೊಚ್ಚಿ ಹೋದ ಯುವತಿ…!
ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಂಡು ರಾಜ್ಯಗಳ ಮೇಲೆ ಹೇರುತ್ತಿದೆ. ರಾಜ್ಯಗಳು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಬೇಕು ಎಂದು ಮಮತಾ ಪ್ರತಿಪಾದಿಸಿದ್ದಾರೆ.
ಅಲ್ಲದೇ ಲಸಿಕೆ ಸುರಕ್ಷತೆಯಲ್ಲೇನಾದರೂ ಲೋಪ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಲಸಿಕೆ ಆಯ್ಕೆ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಎಂದು ಹೇಳಿದ್ದಾರೆ. ಇನ್ನೂ ದೀದಿ ಪ್ರಶ್ನೆಗೆ ಉತ್ತರ ನೀಡಿರುವ ನೀತಿ ಆಯೋಗದ ಸದಸ್ಯ ಪ್ರೊ. ಡಾ.ವಿನೋದ್ ಕೆ.ಪೌಲ್ ಎರಡು ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಲಸಿಕೆ ಬಗ್ಗೆಗಿನ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ವಿಶ್ವಕ್ಕೆ ವೈರಸ್ ಹಬ್ಬಿದ ಚೀನಾ ಅಧ್ಯಕ್ಷರ ಮುಂದಿನ ಗುರಿ ಏನಂತೆ ನೋಡಿ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel