ಥೂ ಎಂಥ ಮಗ ಇವನು: ಬುದ್ಧಿವಾದ ಹೇಳಿದ ತಂದೆಯ ಬರ್ಬರ ಕೊಲೆ
ಊರೆಲ್ಲಾ ಸಾಲ ಮಾಡ್ಕೊಂಡು ತಿರುಗಾಡ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ ಕಾರಣಕ್ಕೆ ತಂದೆಯನ್ನೇ ಕಲ್ಲಿನಿಂದ ಜಜ್ಜಿ, ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಚಿಕ್ಕಮಗಳೂರಿನ ಕಡೂರಿನ ಮಾಚಗೊಂಡನಹಳ್ಳಿಯಲ್ಲಿ ನಡೆದಿದೆ.
ತಮ್ಮೇಗೌಡ ಎಂಬಾತನನ್ನು ಮಗ ಸತೀಶ ಎಂಬಾತ ಹತ್ಯೆ ಮಾಡಿದ್ದಾನೆ. ಸತೀಶ್ 2 ವರ್ಷದ ಹಿಂದೆ ಖಾಸಗಿ ಫೈನಾನ್ಸ್ ನಿಂದ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ದ. ಇದಕ್ಕೆ ಅಪ್ಪನ ಪಹಣಿಯನ್ನೇ ನೀಡಿ, ಸಾಲದ ಕಂತು ನೇರವಾಗಿ ಅಪ್ಪನ ಖಾತೆಯಿಂದಲೇ ಕಟ್ ಆಗುವಂತೆ ಮಾಡಿದ್ದ.
ಥೂ ಇವೆನೆಂತ ನೀಚ ಸಹೋದರ… ಕುಡಿದ ಮತ್ತಿನಲ್ಲಿ ವಿವಾಹಿತ ಸಹೋದರಿಯನ್ನೇ ರೇಪ್ ಮಾಡಿ, ವಿಡಿಯೋ ಮಾಡಿಸಿದ
2 ವರ್ಷದಿಂದ ಒಂದೂವರೆ ಲಕ್ಷಕ್ಕೂ ಅಧಿಕ ಹಣ ತಮ್ಮೇಗೌಡರಿಗೆ ಗೊತ್ತಾಗದಂತೆ ಅವರ ಖಾತೆಯಿಂದಲೇ ಕಟ್ ಆಗಿತ್ತು. ಖಾತೆಯಲ್ಲಿ ಬ್ಯಾಲೆನ್ಸ್ ಮುಗಿದ ಮೇಲೆ ಬ್ಯಾಂಕಿನವರು ಸತೀಶನನ್ನು ಹುಡುಕಿಕೊಂಡು ಬಂದಿದ್ದರು. ಇದರಿಂದ ನೊಂದ ತಂದೆ ಸಾಲ ತೀರಿಸದ ಮಗನನ್ನು ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೆ ಸತೀಶ ಅಪ್ಪನನ್ನು ಊರಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ರೈತನಾಗಿದ್ದ ತಂದೆ ಕಷ್ಟ ಪಟ್ಟು ದುಡಿಮೆ ಮಾಡ್ತಿದ್ರೆ ಈತ ಶೋಕಿ ಮಾಡಿಕೊಂಡು, ಪೋಲಿ ಬಿದ್ದಿದ್ದ. ವಿಷಯ ತಿಳಿದು ಸಖರಾಯಪಟ್ಟಣ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








