ರೊಚ್ಚಿಗೆದ್ದ ಮೂಲ ಬಿಜೆಪಿಗರು : ಭುಗಿಲೆದ್ದ ಅಸಮಾಧಾನದ ಬೆಂಕಿ..!
ಬೆಂಗಳೂರು : ನೂತನ ಸಚಿವರ ಹೆಸರು ಘೋಷಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಕಟ್ಟೆ ಒಡೆದಿದೆ. ಮೂಲ ಬಿಜೆಪಿಗರು, ಸಚಿವಾಕಾಂಕ್ಷಿಗಳು ಬಹಿರಂಗವಾಗಿಯೇ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಅನ್ಯ ಮಾರ್ಗದಲ್ಲಿ, ಬ್ಲ್ಯಾಕ್ ಮೇಲ್ ಮಾಡಿ, ಹಣ ಕೊಟ್ಟು, ಬಕೇಟ್ ಹಿಡಿದವರಿಗೆ ಮಂತ್ರಿಸ್ಥಾನ ಸಿಕ್ಕಿದೆ. ಪಕ್ಷಕ್ಕಾಗಿ ವರ್ಷಗಳಗಟ್ಟಲೆ ದುಡಿದವರಿಗೆ ಈಗ ಬೆಲೆ ಇಲ್ಲ ಎಂದು ಬಿಜೆಪಿ ಮೂಲ ಶಾಸಕರು ಬೆಂಕಿಕಾರುತ್ತಿದ್ದಾರೆ.
ನೂತನ ಸಚಿವರ ಹೆಸರು ಫೈನಲ್ ಆಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಂ.ಪಿ.ರೇಣುಕಾಚಾರ್ಯ, ನಾನು ನನ್ನ ಕ್ಷೇತ್ರದ ಕೆಲಸ ಮಾಡಿದ್ದೇನೆ. ನಾನು ನೇರ ಹಾಗೂ ನಿಷ್ಠುರವಾಗಿ ಮಾತನಾಡುತ್ತೇನೆ.
ಅದೇ ನನಗೆ ಇಂದು ಮುಳುವಾಗಿದೆ ಅನಿಸುತ್ತಿದೆ.ನಾನು ಲಾಬಿ ಮಾಡಬಹುದಾಗಿತ್ತು. ಆದ್ರೆ ಎಂದು ನಾನು ಆ ರೀತಿ ಮಾಡಿಲ್ಲ. ಸರ್ಕಾರ ಬೆಂಗಳೂರು, ಬೆಳಗಾವಿಗೆ ಸೀಮಿತವಾಗಿದೆ ಎಂದು ಕಣ್ಣೀರಾಕಿದರು.
ತಿಪ್ಪಾರೆಡ್ಡಿ ಮಾತನಾಡಿ, ಈ ಬಾರಿ ಸಂಪುಟದಲ್ಲಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಒಂದಿಬ್ಬರಿಗೆ ಸಿಕ್ಕಿದೆ, ಆದರೆ ಸೋತ ಯೋಗೇಶ್ವರ್ ಮಂತ್ರಿ ಸ್ಥಾನ ಯಾಕೆ ಕೊಡುತ್ತಾರೆ ಎಂಬುದು ನನಗೆ ಆಶ್ಚರ್ಯವಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಮಾತನಾಡಿ, ಬ್ಲ್ಯಾಕ್ ಮೇಲ್ ಮಾಡುವವರಿಗೆ, ಹಣ ನೀಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಕೆಲವರು ಸಿಡಿ ತೋರಿಸಿ ಯಡಿಯೂರಪ್ಪರನ್ನ ಹೆದರಿಸಿ ಸಚಿವರಾಗಿದ್ದಾರೆ.
ಸಂಕ್ರಮಣದ ಉತ್ತರಾಯಣ ಸಿಎಂ ಯಡಿಯೂರಪ್ಪ ಅದಃಪತನ ಆರಂಭವೆಂದು ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮದಾಸ್ ಟ್ವೀಟ್ ಮಾಡಿ, ನಾನೊಬ್ಬ ನಿಜವಾದ ಸ್ವಯಂಸೇವಕ , ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇವರಿಷ್ಟೆ ಅಲ್ಲದೇ ರಾಜ್ಯದ ಹಲವಾರು ಬಿಜೆಪಿ ಶಾಸಕರು ಮಾಧ್ಯಮಗಳ ಮುಂದೆ ಸದ್ಯ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










