ಸಲಾರ್ ಮುಹೂರ್ತ : ‘ಬಾಹುಬಲಿ’ ಜೊತೆ ರಾಖಿಭಾಯ್..!
ಇಡೀ ಬಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ಕಡೆ ಮುಖ ಮಾಡುವಂತೆ ಮಾಡಿರುವ ನಿರ್ದೇಶಕ ಪ್ರಸಾಂತ್ ನೀಲ್ ಅವರು ಕೆಜಿಎಫ್ ಸಿನಿಮಾದ ಬಳಿಕ ಇದೀಗ ಟಾಲಿವುಡ್ ನ ಬಾಹುಬಲಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿರೋ ವಿಚಾರ ಹೊಸದೇನಲ್ಲ. ಪ್ರಭಾಸ್ ಹಾಗೂ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಹೈಬಜೆಟ್ , ಹೈ ವೋಲ್ಟೇಜ್ ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗ್ತಿದೆ. ಸಿನಿಮಾ ದ ಟೈಟಲ್ ಇಂದ ಹಿಡಿದು ಕಾಸ್ಟ್ ಅಂಡ್ ಕ್ರೀವ್ ವರೆಗೂ ಸುದ್ದಿಯಲ್ಲೇ ಇದೆ. ಇದೀಗ ಈ ಸಿನಿಮಾದ ಮುಹೂರ್ತ ಇಂದು ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಜ. 18ಕ್ಕೆ ‘ಮದಯಾನೈ’ ಆಗಿ ತಮಿಳಿನಲ್ಲಿ ಬರ್ತಿದ್ದಾರೆ ರೋರಿಂಗ್ ಸ್ಟಾರ್..!
ವಿಶೇಷ ಅಂದ್ರೆ ಪ್ರಭಾಸ್ ಸಲಾರ್ ಮುಹೂರ್ತದ ಕಾರ್ಯಕ್ರಮದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದು ಅಲ್ಲದೇ ಯಶ್ ಹಾಗೂ ಪ್ರಭಾಸ್ ಜೊತೆಯಾಗಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಇನ್ನೂ ಇಬ್ಬರು ಬಿಗ್ ಸ್ಟಾರ್ ಗಳು ಒಟ್ಟಾಗಿರುವುದನ್ನ ನೋಡಿ ನೆಟ್ಟಿಗರು ಥ್ರಿಲ್ ಆಗಿದ್ದಾರೆ.

ಸಲಾರ್ ಸಿನಿಮಾಗೆ ಇಂದು ಅದ್ದೂರಿಯಾಗಿ ಪೂಜೆ ಮಾಡುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಪೂಜಾ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಲಾರ್ ಸಿನಿಮಾ ಅನೌನ್ಸ್ ಆದಾಗಿನಿಂದ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇಂದು ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಸಲಾರ್ ಸಿನಿಮಾ ತಂಡದವರಾದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ಯಶ್ ಸೇರಿದಂತೆ ಅನೇಕರು ಹಾಜರಿದ್ದರು.
ಕೊರೊನಾ ತವರು ಚೀನಾದಲ್ಲಿ 8 ತಿಂಗಳ ಬಳಿಕ ಕೊರೋನಾ ಸೋಂಕಿಗೆ ಓರ್ವ ಬಲಿ..!
ಇನ್ನೂ ಇದೇ ತಿಂಗಳ ಕೊನೆಯಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಸದ್ಯ ಪ್ರಶಾಂತ್ ನೀಲ್ ಅವರು ಕೆಜಿಎಫ್-2 ಸಿನಿಮಾದ ಕೆಸಲಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಬಹುನಿಋಇಕ್ಷೆಯ ಸಿನಿಮಾಗಳಲ್ಲಿ ಓಮದಾಗಿರೋ ರಾಧೆ ಶ್ಯಾಮ್ ಚಿತ್ರೀಕರಣವನ್ನೂ ಮುಗಿಸಿಕೊಂಡಿರುವ ಪ್ರಭಾಸ್ ಸಲಾರ್ ಗೆ ತಯಾರಾಗ್ತಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








