ದೆಹಲಿ: ಕನಿಷ್ಠ ತಾಪಮಾನ 5.7 ಡಿಗ್ರಿ ಸೆಲ್ಸಿಯಸ್ ದಾಖಲು
ನವದೆಹಲಿ: ನವದೆಹಲಿಯಲ್ಲಿ ತಾಪಮಾನ ದಿನೇ ದಿನೇ ಕಡಿಮೆಯಾಗ್ತಲೇ ಇದ್ದು, ಕೊರೆಯುವ ಚಳಿಗೆ ದಿಲ್ಲಿ ಜನ ಹೈರಾಣಾಗಿದ್ದಾರೆ. ಕನಿಷ್ಠ ತಾಪಮಾನ 5.7 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ. ಆದರೆ ಮುಂದಿನ ಎರಡು ದಿನಗಳಲ್ಲಿ ಗಾಳಿಯ ದಿಕ್ಕಿನಲ್ಲಾಗುವ ಬದಲಾವಣೆಯಿಂದಾಗಿ ಕನಿಷ್ಠ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ದೆಹಲಿಯಲ್ಲಿ ಕೊರೆಯುವ ಚಳಿಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಬೆಳಿಗ್ಗೆ ಕನಿಷ್ಠ ತಾಪಮಾನವು 5.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸೋಮವಾರ ತಾಪಮಾನವು 8 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗುವ ಸಾಧ್ಯತೆಯಿದೆ.
11 ಮಹಿಳೆಯರ ಸಾವಿಗೆ ಕಾರಣ ಅಶೋಕ್ ಖೇಣಿ : ಬಂಧಿಸಿ ಎಂದು ಸರ್ಕಾರಕ್ಕೆ ಆಗ್ರಹ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








