ಅಮೇರಿಕನ್ ಯಾತ್ರೆ-ಅಮೇರಿಕಾದ ಈ ಪುಟ್ಟ ನಗರ ವರ್ಮೌಂಟ್ ನಾಸ್ತಿಕರ ತವರೂರು: Saakshatv yatrika episode 12
ನಾವು ನ್ಯೂಹ್ಯಾಂಪ್‌ಶೈರ್ ಮತ್ತು ವರ್ಮೌಂಟ್ ರಾಜ್ಯಗಳ ಪ್ರವಾಸಕ್ಕೆ ಹೋದಾಗ ನಮ್ಮ ಎರಡನೇ ದಿನದ ಪ್ರವಾಸ ಮುಗಿಸಿ ಹೋಟೇಲಿನ ಕಡೆ ತೆರಳುತ್ತಿದ್ದೆವು. ಮುಸ್ಸಂಜೆಯ ಹೊತ್ತಲ್ಲಿ ಚಿಕ್ಕದೊಂದು ಪಟ್ಟಣ ಸಿಕ್ಕಿತು. ನಮ್ಮ ತಾಳಗುಪ್ಪಾದಷ್ಟು ಚಿಕ್ಕ ಊರು. ಅಲ್ಲಿ ಒಂದು ಕಟ್ಟಡ ನೋಡ್ತಾ ಇದ್ದಹಾಗೇ ರಾಜ್ಯ ಸೌಧದ ಕಟ್ಟಡದ ಹಾಗೇ ಅನ್ನಿಸಿ ನಾವು ದಾಟಿದ್ದು ವರ್ಮೌಂಟ್ ರಾಜ್ಯದ ರಾಜಧಾನಿಯೇ ಅನ್ನುವ ಅನುಮಾನ ಬಂತು. ಸಂಜೆ ರೂಮಿಗೆ ಹೋಗಿ ಪರಿಶೀಲಿಸಿದಾಗ ಹೌದು. ನಾವು ದಾಟಿದ್ದು ಮೋಂಟ್‌ಪೀಲಿಯರ್ ಎಂಬ ಪುಟ್ಟ ರಾಜಧಾನಿಯನ್ನು. ಇದು ರಾಜಧಾನಿಗಳಲ್ಲೇ ಅತೀ ಚಿಕ್ಕ ನಗರ ಎಂಬ ಹೆಗ್ಗಳಿಕೆ ಪಡಿದಿದೆ. ಇಲ್ಲಿನ ಜನಸಂಖ್ಯೆ ಬರೀ 7000 ಚಿಲ್ಲರೆ. ಹೀಗೆ ಅನೀರೀಕ್ಷಿತವಾಗಿ ರಾಜಧಾನಿಯ ಮೂಲಕ ಹಾದು ಹೋಗಿದ್ದೆವು. Saakshatv yatrika episode 12

ವರ್ಮೌಂಟ್ ಎಂಬ ಸುಖೀರಾಜ್ಯದ ವಿಸ್ತೀರ್ಣ ಸುಮಾರು 24000 ಚದರ ಕಿಲೋಮೀಟರುಗಳು. ಜನಸಂಖ್ಯೆ ಬರೀ 6 ಲಕ್ಷ ಚಿಲ್ಲರೆ. ಅಲ್ಲಿನ ಸೀಮಿತ ತಿರುಗಾಟದಲ್ಲಿ ಅನೇಕ ಪುಟ್ಟ ಪುಟ್ಟ ಹಳ್ಳಿಗಳೂ ಇದ್ದುದರಲ್ಲೇ ತೃಪ್ತಿಪಟ್ಟು ಖುಷಿಯಿಂದಿರುವಂತೆ ತೋರುವ ಜನರೂ ಕಂಡರು. ಮತ್ತೊಂದು ವಿಶೇಷವೇನೆಂದರೆ ಅಮೆರಿಕಾದಲ್ಲೇ ಅತೀ ಹೆಚ್ಚು ಪ್ರತಿಶತ ನಾಸ್ತಿಕರಿರುವುದು (ಅಥವಾ ಯಾವ ಧರ್ಮದೊಂದಿಗೂ ತಮ್ಮನ್ನು ಗುರುತಿಸಿಕೊಳ್ಳದ) ಈ ರಾಜ್ಯದಲ್ಲೇ. ಇಲ್ಲಿನ ಮೂರನೇ ಒಂದಕ್ಕೂ ಜಾಸ್ತಿ ಜನ ಮತರಹಿತರು. ಇಲ್ಲಿ ನನಗೆ ಶ್ರೀಮಂತಿಕೆ ಕಾಣದಿದ್ದರೂ ತೃಪ್ತಿ ಕಂಡಿತು. ಅಮೆರಿಕಾವೆನ್ನುವ ಅಪ್ಪಟ ಬಂಡವಾಳಶಾಹಿ ದೇಶದಲ್ಲಿ ಸಮಾಜವಾದ ಇನ್ನೂ ಜೀವಂತವಾಗಿರುವ ಕೆಲವೇ ಪ್ರದೇಶಗಳಲ್ಲಿ ಇದೂ ಒಂದು.

ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷಯೀಯ ಚುನಾವಣೆಗೆ ಅಭ್ಯರ್ಥಿಯಾಗಲು ಸಿದ್ಧರಾಗಿ ಕೊನೆಗೆ ಬಿಡೆನ್ ಅವರಿಂದ ಸೋಲಲ್ಪಟ್ಟ ಸ್ಯಾಂಡರ್ಸ್ ಇದೇ ರಾಜ್ಯದವರು.
ಈ ರಾಜ್ಯ ಮೇಪಲ್ ಸಿರಪ್ಪಿಗೂ ಬಹಳ ಪ್ರಸಿದ್ಧ. ಅಂದರೆ ಮೇಪಲ್ ಮರದಿಂದ ಒಸರುವ ಸಿಹಿಯಾದ ಜೇನಿನಂತಹ ದ್ರವ. ಇದನ್ನು ಬೆಳಗಿನ ಉಪಾಹಾರಕ್ಕೆ ಪ್ಯಾನ್ ಕೇಕ್ (ದೋಸೆಯ ತಮ್ಮ) ಅಥವಾ ವಾಫಲ್ ಗೆ ಸೇರಿಸಿ ತಿನ್ನಲು ಬಹಳ ರುಚಿಕರ. ನಮ್ಮಕಡೆ ತೆಳ್ಳೇವು (ಮಲೆನಾಡ ಶೈಲಿಯ ದೋಸೆ) ಮತ್ತು ಜೋನಿಬೆಲ್ಲದ ಕಾಂಬಿನೇಶನ್ ಇದ್ದಂತೆ.

ಅಗಾಧ ಅರಣ್ಯ ಪ್ರದೇಶಗಳ ಹೊಂದಿರೋ ಈ ರಾಜ್ಯ ತನ್ನ ಪಶ್ಚಿಮದಲ್ಲಿ ಚಾಂಪ್ಲೈನ್ ಸರೋವರವನ್ನೂ ಅದರ ತೀರದಲ್ಲಿ ಸಂಪದ್ಭರಿತ ಕೃಷಿ ಭೂಮಿಯನ್ನೂ ಹೊಂದಿದೆ. ಅದರಾಚೆಗೆ ನ್ಯೂಯಾರ್ಕ್ ರಾಜ್ಯ ಬರುತ್ತದೆ. ಹಾಗೇ ಉತ್ತರದ ಭಾಗದಲ್ಲಿ ಕೆನಡಾವನ್ನೂ, ಪೂರ್ವದಲ್ಲಿ ನ್ಯೂ ಹ್ಯಾಂಪ್‌ಶೈರ್ ರಾಜ್ಯವನ್ನೂ, ದಕ್ಷಿಣದಲ್ಲಿ ಮ್ಯಾಸಚೂಸೆಟ್ಸ್ ರಾಜ್ಯವನ್ನು ಗಡಿಗಳಾಗಿ ಹೊಂದಿದೆ. ಈ ಪುಟ್ಟ ರಾಜ್ಯದ ಬಗ್ಗೆ ಹೇಳಲು ನನ್ನಲ್ಲಿ ಇನ್ನೇನೂ ಉಳಿದಿಲ್ಲ ನಿಮಗೆ ಅಮೆರಿಕಾದ ಪೂರ್ವ ಕರಾವಳಿಗೆ ಭೇಟಿಕೊಡುವ ಅಥವಾ ನೆಲೆಸುವ ಅವಕಾಶ ಸಿಕ್ಕರೆ ಖಂಡಿತಾ ಇಲ್ಲಿಗೊಮ್ಮೆ ಭೇಟಿ ಕೊಡಿ.
–ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ದಾಪುರ
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








