ಕೊರೊನಾ ಲಸಿಕೆ ವಿತರಣೆಯಲ್ಲಿ `ನಾವು ನಂಬರ್ ಒನ್’
ಬೆಂಗಳೂರು : ಫ್ರಂಟ್ ಲೈನ್ ವಾರಿಯರ್ಸ್ ಹಾಗೂ ಹೆಲ್ತ್ ವರ್ಕರ್ಸ್ ಗೆ ಕೊರೊನಾ ಲಸಿಕೆ ನೀಡುವಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮಂಜುನಾಥ್ ಪ್ರಸಾದ್ ಅವರು ಇಂದು ಮಾಣಿಕ್ ಶಾ ಪರೇಟ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನದ ಸಿದ್ಧತೆ ಹಾಗೂ ತಾಲೀಮು ವೀಕ್ಷಿಸಿದರು
. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಿಂದ ಕೋವಿಡ್ ಲಸಿಕೆ ಪಡೆದು, ಫ್ರಂಟ್ ಲೈನ್ ವಾರಿಯರ್ಸ್ ಹಾಗೂ ಹೆಲ್ತ್ ವರ್ಕರ್ಸ್ ಗೆ ಲಸಿಕೆ ನೀಡುವಲ್ಲಿ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ್ದೇವೆ.
ಈ ವಿಚಾರದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಸದ್ಯಕ್ಕೆ ಯಾರಿಗಂದ್ರೆ ಅವ್ರಿಗೆ ಲಸಿಕೆ ಕೊಡಲು ಆಗಲ್ಲ, ಹೆಲ್ತ್ ವರ್ಕರ್ಸ್ ಗೆ ಲಸಿಕೆ ಕೊಡಲು ಮಾತ್ರ ಅವಕಾಶ ಇದ್ದು, ಇಂದು ಭಾನುವಾರ ಕೂಡ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಇನ್ನು ಫ್ರಂಟ್ ಲೈನ್ ವರ್ಕರ್ಸ್ ಉಳಿದವರ ಲಿಸ್ಟ್ ಸಿದ್ಧತೆ ನಡೆಯುತ್ತಿದೆ. ಬಿಬಿಎಂಪಿ, ಪೆÇಲೀಸ್ ಹಾಗೂ ಕಂದಾಯ ಇಲಾಖೆ ಪಟ್ಟಿ ಪೂರ್ತಿಯಾಗಿ ತಯಾರಾಗುತ್ತಿದೆ.
20 ಸಾವಿರ ಸಿಬ್ಬಂದಿಗೆ ಲಸಿಕೆ ಈಗಾಗಲೇ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಿಂದಲೇ 17 ಸಾವಿರ ಲಿಸ್ಟ್ ತಯಾರಾಗಿದೆ ಎಂದು ಮಾಹಿತಿ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









