ಮಂಗಳೂರು: ನಗರದ ರಥಬೀದಿಯ ಜನನಿಬಿಡ ಪ್ರದೇಶದಲ್ಲಿ ಬೃಹತ್ ಗಾತ್ರದ ಅಶ್ವಥ ಮರವೊಂದು ನೆಲಕ್ಕೆ ಉರುಳಿದ ಪರಿಣಾಮ ಮರದ ಕೆಳಗ್ಗೆ ನಿಲ್ಲಿಸಿದ ವಾಹನಗಳು ಜಖಂ ಆಗಿದೆ.

ಮಂಗಳೂರು ನಗರದ ವೆಂಟರಮಣ ದೇವಾಯಲದ ಎದುರಿಗೆ ಇರುವ ಅಶ್ವಥಕಟ್ಟೆಯಲ್ಲಿನ ಮರಕ್ಕೆ ಹಲವು ವರ್ಷಗಳೇ ಕಳೆದಿದ್ದು ಪ್ರತಿನಿತ್ಯ ಪೂಜೆ, ಹಗಲಿನಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ಮರದ ಕೆಳಗೆ ಒಂದು ಜೆಸಿಬಿ, ನೀರಿನ ಟ್ಯಾಂಕರ್ ಮತ್ತು ಒಂದು ಕಾರಿನ ಮೇಲೆ ಮರ ಉರುಳಿ ಜಖಂಗೊಂಡಿವೆ.

ಹಗಲಿನ ಹೊತ್ತಿನಲ್ಲಿ ಘಟನೆ ಸಂಭವಿಸಿದರೆ ಹಲವು ವಾಹನಗಳ ಜತೆ ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳಿತ್ತು. ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರತೆರವು ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








