ನೇಪಾಳದ ಉಸ್ತುವಾರಿ ಪ್ರಧಾನಿ ಕೆ ಪಿ ಶರ್ಮಾ ಓಲಿ ಕಮ್ಯುನಿಸ್ಟ್ ಪಕ್ಷದಿಂದಲೇ ಉಚ್ಚಾಟನೆ..!
ನೇಪಾಳ: ನೇಪಾಳದ ಉಸ್ತುವಾರಿ ಪ್ರಧಾನಿ ಕೆ ಪಿ ಶರ್ಮಾ ಓಲಿಯವರನ್ನು ಕಮ್ಯುನಿಸ್ಟ್ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಹೌದು ಪಕ್ಷದ ಭಿನ್ನಮತೀಯ ಗುಂಪಿನ ಕೇಂದ್ರ ಸಮಿತಿ ಸಭೆ ಇಂತಹ ತೀರ್ಮಾನ ತೆಗೆದುಕೊಂಡಿದೆ.
ಅಯೋಧ್ಯೆ: ಮಸೀದಿಗೆ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರು..!
ನೇಪಾಳದ ಸಂಸತ್ತಿನ ವಿಸರ್ಜನೆಯ ನಂತರದ ರಾಜಕೀಯ ಬಿಕ್ಕಟ್ಟಿನಿಂದಾಗಿ ಕಮ್ಯುನಿಸ್ಟ್ ಪಕ್ಷದ ಭಿನ್ನಮತೀಯರ ಬಣವು ಈ ಹಿಂದೆ ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಆದೇಶ ನೀಡುವ ನಿರ್ಧಾರಕ್ಕೆ ವಿರುದ್ಧವಾಗಿ ಬೀದಿಗಿಳಿದು ಪ್ರತಿಭಟಿಸಿದ್ದು ಓಲಿಯನ್ನು ಪಕ್ಷದಿಂದ ಹೊರಹಾಕುವ ಬೆದರಿಕೆ ಹಾಕಿತ್ತು.
56 ಇಂಚು ಎದೆಯ ಮೋದಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ – ರಾಹುಲ್ ಗಾಂಧಿ..!
ಇದಕ್ಕೆ ಮುನ್ನ ಪ್ರಧಾನ ಮಂತ್ರಿಯ ನಿರ್ದೇಶನದ ಮೇರೆಗೆ ಕಳೆದ ವರ್ಷ ಡಿಸೆಂಬರ್ 20 ರಂದು ಸಂಸತ್ತನ್ನು ವಿಸರ್ಜಿಸಲಾಯಿತು. ಏಪ್ರಿಲ್ 30 ಮತ್ತು ಮೇ 10ರಂದು ಚುನಾವಣೆಗಳನ್ನು ಘೋಷಿಸಲಾಯಿತು. ಪ್ರತಿಪಕ್ಷಗಳು ಒಲಿಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೂ ಮಾಡಿವೆ, ಒಲಿ ಅಧಿಕಾರ ವಹಿಸಿಕೊಂಡಾಗಿನಿಂದ ನೇಪಾಳವು ಚೀನಾಕ್ಕೆ ಹತ್ತಿರವಾಗುತ್ತಿದ್ದು ಭಾರತದಿಂದ ದೂರ ಸರಿಯುತ್ತಿದೆ ಎಂಬ ಆರೋಪವೂ ಅವರ ಮೇಲಿದೆ. ಹೀಗಾಗಿಯೇ ಕಮ್ಯುನಿಸ್ಟ್ ಪಕ್ಷದಿಂದಲೇ ಅವರನ್ನ ಉಚ್ಛಾಟಿಸಲಾಗಿದೆ ಎನ್ನಲಾಗಿದೆ.
ಅಧಿಕಾರಾವಧಿಯಲ್ಲಿ ಟ್ರಂಪ್ ಹೇಳಿದ್ದೆಲ್ಲಾ ಬರೀ ಸುಳ್ಳಾ…? ಎಷ್ಟು ಸುಳ್ಳು ಹೇಳಿದ್ದಾರಂತೆ ಗೊತ್ತಾ…!
ರೈತರ ಮೇಲೆ ದಾಳಿ ನಡೆಸಿರುವ ಮೋದಿಯಿಂದ ದೇಶ ದುರ್ಬಲವಾಗ್ತಿದೆ: ರಾಹುಲ್ ಗಾಂಧಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








