56 ಇಂಚು ಎದೆಯ ಮೋದಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ – ರಾಹುಲ್ ಗಾಂಧಿ..!
ತಮಿಳುನಾಡಿನಲ್ಲಿ ಚುನಾವಣಾ ಸಮೀಪದಲ್ಲಿರುವ ಬೆನ್ನಲ್ಲೇ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಅವರು ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ್ದಾರೆ.
ಚೀನಾ ಪಡೆಗಳು ಭಾರತದ ಜಾಗವನ್ನು ಅತಿಕ್ರಮಿಸಿಕೊಂಡಿವೆ. ಆದರೆ 56 ಇಂಚು ಎದೆಯ ಮೋದಿಗೆ ನಮ್ಮ ನೆರೆಯ ದೇಶದ ಹೆಸರನ್ನು ಕೂಡ ಹೇಳಲು ಆಗುತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.
ಅಧಿಕಾರಾವಧಿಯಲ್ಲಿ ಟ್ರಂಪ್ ಹೇಳಿದ್ದೆಲ್ಲಾ ಬರೀ ಸುಳ್ಳಾ…? ಎಷ್ಟು ಸುಳ್ಳು ಹೇಳಿದ್ದಾರಂತೆ ಗೊತ್ತಾ…!
ಈರೋಡ್ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರವು 5-6 ಉದ್ಯಮಿಗಳಿಂದ ಮಾತ್ರವೇ ನಡೆಯುತ್ತಿದೆ. ಆದ್ರೆ ಮೋದಿ ಸರ್ಕಾರ ದೇಶದ ಭವಿಷ್ಯವಾಗಿರುವ ರೈತರು, ಕಾರ್ಮಿಕರು ಅಥವಾ ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗಾಗಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಭಾರತದ ಪ್ರದೇಶವನ್ನು ಚೀನೀ ಪಡೆಗಳು ಅತಿಕ್ರಮಿಸಿರುವುದನ್ನು ಇದೇ ಮೊದಲ ಬಾರಿ ಭಾರತದ ಜನರು ನೋಡುತ್ತಿದ್ದಾರೆ. ಇಂದಿನ ಬಗ್ಗೆ ಹೇಳುವುದಾದರೆ ಸಾವಿರಾರು ಚೀನೀ ಸೈನಿಕರು ನಮ್ಮ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ 56 ಇಂಚು ಎದೆಯ ಮೋದಿ ಚೀನಾ ಎಂಬ ಪದವನ್ನು ಕೂಡ ಹೇಳುತ್ತಿಲ್ಲ. ಇದು ನಮ್ಮ ದೇಶದ ವಾಸ್ತವ ಎಂದು ಟೀಕಿಸಿದ್ಧಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








