ದಾವಣಗೆರೆ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗುತ್ತಿರುವ ಸಾವುಗಳಿಗಿಂತ ಎಣ್ಣೆಗಾಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಎಣ್ಣೆ ಬೇಕು ಎಣ್ಣೆ ಎಂದು ಮದ್ಯಕ್ಕೆ ದಾಸರಾಗಿರುವ ಹಲವು ಮಂದಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇಂದು ಮತ್ತೊಬ್ಬ ಕೂಡ ಎಣ್ಣೆ ಸಿಗದ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಾವಣಗೆರೆಯ ಕೆಟಿಜೆ ನಗರದ ಆರ್. ರವಿಚಂದ್ರ ಎಂಬ 43 ವರ್ಷದ ವ್ಯಕ್ತಿ ಮದ್ಯ ಸಿಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾರ್, ವೈನ್ ಶಾಪ್ ಗಳೆಲ್ಲ ಬಂದ್ ಆಗಿವೆ. ತೀವ್ರ ಮದ್ಯವ್ಯಸನಿಯಾಗಿದ್ದ ರವಿ ಚಂದ್ರ ಕಳೆದ 9 ದಿನಗಳಿಂದ ಎಣ್ಣೆ ಸಿಗದೇ ತೀವ್ರ ಪರದಾಡುತ್ತಿದ್ದನಂತೆ. ಇದರಿಂದ ವಿಚಲಿತನಾಗಿದ್ದ ರವಿ ಚಂದ್ರ ಇಂದು ಬೆಳಗಿನ ಜಾವ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.








