ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರೆಲ್ಲರೂ ಹುತಾತ್ಮರು ಎಂದು ಸಂಸದ ಹಾಗೂ ಎಐಎಮ್ ಐಎಮ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಕೊರೊನಾಗೆ ಸಾವನ್ನಪ್ಪಿದ 9 ಜನರ ಅಂತ್ಯಕ್ರಿಯೆ ವೇಳೆ ಮೃತದೇಹಗಳಿಗೆ ಸ್ನಾನ ಮಾಡಿಸಲು ಹಾಗೂ ಕಫನ್ ಹೊದಿಸಲು ಬಿಟ್ಟಿರಲಿಲ್ಲ. ಮೃತದೇಹವನ್ನು ಮುಟ್ಟಲು, ಆಲಿಂಗಿಸಲು ಹಾಗೂ ಚುಂಬಿಸಲು ಕೂಡ ಅವಕಾಶ ನೀಡಲಾಗಿರಲಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿತ್ತು. ಈ ಬಗ್ಗೆ ಓವೈಸಿ ಟ್ವೀಟ್ ಮಾಡಿದ್ದು, ಯಾವ ವ್ಯಕ್ತಿಯ ಸಾವು ಸೋಂಕಿನಿಂದ ಆಗುತ್ತದೆಯೋ ಆ ವ್ಯಕ್ತಿ ಹುತಾತ್ಮನಾಗುತ್ತಾನೆ ಎಂದು ಇಸ್ಲಾಂನಲ್ಲಿ ಇದೆ. ಹೀಗೆ ಹುತಾತ್ಮರಾದವರಿಗೆ ಯಾವುದೇ ಕಫನ್ ಆಗಲಿ ಅಥವಾ ಸ್ನಾನದ ಅವಶ್ಯಕತೆಯಿಲ್ಲ. ಕೆಲವೇ ಕೆಲವು ಜನರು ಅಂತ್ಯಕ್ರಿಯೆಗೆ ಹೋದರೆ ಸಾಕು ಎಂದಿದ್ದಾರೆ.
ಇನ್ಸ್ಟಾಮಾರ್ಟ್ನಿಂದ ಭರ್ಜರಿ ಆಫರ್: ಐಫೋನ್ 17 ಪ್ರೊ, ಮ್ಯಾಕ್ಬುಕ್, ಸ್ಯಾಮ್ಸಂಗ್ ಸೇರಿ ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ರಿಯಾಯಿತಿ!
ಹಬ್ಬದ ಸೀಸನ್ನಲ್ಲಿ ಹೊಸ ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಅಥವಾ ಇಯರ್ಬಡ್ಸ್ ಖರೀದಿಸುವ ಪ್ಲಾನ್ನಲ್ಲಿದ್ದೀರಾ? ಹಾಗಾದರೆ ನಿಮಗೊಂದು ಸಿಹಿಸುದ್ದಿ. ಪ್ರಸಿದ್ಧ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ 'ಇನ್ಸ್ಟಾಮಾರ್ಟ್' ತನ್ನ ವರ್ಷದ ಅತಿದೊಡ್ಡ...








