ಕೊರೊನಾ ವಿರುದ್ಧದ ಹೋರಾಟಕ್ಕೆ ದೇಶಾದ್ಯಂತ ದೇಣಿಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದ್ರಲ್ಲಿ ಸೌತ್ ಇಂಡಿಯಾದ ಕಲಾವಿದರೂ ಹಿಂದೆ ಬಿದ್ದಿಲ್ಲ. ಟಾಲಿವುಡ್ ನ ಚಿರಂಜೀವಿ, ಪ್ರಭಾಸ್, ಅಲ್ಲು ಅರ್ಜುನ್, ಜೂ. ಎನ್ ಟಿಆರ್, ಮಹೇಶ್ ಬಾಬು, ಪವನ್ ಕಲ್ಯಾಣ್ ಮುಂತಾದವರು ನೆರವು ನೀಡೋದರ ಜೊತೆಗೆ ಜನರಿಗೆ ಧೈರ್ಯ ತುಂಬಿದ್ದರು. ಇದೀಗ ನಂದಮೂರಿ ಬಾಲಕೃಷ್ಣ, ಅಭಿಮಾನಿಗಳ ಪಾಲಿನ ಬಾಲಯ್ಯ ನೆರವಿಗೆ ಬಂದಿದ್ದಾರೆ. ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ – ಕೊರೊನಾ ಕ್ರೈಸಿಸ್ ಚಾರಿಟಿಗೆ 25 ಲಕ್ಷ ದೇಣಿಗೆ ಕೊಟ್ಟು, ಜನರ ಮನಸ್ಸು ಗೆದ್ದಿದ್ದಾರೆ. ಅಲ್ಲದೇ ಆಂಧ್ರ- ತೆಲಂಗಾಣ ಸರ್ಕಾರಗಳಿಗೆ 50 ಲಕ್ಷ ದೇಣಿಗೆ ನೀಡಿದ್ದಾರೆ.
ಇನ್ನು ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಗೆ ದೇಣಿಗೆ ನೀಡುವ ಕುರಿತು ಮೆಗಾಸ್ಟಾರ್ ಪ್ರತಿಕ್ರಿಯಿಸಿದ್ದು, ಟ್ವಿಟ್ವರ್ ನಲ್ಲಿ ಬಾಲಯ್ಯರ ನೆರವಿಗೆ ಧನ್ಯವಾದ ತಿಳಿಸಿದ್ದಾರೆ.







