ಇತ್ತೀಚೆಗೆ ಬದಲಾದ ಆರ್ಥಿಕ ನೀತಿಗಳಿಂದ ಕಂಗಾಲಾಗಿದ್ದ ಭಾರತೀಯ ಐಟಿ ವಲಯ ತನ್ನ ಹೊಸ ಉದ್ಯೋಗಿಗಳಿಗೆ ಶುಭ ಸೂಚನೆ ನೀಡಿದೆ. ಸದ್ಯ ಹೊಸದಾಗಿ ಆಯ್ಕೆಯಾಗೋ ಉದ್ಯೋಗಿಗಳಿಗೆ ಶುಕ್ರದೆಸೆ ಪ್ರಾರಂಭವಾಗಲಿದೆ ಎನ್ನುತ್ತಿವೆ ಸರ್ವೇಗಳು. ಈ ಹಿಂದೆ ವೇತನವು 2017 ಮತ್ತು 2019 ರ ನಡುವೆ ಸುಮಾರು 15.ರಷ್ಟು ಹೆಚ್ಚಾಗಿತ್ತು. ಇನ್ನೂ ಕಂಪನಿಗಳು ತಾತ್ಕಾಲಿಕ ಕೆಲಸಗಾರರನ್ನು ನೇಮಿಸಿಕೊಂಡಾಗ ಈ ವ್ಯತ್ಯಾಸವು ಸ್ಪಷ್ಟವಾಗಿ ಕಂಡು ಬಂದಿದೆ. ಅಲ್ಲಿ ಹೊಸ ಉದ್ಯೋಗಿಗಳ ಸಂಬಳವು 26% ನಷ್ಟು ಹೆಚ್ಚಾಗಿದೆ. ಬ್ರೋಕರೇಜ್ ಸಂಸ್ಥೆ ಎಮ್ಕೆ ಗ್ಲೋಬಲ್ ಪ್ರಕಾರ, ಐಟಿ ಕಂಪನಿಗಳು 2020-21ರ ಹಣಕಾಸು ವರ್ಷದಲ್ಲಿ ಹೊಸದಾಗಿ ಪದವೀಧರರನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಲೇ ಇರುತ್ತವೆ. ಅಮೇರಿಕಾ ಹಾಗೂ ಇತರೆ ದೇಶಗಳ ಕಂಪನಿಗಳಾದ ಟಿಸಿಎಸ್ ಮತ್ತು ಕಾಗ್ನಿಜೆಂಟ್ ಹೊಸಬರಿಗೆ ನೀಡುವ ಸಂಬಳವನ್ನು ಸುಮಾರು 30 ಪರ್ಸೆಂಟ್ ಹೆಚ್ಚಿಸಲು ನಿರ್ಧರಿಸಿವೆ. ಎಚ್ಸಿಎಲ್ ಟೆಕ್ನಾಲಜೀಸ್ 2021ರ ಹಣಕಾಸು ವರ್ಷದಲ್ಲಿ ಈಗ ನೀಡುತ್ತಿರುವುದರಲ್ಲಿ ಎರಡರಷ್ಟು ನೀಡಲು ಮನಸ್ಸು ಮಾಡಿದೆ ಎನ್ನಲಾಗಿದೆ. ಇನ್ನೂ ಹಲವು ವರ್ಷಗಳ ನಂತರ ಈ ರೀತಿಯ ಬದಲಾವಣೆ ಕಂಡುಬಂದಿದ್ದು ಯುವ ಹಾಗೂ ಹೊಸ ಉದ್ಯೋಗಿಗಳಿಗೆ ಶುಕ್ರದೆಸೆ ಪ್ರಾರಂಭವಾಗಿದೆ ಎನ್ನಲಾಗ್ತಿದೆ.
fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!
ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ..! ಆ ಒಂದು ಸೋಲು..! ಆ ಒಂದು ಪಂದ್ಯ..! ತನ್ನ ಪಾಲಿನ ಫಿಫಾ ವಿಶ್ವಕಪ್‍ನ ಕೊನೆಯ ಪಂದ್ಯವಾಗಿರಲಿಲ್ಲ. ಅದು...








