ಟಾಪ್ 5 ವೈರಲ್ ಸುದ್ದಿಗಳು : ಇತ್ತೀಚೆಗಿನ ನ್ಯೂಸ್..!
ಕೊರೊನಾ ರೂಲ್ಸ್ ವಿರೋಧಿಸಿ ಮೆಟ್ರೋದಲ್ಲಿ ಲವರ್ಸ್ ಮಾಡಿದ್ದೇನು ಗೊತ್ತಾ..?
ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಮೆಟ್ರೋದಲ್ಲಿ ಲವರ್ಸ್ ಮಾಡಿದ್ದೇನು ಗೊತ್ತಾ..? ಮಾಸ್ಕೋ : ಹೆಮ್ಮಾರಿ ಕೊರೊನಾ ವೈರಸ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಗಳು ಕಠಿಣಕ್ರಮಗಳನ್ನು ತೆಗೆದುಕೊಳ್ತಿವೆ. ಆದ್ರೆ ರಷ್ಯಾದ ಯೆಕಟೆರಿನ್ಬರ್ಗ್ ನಲ್ಲಿ ಸರ್ಕಾರ ವಿಧಿಸಿರುವ ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಯುವ ಜೋಡಿ ಮೆಟ್ರೋದಲ್ಲಿ ತುಟಿಗೆ ತುಟಿ ಸೇರಿಸಿದೆ. ಮೆಟ್ರೋದಲ್ಲಿ ಈ ಜೋಡಿ ಕಿಸ್ ಮಾಡೋದ್ರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
ಜಿಂಗ್ಗಿಚಕಾ..ಜಿಂಗ್… ಎಮ್ಮೆ ಡ್ಯಾನ್ಸ್ ಮಾಡ್ತೈತೆ ನೋಡಿ..!
ಜಿಂಗ್ಗಿಚಕಾ..ಜಿಂಗ್… ಎಮ್ಮೆ ಡ್ಯಾನ್ಸ್ ಮಾಡ್ತೈತೆ ನೋಡ್ರಿ..!
ಶಿಮ್ಲಾ : ಈ ಸೋಶಿಯಲ್ ಮಿಡಿಯಾನೇ ಹಾಗೇ ನೋಡಿ. ಪ್ರತಿ ದಿನ ಒಂದಲ್ಲಾ ಒಂದು ಆಸಕ್ತಿಕರ ವಿಡಿಯೋ ಅದರಲ್ಲಿ ವೈರಲ್ ಆಗುತ್ತಲೇ ಇರುತ್ತೆ.
ಅದರಂತೆ ಇದೀಗ ಎಮ್ಮೆ ಡ್ಯಾನ್ಸ್ ಆಡುತ್ತಿರೋ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಪಿಧಾ ಆಗಿದ್ದಾರೆ.
ಹೌದು..! ಹಿಮಾಚಲಪ್ರದೇಶದ ಗ್ರಾಮವೊಂದರಲ್ಲಿ ಮನೆಯೊಡತಿಯ ಜೊತೆ ಎಮ್ಮೆಯೊಂದು ತಾನು ಕುಣಿದು ಕುಪ್ಪಳಿಸುವ ಮೂಲಕ ನೆಟ್ಟಿಗರ ಮನಸೆಳೆದಿದೆ.
Watch a Buffalo dancing with its owner in a viral video! This undated viral video is believed to be shot in a one of the villages in #HimachalPradesh.#UserGeneratedContent | @manjeet_sehgal pic.twitter.com/DW9n4vTy9X
— IndiaToday (@IndiaToday) December 30, 2020
ವ್ಹಾರೆ ವ್ಹಾ..! ಏನ್ ಐಡಿಯಾ ಗುರು..!
ಮೆದುಳಿಗೆ ಕೆಲಸ ಕೊಟ್ರೆ ಎಂತಹ ಸಮಸ್ಯೆಗಳಿಗಾದ್ರೂ ಸುಲಭವಾಗಿ ಪರಿಹಾರವನ್ನ ಹುಡುಕಿಕೊಳ್ಳಬಹುದು ಅಂತಾ ಅಮೇರಿಕಾದ ಓರ್ವ ವ್ಯಕ್ತಿ ನಿರೂಪಿಸಿದ್ದಾರೆ.
ಚಳಿಕಾಲ ಬಂದಿದೆ ಅಂದ್ರೆ ಸಾಕು ಅಮೆರಿಕಾದಲ್ಲಿ ವಿಪರೀತವಾದ ಮಂಜು ಅಲ್ಲಿನವರನ್ನು ತೀವ್ರ ಸಂಕಷ್ಟಗಳಿಗೆ ದೂಡುತ್ತೆ.
ರಾತ್ರಿ ವೇಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಬೆಳಿಗ್ಗೆ ಎದ್ದಾಗ ಹಿಮದಲ್ಲಿ ಮುಳುಗಿ ಹೋಗಿರುತ್ತೆ. ಇತ್ತೀಚಿನ ಋತುವಿನಲ್ಲಿ ಹಿಮಪಾತವು ಅಮೆರಿಕನ್ನರನ್ನು ನಡುಗಿಸುತ್ತದೆ.
ಮನೆಯ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕೂಡ ಮಂಜಿನಲ್ಲಿ ಮುಳುಗಿ ಹೋಗಿರುತ್ವೆ. ಸ್ಥಳೀಯರು ನಿತ್ಯ ಗಂಟೆಗಟ್ಟಲೆ ಮಂಜು ತೆಗೆಯಬೇಕಾದ ಪರಿಸ್ಥಿತಿಯಲ್ಲಿರುತ್ತಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









