ನನ್ನ ಮತ್ತು ಶ್ರೀರಾಮುಲು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ವೈದ್ಯಕೀಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಸಚಿವ ಸಂಪುಟ ರಚನೆ ಆದ ಬಳಿಕ ಸಚಿವ ಶ್ರೀರಾಮುಲು ಮತ್ತು ಸಚಿವ ಸುಧಾಕರ್ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಈ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಹ ಘಟನೆ ಶುಕ್ರವಾರ ನಡೆದಿದೆ. ಪ್ರತಿನಿತ್ಯ ಹೆಲ್ತ್ ಬುಲೆಟಿನ್ ಓದಬೇಕು. ಆ ಜವಾಬ್ದಾರಿ ಶ್ರೀ ರಾಮುಲು ಸುಧಾಕರ್ ಬದಲಾಗಿ, ಸಿಎಂ ಯಡಿಯೂರಪ್ಪ ಮತ್ತು ಸಚಿವ ಸುರೇಶ ಅವರಿಗೆ ನೀಡಿದ್ದರು. ಆದರೆ ಶೀತಲ ಸಮರದ ವಿಷಯವನ್ನು ಸುಧಾಕರ್ ಅಲ್ಲಗಳೆದರು. ಇಂತಹ ಪರಿಸ್ಥಿತಿಯಲ್ಲಿ ಸಿಟ್ಟಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳ ಅಲ್ಲ. ನಮಗೆ ಜವಾಬ್ದಾರಿ ಇದೆ. ಸುಳ್ಳು ಸುದ್ದಿ ನೀಚ ರಾಜಕೀಯದ ಷಡ್ಯಂತ್ರವಾಗಿದೆ. ನನ್ನ ಮತ್ತು ಶ್ರೀರಾಮುಲು ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಗೆ ಪರಿಹಾರ ಹುಡುಕುತ್ತಿದ್ದೇವೆ.ನಾವಿಬ್ಬರು ಅಣ್ಣ- ತಮ್ಮರಂತೆ ಇದ್ದೇವೆ ಎಂದು ಸಚಿವ ಸುಧಾಕರ ಟ್ವೀಟ್ ಮಾಡಿದ್ದಾರೆ.
ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ
ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...








