ನನ್ನ ಮತ್ತು ಶ್ರೀರಾಮುಲು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ವೈದ್ಯಕೀಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಸಚಿವ ಸಂಪುಟ ರಚನೆ ಆದ ಬಳಿಕ ಸಚಿವ ಶ್ರೀರಾಮುಲು ಮತ್ತು ಸಚಿವ ಸುಧಾಕರ್ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಈ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಹ ಘಟನೆ ಶುಕ್ರವಾರ ನಡೆದಿದೆ. ಪ್ರತಿನಿತ್ಯ ಹೆಲ್ತ್ ಬುಲೆಟಿನ್ ಓದಬೇಕು. ಆ ಜವಾಬ್ದಾರಿ ಶ್ರೀ ರಾಮುಲು ಸುಧಾಕರ್ ಬದಲಾಗಿ, ಸಿಎಂ ಯಡಿಯೂರಪ್ಪ ಮತ್ತು ಸಚಿವ ಸುರೇಶ ಅವರಿಗೆ ನೀಡಿದ್ದರು. ಆದರೆ ಶೀತಲ ಸಮರದ ವಿಷಯವನ್ನು ಸುಧಾಕರ್ ಅಲ್ಲಗಳೆದರು. ಇಂತಹ ಪರಿಸ್ಥಿತಿಯಲ್ಲಿ ಸಿಟ್ಟಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳ ಅಲ್ಲ. ನಮಗೆ ಜವಾಬ್ದಾರಿ ಇದೆ. ಸುಳ್ಳು ಸುದ್ದಿ ನೀಚ ರಾಜಕೀಯದ ಷಡ್ಯಂತ್ರವಾಗಿದೆ. ನನ್ನ ಮತ್ತು ಶ್ರೀರಾಮುಲು ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಗೆ ಪರಿಹಾರ ಹುಡುಕುತ್ತಿದ್ದೇವೆ.ನಾವಿಬ್ಬರು ಅಣ್ಣ- ತಮ್ಮರಂತೆ ಇದ್ದೇವೆ ಎಂದು ಸಚಿವ ಸುಧಾಕರ ಟ್ವೀಟ್ ಮಾಡಿದ್ದಾರೆ.
ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್
ವಿಜಯಪುರ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ...








