ಕೇಂದ್ರದ ಟೊಳ್ಳು ಭರವಸೆಯಿಂದ ಜನರು ಬೇಸತ್ತಿದ್ದಾರೆ: ಮಾಯಾವತಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ 2021 ಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.ಇತ್ತ ವಿಪಕ್ಷಗಳು ಕಳಪೆ ಬಜೆಟ್ ಎಂದು ಬಣ್ಣಿಸುತ್ತಿವೆ. ಅದ್ರಂತೆ ಉತ್ತರಪ್ರದೇಶದ ಮಾಜಿ ಸಿಎಂ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಈ ಬಜೆಟ್ ವಿರುದ್ಧ ಕಿಡಿಕಾರಿದ್ದಾರೆ. ದೇಶದ ಬಡವರು, ರೈತರು ಮತ್ತು ದುಡಿಯುವ ವರ್ಗ ಸೇರಿದಂತೆ ಕೋಟ್ಯಂತರ ಜನರು ಸರ್ಕಾರದ ಆಕರ್ಷಕ ಮತ್ತು ಟೊಳ್ಳು ಭರವಸೆಯಿಂದ ಬೇಸತ್ತು ಹೋಗಿದ್ದಾರೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯವತಿ ಅವರು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಜೆಟ್-2021 | ಸಶಕ್ತ ದೇಶದ ಪರಿಕಲ್ಪನೆಗೆ ಪೂರಕ ಬಜೆಟ್: ಸಿ.ಟಿ.ರವಿ
ಈ ಕುರಿತು ಟ್ವೀಟ್ ಮಾಡಿರುವ ಅವರು ಸರ್ಕಾರ ಮೊದಲ ಘೋಷಿತ ನೀತಿಗಳನ್ನು ಜಾರಿಗೆಗೊಳಿಸಿದರೆ ಉತ್ತಮವಾಗಿರುತ್ತದೆ. ಇಂದಿನ ಬಜೆಟ್ ಯಾವುದೇ ರೀತಿಯಲ್ಲಿ ಬಡತನ, ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಣುತ್ತಿದೆಯೇ. ಎಂದು ಪ್ರಶ್ನಿಸಿದ್ದಾರೆ. ಅಲ್ದೇ ದೇಶದ ಕೋಟ್ಯಾಂತರ ಜನರು ಆಕರ್ಷಕ ಆಶ್ವಾಸನೆ ಮತ್ತು ಟೊಳ್ಳು ಭರವಸೆಗಳಿಂದ ಬೇಸತ್ತು ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ಪೀಡಿಸುತ್ತಿದೆ ಎಂದು ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಿಪ್ರೊ: 75 ವೈಸ್ ಪ್ರೆಸಿಡೆಂಟ್, 300 ಮ್ಯಾನೇಜರ್ ಗಳ ನಿರ್ಗಮನ – ಕಂಪನಿ ರಚನೆಯ ಮರುಸಂಘಟನೆಗೆ ಮುಂದಾದ ಸಿಇಒ
ಐಸ್ ಕ್ರೀಮ್ ಕೊಡಿಸುವುದಾಗಿ ಬಾಲಕನನ್ನ ಕರೆದೊಯ್ದ ಯುವಕ ಮಾಡಿದ ಕೆಲಸ ಏನ್ ಗೊತ್ತಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








