ಕಿಡ್ನಾಪ್ ಆಗಿದ್ದ ವ್ಯಕ್ತಿಗೆ ಕ್ವಾರಂಟೈನ್ ನಿಯಮ ಉಲ್ಲಂಘನೆಯಡಿ ದಂಡ..!
ಕೋವಿಡ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ತೈವಾನ್ ನಲ್ಲಿ ಓರ್ವ ವ್ಯಕ್ತಿಗೆ ದಂಡ ವಿಧಿಸಲಾಗಿತ್ತು. ಆದ್ರೆ ದಂಡ ವಿಧಿಸಿದ ನಂತರವೇ ಆತ ಕಿಡ್ನಾಪ್ ಆಗಿದ್ದ ವಿಚಾರ ಬಯಲಾಗಿದೆ. ಹೌದು ಚೆನ್ ಎಂಬ ಈ ವ್ಯಕ್ತಿ ಅಕ್ಟೋಬರ್ 2020ರಲ್ಲಿ ಹಾಂಕಾಂಗ್ನಿಂದ ತೈವಾನ್ ನಲ್ಲಿರುವ ತಮ್ಮ ಮನೆಗೆ ತೆರಳಲು ನಿರ್ಧಾರ ಮಾಡಿದ್ರು. ದೇಶಕ್ಕೆ ಮರಳಿದ ಬಳಿಕ ತಮ್ಮ ಸ್ನೇಹಿತನ ಮನೆಯಲ್ಲಿ 14 ದಿನಗಳ ಕ್ವಾರಂಟೈನ್ ಪೂರೈಸಲು ನಿರ್ಧರಿಸಿದ್ದರು. ಆದರೆ ಮಾರನೇ ದಿನವೇ ತಮ್ಮ ಸ್ನೇಹಿತನ ಮನೆಗೆ ನುಗ್ಗಿದ ಸಾಲಗಾರರು ಚೆನ್ ನನ್ನು ತಪ್ಪಾಗಿ ಗುರುತಿಸಿ ಆತನನ್ನು ಕಿಡ್ನಾಪ್ ಮಾಡಿದ್ದರು.
ಶಾಂತಿಯುತ ಪ್ರತಿಭಟನೆ ಬಲಿಷ್ಠ ಪ್ರಜಾಪ್ರಭುತ್ವದ ಲಕ್ಷಣ : ಅಮೆರಿಕ
ಚೆನ್ ನನ್ನು ಬಲವಂತವಾಗಿ ಎಳೆದೊಯ್ದ ಕಿಡ್ನಾಪರ್ಸ್ ಆತನ ಬಳಿ ದುಡ್ಡು ಸುಲಿಗೆ ಮಾಡಿ ಮತ್ತೆ ಆತನನ್ನು ವಾಪಸ್ ಸ್ನೇಹಿತನ ಮನೆಯತ್ತ ತಂದು ಬಿಟ್ಟಿದ್ದರು. ಇದಾದ ಬಳಿಕ ಕ್ವಾರಂಟೈನ್ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಚೆನ್ ಗೆ ಒಂದು ತೈವಾನೀಸ್ ಡಾಲರ್ ದಂಡ ವಿಧಿಸಲಾಗಿತ್ತು. ಬಳಿಕ ನ್ಯಾಯಾಯದಲ್ಲಿ ಹೋರಾಟ ಮಾಡಿದ ಚೆನ್ ತಾನು ಕಿಡ್ನಾಪ್ ಆಗಿದ್ದಾಗಿ ವಿವರಣೆ ಕೊಟ್ಟ ಬಳಿಕ ಆತನಿಗೆ ವಿಧಿಸಿದ್ದ ದಂಡವನ್ನು ವಜಾಗೊಳಿಸಲಾಗಿದೆ.
ಅಕ್ರಮ ಸಂಬಂಧ : ಮಹಿಳೆ , ತಾಯಿಯ ಕೊಲೆ : ಅಪ್ರಾಪ್ತೆಯ ಮೇಲೆ ಅತ್ಯಾಚಾರ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel