ಹೈದರಾಬಾದ್: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ್ದರೂ ಅನೇಕರು ಇನ್ನೂ ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಲೇ ಇದ್ದಾರೆ. ಪೊಲೀಸರು ಲಾಠಿ ಏಟು ಕೊಟ್ಟು.. ಕೈ ಮುಗಿದು ಬೇಡಿಕೊಂಡ್ರು.. ಇನ್ನೂ ಕೆಲವರು ಲಾಕ್ ಡೌನ್ ಗೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಂಧ್ರಪ್ರದೇಶದ ಅನಂತಪುರದ ಪೊಲೀಸರು ವಿನೂತನ ಪ್ರಯತ್ನ ನಡೆಸಿದ್ದಾರೆ.
ಕೊರೊನಾಸುರನಂತೆ ವೇಷ ಧರಿಸಿ, ಮನೆಯಿಂದ ಹೊರಬಂದರೆ ಕೊರೊನಾ ವೈರಸ್ ಎಂಬ ರಾಕ್ಷಸನ ಮುಷ್ಠಿಯಲ್ಲಿ ಸಿಲುಕುತ್ತೀರಿ ಅನ್ನುವ ಸಂದೇಶ ರವಾನಿಸುವ ಪ್ರಯತ್ನ ನಡೆಸಿದ್ದಾರೆ. ಥೇಟ್ ರಾಕ್ಷಸನಂತೆ ವಸ್ತ್ರ ಧರಿಸಿ ಅನಂತಪುರದ ಬೀದಿ ಬೀದಿಯಲ್ಲಿ ಸುತ್ತುತ್ತಾ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.








