ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಸಾರ್ವಜನಿಕ ಸಭೆಗಳು, ಸಮಾರಂಭಗಳನ್ನು ರದ್ದು ಮಾಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಮನವಿ ಮಾಡಲಾಗಿದೆ. ಅದರಂತೆ ಈ ಬಾರಿ ಬೆಂಗಳೂರು ಕರಗ ನಡೆಸುವುದು ಬೇಡ ಎಂದಿದ್ದ ರಾಜ್ಯ ಸರ್ಕಾರ, ಈಗ ತನ್ನ ನಿರ್ಧಾರವನ್ನ ಬದಲಿಸಿದೆ. ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ ಬಳಿಕ ಏಪ್ರಿಲ್ 8 ರಂದು ಬೆಂಗಳೂರು ಕರಗ ನಡೆಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಇಂದಿನ ಸಭೆಯಲ್ಲಿ ಕರಗ ನಡೆಸಲು, ಬೆಂಗಳೂರಿನ ಶಾಸಕರು ಹಾಗೂ ಸಂಸದರು ಮನವಿ ಮಾಡಿದ್ರು. ಇದಕ್ಕೆ ಓಕೆ ಎಂದ ಸಿಎಂ, ಬಹಳ ಎಚ್ಚರಿಕೆಯಿಂದ ಕರಗ ನಡೆಸಿ ಎಂದು ಸೂಚಿಸಿದ್ರು. ಸರಳವಾಗಿ ಕರಗ ನಡೆಯಬೇಕು. ಇಂದು ನಂಜನಗೂಡಿನಲ್ಲಿ ರಥೋತ್ಸವ ಹೇಗೆ ನಡೆಯಿತೋ, ಹಾಗೇ ಕರಗ ಮಹೋತ್ಸವ ನಡೆಯಬೇಕೆಂದು ಸೂಚಿಸಿದ್ದಾರೆ.
ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ನಡುವೆಯೇ ಹೊತ್ತಿಕೊಂಡಿದ್ದ ಸರ್ಕಾರ ಮತ್ತು ರಾಜಮನೆತನದ ನಡುವಿನ ಶೀತಲ ಸಮರ ಈಗ ಜನಸಾಮಾನ್ಯರ ಆಕ್ರೋಶಕ್ಕೆ ನಾಂದಿ ಹಾಡಿದೆ. ಅರಮನೆ ಬೋರ್ಡ್ ಸರ್ಕಾರದ್ದು,...








