ಲಾಕ್ ಡೌನ್ ನಡುವೆ ಬೆಂಗಳೂರು ಕರಗಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ !
1 min read
ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಸಾರ್ವಜನಿಕ ಸಭೆಗಳು, ಸಮಾರಂಭಗಳನ್ನು ರದ್ದು ಮಾಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಮನವಿ ಮಾಡಲಾಗಿದೆ. ಅದರಂತೆ ಈ ಬಾರಿ ಬೆಂಗಳೂರು ಕರಗ ನಡೆಸುವುದು ಬೇಡ ಎಂದಿದ್ದ ರಾಜ್ಯ ಸರ್ಕಾರ, ಈಗ ತನ್ನ ನಿರ್ಧಾರವನ್ನ ಬದಲಿಸಿದೆ. ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ ಬಳಿಕ ಏಪ್ರಿಲ್ 8 ರಂದು ಬೆಂಗಳೂರು ಕರಗ ನಡೆಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಇಂದಿನ ಸಭೆಯಲ್ಲಿ ಕರಗ ನಡೆಸಲು, ಬೆಂಗಳೂರಿನ ಶಾಸಕರು ಹಾಗೂ ಸಂಸದರು ಮನವಿ ಮಾಡಿದ್ರು. ಇದಕ್ಕೆ ಓಕೆ ಎಂದ ಸಿಎಂ, ಬಹಳ ಎಚ್ಚರಿಕೆಯಿಂದ ಕರಗ ನಡೆಸಿ ಎಂದು ಸೂಚಿಸಿದ್ರು. ಸರಳವಾಗಿ ಕರಗ ನಡೆಯಬೇಕು. ಇಂದು ನಂಜನಗೂಡಿನಲ್ಲಿ ರಥೋತ್ಸವ ಹೇಗೆ ನಡೆಯಿತೋ, ಹಾಗೇ ಕರಗ ಮಹೋತ್ಸವ ನಡೆಯಬೇಕೆಂದು ಸೂಚಿಸಿದ್ದಾರೆ.
buy cialis online without prescription