40 ವೀರ ಯೋಧರನ್ನ ದೇಶ ಕಳೆದುಕೊಂಡ ಕರಾಳ ದಿನಕ್ಕೆ ಇಂದಿಗೆ 2 ವರ್ಷ..! ವೀರ ಯೋಧರಿಗೊಂದು ಸಲಾಂ..!
ಇಂದು ಫೆಬ್ರವರಿ 14 ಎಲ್ಲೆಡೆ ಪ್ರೇಮಿಗಳ ದಿನದ ಕಲರವ ಹರಡಿದೆ. ಆದ್ರೆ ಭಾರತದ ಪಾಲಿಗೆ ಇಂದಿನ ದಿನ ಕರಾಳ ದಿನ. ಯಾಕಂದ್ರೆ 40 ವೀರ ಯೋಧರನ್ನ ಭಾರತೀಯರು ಕಳೆದುಕೊಂಡ ಕರಾಳ ದಿನ. ಈ ಕಹಿ ಘಟನೆಗೆ ಇಂದಿಗೆ 2 ವರ್ಷಗಳು ಕಳೆದಿವೆ. ಇಂದು ದೇಶಾದ್ಯಂತ ಹುತಾತ್ಮ ಯೋಧರಿಗೆ ರಾಜಕೀಯ ಮುಖಂಡರು, ಸಿನಿ ತಾರೆಯರು ಸಾಮಾನ್ಯ ಜನರು, ವಿವಿಧ ಕ್ಷೇತ್ರಗಳ ಗಣ್ಯರು, ಪ್ರಧಾನ ಮಂತ್ರಿ ನರೇಂದ್ರ ಮೋದಿ , ಸಿಎಂ ಬಿ. ಎಸ್ ಯಡಿಯೂರಪ್ಪ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಕ್ಷನಾ ಸಚಿವ ರಾಜನಾಥ್ ಸಿಂಗ್ ಹೀಗೆ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇಡೀ ದೇಶವೇ ಕಣ್ಣೀರಿಡುತ್ತಿದೆ. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಎರಡು ವರ್ಷಗಳಾಗಿದ್ದು ಹುತಾತ್ಮರಾದ CRPF ಯೋಧರಿಗೆ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಹೇಡಿ ಉಗ್ರರ ಪಾಪಕೃತ್ಯಕ್ಕೆ ಗಡಿಯಲ್ಲಿ ನಮ್ಮ ವೀರರು ಅಮರರಾಗಿದ್ದರು. ನರಿಬುದ್ಧಿ ಉಗ್ರರ ಈ ಕುಕೃತ್ಯದ ಫಲವಾಗಿ ನಮ್ಮ 40 ವೀರರು ಹುತಾತ್ಮರಾದ ದಿನವಿಂದು. ಪುಲ್ವಾಮಾದಲ್ಲಿ ನಡೆದಿದ್ದ ಈ ರಕ್ಕಸ ಕೃತ್ಯವನ್ನು ಇಡೀ ಭಾರತ ಎಂದೂ ಮರೆಯದು. ಇಂತಹ ನೋವಿನ ದಿನಕ್ಕೆ ಇವತ್ತಿಗೆ ಎರಡು ವರ್ಷ ತುಂಬಿದೆ. ಆದ್ರೆ 40 ಯೋಧರ ಬಲಿದಾನವನ್ನ ವ್ಯರ್ಥವಾಗಲು ಬಿಡಲಿಲ್ಲ ಭಾರತ. ಅಂದು ಭಾರತ ಕೊಟ್ಟ ಸರ್ಜಿಕಲ್ ಸ್ಟ್ರೈಕ್ ಪ್ರತ್ಯುತ್ತರಕ್ಕೆ ಪಾಕಿಸ್ತಾನ ಗಡಗಡ ನಡುಗಿಹೋಗಿತ್ತು. ಕನಸಲ್ಲೂ ಭಾರತದ ಸೇನೆ ಕಂಡ್ರೆ ಬೆವರುವಂತಹ ಉತ್ತರ ನೀಡಿತ್ತು. ಪಾಪಿ ಪಾಕಿಯರ ನೆಲಕ್ಕೆ ನುಗ್ಗಿ ಉಗ್ರರ ಅಡಗುತಾಣಗಳನ್ನೇ ನಿರ್ಣಾಮ ಮಾಡಿದ್ರು ನಮ್ಮ ಹೆಮ್ಮೆಯ ಸೈನಿಕರು. ಸರ್ಜಿಕಲ್ ಸ್ಟ್ರೈಕ್ ನಲ್ಲಿ 300 ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದರು. ಆದ್ರೂ ನಮ್ಮ ಸೈನಿಕರ ಜೀವದಾನದ ನೋವು ಹೆಚ್ಚಾಗಿ ಕಾಡುತ್ತದೆ.
2019ರ ಫೆಬ್ರವರಿ 14ರ ಶುಕ್ರವಾರ 40 ಸಿಆರ್‌ಪಿಎಫ್ ಯೋಧರಿದ್ದ ವಾಹನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ, ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೊರಾದಲ್ಲಿ ಉಗ್ರರು ದಾಳಿ ಮಾಡಿದ್ದರು. ಘಟನೆಯಲ್ಲಿ ನಮ್ಮ ವೀರ ಯೋಧರು ಹುತಾತ್ಮರಾಗಿದ್ದರು. ಅಂದು ಈ ವೀರರ ತ್ಯಾಗಕ್ಕೆ ಇಡೀ ದೇಶ ಕಣ್ಣೀರಿಟ್ಟಿತ್ತು. ಗಡಿಯಲ್ಲಿ ನಿಂತು ಚಳಿ ಬಿಸಿಲು ಮಳೆ ಗಾಳಿಎನ್ನದೇ ಕಣ್ಣಿಗೆ ಎಣ್ಣಿ ಬಿಟ್ಟು ಕರ್ತವ್ಯ ನಿರ್ವಹಿಸುವ ನಮಗಾಗಿ ಜೀವ ಕೊಡುವ ಪ್ರಾಣ ತ್ಯಾಗ ಮಾಡಿರುವ ನಮ್ಮ ಹೆಮ್ಮೆಯ ಸೈನಿಕರಿಗೊಂದು ಸಲಾಂ.
ಜಪಾನ್ ನಲ್ಲಿ ಪ್ರಬಲ ಭೂಕಂಪ – 120 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ
ದೇಶಕ್ಕಾಗಿ ಬಲಿದಾನ ಮಾಡಿದ ಅನೇಕ ಯೋಧರನ್ನು ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಅನೇಕ ಗಣ್ಯರು ನೆನೆದಿದ್ದಾರೆ.
ರಾಜ್ಯದ ನಾಯಕರು
ಸಿಎಂ ಬಿಎಸ್ ಯಡಿಯೂರಪ್ಪ – “ಪುಲ್ವಾಮಾದಲ್ಲಿ ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾದ #CRPF ವೀರಯೋಧರಿಗೆ ಗೌರವಪೂರ್ಣ ಶ್ರದ್ಧಾಂಜಲಿಗಳು” ಎಂದು ಯಡಿಯೂರಪ್ಪ ದಾಳಿಯಲ್ಲಿ ಮಡಿದ ಯೋಧರ ಸ್ಮರಣೆ ಮಾಡಿಕೊಂಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ – ದೇಶ ಕಾಯುವ ಯೋಧರಿಗೆ ಮತ್ತು ಅನ್ನ ಕೊಡುವ ರೈತರಿಗೆ ನಾವೆಲ್ಲರೂ ಋಣಿಯಾಗಿರಬೇಕು. ಜೈ ಜವಾನ್, ಜೈ ಕಿಸಾನ್. ಹುತಾತ್ಮ ಯೋಧರಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಗೌರವಪೂರ್ವಕ ನಮನಗಳು.” ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಯೋಧರನ್ನ ಸ್ಮರಿಸಿದ್ದಾರೆ. 
ಇನ್ನೂ ಇವರ ಹೊರತಾಗಿ ಡಿ.ಕೆ ಶಿವಕುಮಾರ್ , ಅರವಿಂದ್ ಲಿಂಬಾವಳಿ, ಲಕ್ಷ್ಮೀ ಹೆಬ್ಬಾಳ್ಕರ್ , ಜಗದೀಶ್ ಶೆಟ್ಟರ್, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನೂ ಹಲವರು ಈ ಕುರಿತಾಗಿ ಟ್ವೀಟ್ ಮಾಡಿ ವೀರ ಯೋಧರ ಬಲಿದಾನವನ್ನು ನೆನೆದಿದ್ದಾರೆ.
ರಾಷ್ಟ್ರ ನಾಯಕರು
ಕೇಂದ್ರ ಗೃಹ ಸಚಿವ ಅಮಿತ್ ಶಾ : “2019 ರಲ್ಲಿ ಈ ದಿನದಂದು ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಹುತಾತ್ಮರಿಗೆ ನಾನು ನಮಿಸುತ್ತೇನೆ. ಅವರ ಅಸಾಧಾರಣ ಧೈರ್ಯ ಮತ್ತುಪರಮ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ.” ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೇಂದ್ರ ಸಚಿವ ರಾಜನಾಥ್ ಸಿಂಗ್ – “2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿಗಳಾದ @crpfindia ಸಿಬ್ಬಂದಿಗೆ ನಾನು ಗೌರವ ಸಲ್ಲಿಸುತ್ತೇನೆ. ರಾಷ್ಟ್ರಕ್ಕೆ ಅವರು ಮಾಡಿದ ಸೇವೆ ಮತ್ತು ಅವರ ಪರಮ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಈ ದಾಳಿಯಿಂದ ನೊಂದಿರುವ ಅವರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ.” ಎಂದಿದ್ದಾರೆ. 
ರಾಹುಲ್ ಗಾಂಧಿ -“ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕೆಚ್ಚೆದೆಯ ಸೈನಿಕರಿಗೆ ಹಾಗೂ ಅವರ ಕುಟುಂಬಕ್ಕೆ ನಮನ, ದೇಶವು ನಿಮಗೆ ಋಣಿಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ – “ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ತಾಯಿ ಭಾರತಿಯ ಧೈರ್ಯಶಾಲಿ ಪುತ್ರರಿಗೆ ನಮನಗಳು ನಿಮ್ಮ ಅದಮ್ಯ ಧೈರ್ಯ, ಶೌರ್ಯಕ್ಕೆ ರಾಷ್ಟ್ರವು ಯಾವಾಗಲೂ ಋಣಿಯಾಗಿರುತ್ತದೆ.” ಎಂದು ಹೇಳಿದ್ದಾರೆ.








ಉತ್ತರಾಖಂಡದಲ್ಲಿ ಹಿಮಕುಸಿತ – 41 ಮೃತದೇಹಗಳು ಪತ್ತೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








