ದಿಢೀರ್ ಸೆಟ್ ದೋಸೆ
Saakshatv cooking recipes set dosa
ಬೇಕಾಗುವ ಸಾಮಗ್ರಿಗಳು
1 ಕಪ್ ರವೆ
1/2 ಕಪ್ ಅವಲಕ್ಕಿ
1/2 ಕಪ್ ಮೊಸರು
ಚಿಟಕಿ ಅಡುಗೆ ಸೋಡಾ
1.25 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ/ ತುಪ್ಪ
ಮಾಡುವ ವಿಧಾನ: Saakshatv cooking recipes set dosa
ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ನೀರಿನಲ್ಲಿ ತೊಳೆಯಿರಿ. ನಂತರ ಅದಕ್ಕೆ ರವೆ ಮತ್ತು ನೀರು ಸೇರಿಸಿ. ಅದಕ್ಕೆ ಮೊಸರು ಬೆರೆಸಿ. ಹತ್ತು ನಿಮಿಷ ನೆನೆಯಲು ಬಿಡಿ
ಬಳಿಕ ಮಿಕ್ಸಿಯಲ್ಲಿ ನುಣ್ಣಗಾಗುವಂತೆ ಅರೆಯಿರಿ.
ಅದಕ್ಕೆ ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ನೀರು ಸೇರಿಸಿ. ಉದ್ದಿನ ದೋಸೆ ಹಿಟ್ಟಿನ ಹದದಂತೆ ಇರಲಿ.
ಈಗ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಾವಲಿಗೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಸೆಟ್ ದೋಸೆಯಂತೆ ಸ್ವಲ್ಪ ಅಗಲ ಮಾಡಿ.
ಮುಚ್ಚಳ ಮುಚ್ಚಿ ಬೇಯಿಸಿ.
ಹತ್ತು ಸೆಕೆಂಡುಗಳ ನಂತರ ದೋಸೆಯ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ. ನಂತರ ದೋಸೆಯನ್ನು ತಿರುಗಿಸಿ ಹಾಕಿ. ಎರಡೂ ಬದಿಯೂ ಕಾಯಿಸಿ.
ದೋಸೆಯನ್ನು ತವೆಯಿಂದ ತೆಗೆದು, ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಸೇವಿಸಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕಾಮಾಲೆ/ಜಾಂಡೀಸ್ ಗೆ ನೈಸರ್ಗಿಕ ಮನೆಮದ್ದುಗಳು https://t.co/uD1YBhaq6L
— Saaksha TV (@SaakshaTv) February 10, 2021
ಸ್ಮಾಟ್ ಪೋನ್ ಸ್ಕ್ರಾಚ್ ಅನ್ನು ತೆಗೆದುಹಾಕಲು ಕೆಲವು ಸುಲಭ ಮಾರ್ಗಗಳು https://t.co/57kbEtaCIK
— Saaksha TV (@SaakshaTv) February 11, 2021