ಮಾಜಿ ರಾಜ್ಯಸಭಾ ಸದಸ್ಯ ಎಂ.ರಾಮಜೋಯಸ್ ನಿಧನಕ್ಕೆ ಶೋಭಾ ಕರಂದ್ಲಾಜೆ ಸಂತಾಪ
ಉಡುಪಿ: ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ರಾಜ್ಯಪಾಲರು ಹಾಗೂ ಬಿಜೆಪಿಯ ಪ್ರಮುಖ ಹಿತೈಷಿಗಳೂ ಆಗಿದ್ದ ಮಾಜಿ ರಾಜ್ಯಸಭಾ ಸದಸ್ಯ ಎಂ.ರಾಮಜೋಯಸ್ ಅವರು ವಿಧಿವಶರಾಗಿದ್ದಾರೆ. ಅವರಿಗೆ ಇಡೀ ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಅದರಂತೆ ಮಂಡಗದ್ದೆ ಶ್ರೀ ರಾಮ ಜೋಯಿಸ್ ಅವರ ನಿಧನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಂತಾಪ ಸೂಚಿಸಿದ್ದಾರೆ. ಜಾರ್ಖಂಡ್ ಮತ್ತು ಬಿಹಾರ್ ರಾಜ್ಯಗಳ ರಾಜ್ಯಪಾಲರಾಗಿ, ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟಿನ ಉಚ್ಚ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ, ಆತ್ಮೀಯರು ಹಾಗೂ ಮಾಜಿ ರಾಜ್ಯ ಸಭಾ ಸದಸ್ಯರಾದ ಮಂಡಗದ್ದೆ ಶ್ರೀ ರಾಮ ಜೋಯಿಸ ಇನ್ನಿಲ್ಲ.
ಮಾಜಿ ರಾಜ್ಯಸಭಾ ಸದಸ್ಯ ಎಂ.ರಾಮಜೋಯಸ್ ನಿಧನಕ್ಕೆ ಬೈರತಿ ಬಸವರಾಜ ಸಂತಾಪ
ಸಮಾಜಕ್ಕೆ ಮಾರ್ಗದರ್ಶಕರಾಗಿದ್ದು, ಹಲವಾರು ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದವರು ಶ್ರೀ ರಾಮ ಜೋಯಿಸರು. ಅವರು ರಾಜ್ಯ ಸಭಾ ಸದಸ್ಯರಾಗಿರುವ ಸಂದರ್ಭದಲ್ಲಿ ಸಂಸತ್ತಿನಲ್ಲಿರುವ ಎಲ್ಲ ಸಂಸ್ಕೃತ ಶ್ಲೋಕ ಹಾಗೂ ಬರಹಗಳನ್ನು ಭಾಷಾಂತರಿಸಿ, ಆ ಶ್ಲೋಕಗಳ ಭಾವಾರ್ಥಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದಾರೆ.
ಗುರುಸ್ವರೂಪರು ಆಗಿರುವ ಅವರ ನಿಧನ ಅತೀವ ದುಃಖವನ್ನು ತಂದಿದೆ, ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೆ ಅವರ ಕುಟುಂಬಸ್ಥರಿಗೆ, ಬಂಧು-ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.








